ಒಕ್ಕೂಟದ ಆರ್ಥಿಕ ಪ್ರಗತಿಗೆ ಸಹಕಾರ ಸಂಘ, ಉತ್ಪಾದಕರ ಪಾತ್ರ ಮಹತ್ವದ್ದಾಗಿದೆ: ಎಂ.ಕೆ.ಹರೀಶ್‌ಬಾಬು

KannadaprabhaNewsNetwork |  
Published : Aug 10, 2026, 02:00 AM IST
9ಕೆಎಂಎನ್ ಡಿ26 | Kannada Prabha

ಸಾರಾಂಶ

ಜಿಲ್ಲೆಯ ರೈತಾಪಿ ವರ್ಗ ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಅಧಿಕಾರಿಗಳ ವೈಪಲ್ಯದಿಂದಾಗಿ ಆರ್ಥಿಕ ಕುಂಠಿತವಾಗಿತ್ತು. ಒಕ್ಕೂಟವು ಕಳೆದ ಒಂದೂವರೆ ವರ್ಷಗಳಿಂದಿಚೆಗೆ ಗುಣಮಟ್ಟ ಹಾಗೂ ಆರ್ಥಿಕ ಪ್ರಗತಿ ಹೊಂದಲು ಸಹಕಾರ ಸಂಘಗಳ ಕಾರ್ಯವೈಖರಿ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಮೂಲಕ ಒಕ್ಕೂಟವು ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕಲು ಸಹಕಾರ ಸಂಘಗಳು ಮತ್ತು ಉತ್ಪಾದಕರ ಪಾತ್ರ ಮಹತ್ವದ್ದಾಗಿದೆ ಎಂದು ಮನ್ಮುಲ್ ಅಧ್ಯಕ್ಷ ಎಂ.ಕೆ.ಹರೀಶ್‌ಬಾಬು ತಿಳಿಸಿದರು.

ನಗರದ ಎಚ್.ಕೆ.ವಿ ನಗರದ ಶಿವಕನ್ವೆಷನ್‌ಹಾಲ್ ಕಲ್ಯಾಣ ಮಂಟಪದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉಪಕಚೇರಿ ವತಿಯಿಂದ ಆಯೋಜಿಸಿದ್ದ ಅಭಿನಂದನೆ ಹಾಗೂ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮದ್ದೂರು ತಾಲೂಕಿನ 202 ಹಾಲು ಉತ್ಪಾದಕರ ಸಂಘಗಳಲ್ಲಿ ದಿನನಿತ್ಯ 2.20 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ 13.50 ಲಕ್ಷ ಲೀಟರ್ ಒಕ್ಕೂಟಕ್ಕೆ ಹಾಲು ಸರಬರಾಜಾಗುತ್ತಿದೆ. ಸರಕಾರದ ಪ್ರೋತ್ಸಾಹ ಧನ, ರಾಸುವಿಮೆ, ಮ್ಯಾಟ್, ಹಾಲುಕರೆಯುವ ಯಂತ್ರ ಇನ್ನಿತರ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಜಿಲ್ಲೆಯ ರೈತಾಪಿ ವರ್ಗ ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಅಧಿಕಾರಿಗಳ ವೈಪಲ್ಯದಿಂದಾಗಿ ಆರ್ಥಿಕ ಕುಂಠಿತವಾಗಿತ್ತು. ಒಕ್ಕೂಟವು ಕಳೆದ ಒಂದೂವರೆ ವರ್ಷಗಳಿಂದಿಚೆಗೆ ಗುಣಮಟ್ಟ ಹಾಗೂ ಆರ್ಥಿಕ ಪ್ರಗತಿ ಹೊಂದಲು ಸಹಕಾರ ಸಂಘಗಳ ಕಾರ್ಯವೈಖರಿ ಕಾರಣವಾಗಿದೆ ಎಂದರು.

ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ಗುಣಮಟ್ಟದಲ್ಲಿ 7ನೇ ಸ್ಥಾನದಲ್ಲಿದ್ದ ತಾಲೂಕನ್ನು ಜಿಲ್ಲೆಯಲ್ಲೇ ಪ್ರಥಮ ಸ್ಥಾನಕ್ಕೇರಲು ಅಧಿಕಾರಿಗಳ ಹಾಗೂ ಹಾಲು ಉತ್ಪಾದಕರ ಕಾರ್ಯದರ್ಶಿಗಳು ಕಾರಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಸಿಗುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು ಎಂದರು.

570 ಮಂದಿ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರವನ್ನು ವಿತರಿಸುತ್ತಿದ್ದು, ಒಕ್ಕೂಟವು ಒಂದು ಕೋಟಿ ರೂಗಳನ್ನು ಸಬ್ಸಿಡಿ ದರದಲ್ಲಿ ಪಾವತಿಸಿದೆ. ಕಾರ್ಯದರ್ಶಿಗಳ ಲೋಪದೋಷ ಮತ್ತು ಅವ್ಯವಹಾರಗಳನ್ನು ತಡೆಯುವ ಸಂಬಂಧ ಪ್ರತಿ ಸಂಘಗಳಲ್ಲೂ ಪ್ಲಾಟ್ ಯಂತ್ರ, ಕಾಮನ್ ಸಾಪ್ಟ್ ವೇರ್ ಇನ್ನಿತರ ಯಂತ್ರೋಪಕರಣಗಳನ್ನು ಅಳವಡಿಸಿ ಸಂಘಗಳು ಭ್ರಷ್ಟಚಾರ ಮುಕ್ತದಿಂದ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಇದೇ ವೇಳೆ ಸಹಕಾರ ಸಂಘಗಳ ಹಾಲು ಉತ್ಪಾದಕರ ರಾಸುಗಳು, ಆಕಸ್ಮಿಕವಾಗಿ ಮರಣ ಹೊಂದಿರುವ ಮಾಲೀಕರಿಗೆ ಪರಿಹಾರ ಚೆಕ್ ವಿತರಣೆ, ನಿವೃತ್ತಿ ವೇತನ, ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಚೆಕ್ ಗಳನ್ನು ವಿತರಿಸಲಾಯಿತು. ಇದೇ ವೇಳೆ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು.

ಈ ವೇಳೆ ಉಪವಿಭಾಗದ ಉಪವ್ಯವಸ್ಥಾಪಕ ಮಂಜೇಶ್, ವ್ಯವಸ್ಥಾಪಕಿ ಪುಷ್ಪಲತಾ, ಅಧಿಕಾರಿಗಳಾದ ಮಂಜು, ಹರೀಶ್‌ಹೆಗಡೆ, ಭವ್ಯ, ಬೇಬಿ, ದಿಲ್ವಾರ್, ಹರ್ಷತ್, ಡಾ.ದೀಪಕ್, ಗೋವರ್ದನ್, ಹೊನ್ನೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಸೂಚನೆ ರದ್ದುಪಡಿಸದಿದ್ದರೆ ಬೃಹತ್‌ ಹೋರಾಟ ಅನಿವಾರ್ಯ: ಬಿ.ಬಿ. ನಿಂಗಯ್ಯ
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲೇ ನಡೆಯಲಿ