ಸುಂದರ ನಗರ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು

KannadaprabhaNewsNetwork |  
Published : Sep 26, 2024, 10:01 AM IST
25ಎಚ್ಎಸ್ಎನ್4 : ಹೊಳೆನರಸೀಪುರ ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯ ಆಯೋಜನೆ ಮಾಡಿದ್ದ ಪೌರ ಕಾರ್ಮಿಕ ದಿನಚಾರಣೆಯಲ್ಲಿ ಪೌರಕಾರ್ಮಿಕರು ಸಂಭ್ರಮಿಸಿದರು. | Kannada Prabha

ಸಾರಾಂಶ

ಹೊಳೆನರಸೀಪುರ: ಪಟ್ಟಣದ ನಾಗರಿಕರ ಆರೋಗ್ಯ ಹಾಗೂ ಸ್ವಚ್ಛ ಪರಿಸರದ ಜತೆಗೆ ಸುಂದರ ನಗರ ನಿರ್ಮಾಣದಲ್ಲಿ ಹಗಲು ರಾತ್ರಿ ಎನ್ನದೇ ಸದಾ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಕಾರ್ಯ ಅನನ್ಯವಾದುದ್ದು. ಅವರುಗಳ ಸೇವೆಯ ಗೌರವ ಸೂಚಕವಾಗಿ ೨೦೧೨-೧೩ರಲ್ಲಿ ೪೬ ಮನೆಗಳನ್ನು ನಿರ್ಮಿಸಿ ಕೊಡಲಾಗಿತ್ತು. ಮುಂದಿನ ದಿನಗಳಲ್ಲೂ ಇವರುಗಳ ಸೇವೆಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಭರವಸೆ ನೀಡಿದರು.

ಹೊಳೆನರಸೀಪುರ: ಪಟ್ಟಣದ ನಾಗರಿಕರ ಆರೋಗ್ಯ ಹಾಗೂ ಸ್ವಚ್ಛ ಪರಿಸರದ ಜತೆಗೆ ಸುಂದರ ನಗರ ನಿರ್ಮಾಣದಲ್ಲಿ ಹಗಲು ರಾತ್ರಿ ಎನ್ನದೇ ಸದಾ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಕಾರ್ಯ ಅನನ್ಯವಾದುದ್ದು. ಅವರುಗಳ ಸೇವೆಯ ಗೌರವ ಸೂಚಕವಾಗಿ ೨೦೧೨-೧೩ರಲ್ಲಿ ೪೬ ಮನೆಗಳನ್ನು ನಿರ್ಮಿಸಿ ಕೊಡಲಾಗಿತ್ತು. ಮುಂದಿನ ದಿನಗಳಲ್ಲೂ ಇವರುಗಳ ಸೇವೆಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಭರವಸೆ ನೀಡಿದರು. ಪಟ್ಟಣದ ಶಾಧಿಮಹಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ವತಿಯಿಂದ ಪುರಸಭೆ ಕಾರ್ಯಾಲಯದವರು ಆಯೋಜನೆ ಮಾಡಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು, ಅವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮತ್ತು ಪೌರ ಕಾರ್ಮಿಕ ಆರೋಗ್ಯ ರಕ್ಷಣೆ ಮತ್ತು ಪಿಂಚಣಿ ಒದಗಿಸುವ ಕಾರ್ಯದಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಪುರಸಭೆ ಮುಖ್ಯಾಧಿಕಾರಿ ಸಿ.ಡಿ.ನಾಗೇಂದ್ರ ಕುಮಾರ್‌ ಮಾತನಾಡಿ, ರಾಷ್ಟ್ರೀಯ ಹಬ್ಬಗಳಂತೆ ಪೌರ ಕಾರ್ಮಿಕರ ದಿನಾಚರಣೆಯಲ್ಲೂ ಎಲ್ಲರೂ ಸಂಭ್ರಮದಿಂದ ಭಾಗಿಯಾಗಬೇಕು. ಅವಿಸ್ಮರಣೀಯ ಸೇವೆ ನೀಡುವ ಪೌರ ಕಾರ್ಮಿಕರ ಕರ್ತವ್ಯಕ್ಕೆ ಮಿಗಿಲಾದ ಮತ್ತೊಂದು ಕೆಲಸವಿಲ್ಲ ಮತ್ತು ಈ ಮಹತ್ವದ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪೌರ ಕಾರ್ಮಿಕರಿಗೆ ನಿಮ್ಮೊಂದಿಗೆ ನಾವಿದ್ದೇವೆ ಹಾಗೂ ಅವರುಗಳ ಸೇವೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ರಾಜ್ಯ ಸರ್ಕಾರವು ಪೌರ ಕಾರ್ಮಿಕರ ದಿನಾಚರಣೆ ಆಯೋಜನೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು. ನಾವುಗಳು ಕಂಡಂತೆ ಮನೆಗಳಲ್ಲಿ ಗೃಹಣಿ ತಮ್ಮ ಮಕ್ಕಳನ್ನು ಬೆಳಗ್ಗೆ ಶಾಲೆಗೆ ಕಳುಹಿಸುವ ತನಕ ಆಕೆ ತೋರುವ ಕಾಳಜಿ ಜತೆಗೆ ಕೆಲಸದ ಒತ್ತಡ ಕಂಡಿದ್ದೇವೆ. ಆದರೆ ಪೌರ ಕಾರ್ಮಿಕ ಮಹಿಳೆ ಬೆಳಗ್ಗೆ ೫.೪೫ಕ್ಕೆ ಕೆಲಸಕ್ಕೆ ಹಾಜರಾಗುವ ಜತೆಗೆ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಿದ್ದತೆ ಮಾಡುವ ಅವರ ಕೆಲಸದ ಒತ್ತಡ ಉಹಿಸಲು ಸಾಧ್ಯವಿಲ್ಲ, ಆದರೆ ಮಹಿಳಾ ಪೌರ ಕಾರ್ಮಿಕರು ಮಾಡುತ್ತಾರೆ, ಇದು ಅವರ ಕರ್ತವ್ಯದಲ್ಲಿ ಬದ್ಧತೆ ಹಾಗೂ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ಇಂತಹ ನಿಸ್ವಾರ್ಥಿಗಳನ್ನು ನಮ್ಮ ಕುಟುಂಬ ಸದಸ್ಯರಂತೆ ಗೌರವಿಸೋಣ ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೭೦ಕ್ಕೂ ಹೆಚ್ಚು ಅಂಕ ಪಡೆದ ೩ ವಿದ್ಯಾರ್ಥಿನಿಯರು, ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಮತ್ತು ಎಲ್ಲಾ ಪೌರಕಾರ್ಮಿಕರಿಗೂ ನೆನಪಿನ ಕಾಣಿಕೆ ನೀಡಲಾಯಿತು ಹಾಗೂ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು. ದೀಪಾ ಪ್ರಾರ್ಥಿಸಿದರು ಹಾಗೂ ಅಧಿಕಾರಿ ರಮೇಶ್ ಸ್ವಾಗತಿಸಿ, ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪುರಸಭೆ ಮುಂಭಾಗದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹಾತ್ಮಗಾಂಧೀಜಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕ ಎಚ್.ಡಿ.ರೇವಣ್ಣ ಚಾಲನೆ ನೀಡಿದರು.

ಪುರಸಭಾಧ್ಯಕ್ಷ ಕೆ.ಶ್ರೀಧರ್‌ ಹಾಗೂ ಬಿಇಒ ಸೋಮಲಿಂಗೇಗೌಡ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ, ಮಾಜಿ ಪುರಸಭಾಧ್ಯಕ್ಷರಾದ ಜಿ.ಕೆ.ಸುದಾನಳಿನಿ ಹಾಗೂ ಜ್ಯೋತಿ ಎನ್., ಸದಸ್ಯರಾದ ಎ.ಜಗನ್ನಾಥ್, ಸೈಯದ್ ವಾಸಿಂ, ಎಚ್.ಟಿ.ಕುಮಾರಸ್ವಾಮಿ, ಟಿ.ಶಾಂತಿ, ಎಚ್.ಕೆ.ಪ್ರಸನ್ನ. ಹಾಗೂ ಎಚ್.ಆರ್‌. ಮಮತಾ ಕುಮಾರಿ, ಪುರಸಭೆ ಸಿಇಒ ಪಂಕಜಾ, ಪರಿಸರ ಎಂಜಿನಿಯರ್‌ ರುಚಿದರ್ಶಿನಿ, ಆರೋಗ್ಯಾಧಿಕಾರಿ ವಸಂತ್ ಕುಮಾರ್‌, ಮೇಸ್ತ್ರಿ ಮಾದಯ್ಯ, ಕರ ವಸೂಲಿಗಾರರಾದ ಅಬ್ಬಾಸ್, ಶೇಖರ್‌ ಇತರರಿದ್ದರು.

ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸುಭಾಷ್ ವೃತ್ತದ ಟಿ.ನಂಜಪ್ಪ ಕಾಂಪ್ಲೆಕ್ ಹತ್ತಿರ ಪೌರ ಕಾರ್ಮಿಕರ ಶುಭ ಕೋರುವ ಜತೆಗೆ ಪೌರಕಾರ್ಮಿಕರೊಂದಿಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದಾಗ ಪೌರ ಕಾರ್ಮಿಕರು ಸಂಸದರನ್ನು ಹೊತ್ತು ಕುಣಿದು ಸಂಭ್ರಮಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ