ಕನ್ನಡಪ್ರಭ ವಾತೆ೯ ಕೊಳ್ಳೇಗಾಲ
ಅವರು ಮಾನಸ ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ಈಸಂಸ್ಥೆ ಬೋಧಕರಿಗೆ ಇನ್‌ಸ್ಪೈರಿಂಗ್ ಅವಾರ್ಡ್ ನೀಡುವುದು ನನಗೆ ಇಷ್ಟವಾಯ್ತಿ. ಸರ್ಕಾರ ಉಚಿತ ಸೌಲಭ್ಯಗಳನ್ನು ಪ್ರಸ್ತುತ ನಿಲ್ಲಿಸಿ ಉಚಿತ ಶಿಕ್ಷಣ ಉಚಿತ ಆರೋಗ್ಯ ಸೌಲಭ್ಯಗಳನ್ನು ನೀಡಿದಲ್ಲಿ ದೇಶ ಖಂಡಿತ ಅಭಿವೃದ್ಧಿಯತ್ತ ಸಾಗಲಿದೆ. ನಮ್ಮ ದೇಶದ ಮಕ್ಕಳ ಬುದ್ಧಿವಂತಿಕೆ ಸಂಸ್ಕೃತಿ ನಾನು ಸುತ್ತಿದ 25 ದೇಶಗಳಲ್ಲೂ ಕಂಡಿಲ್ಲ, ಪ್ರಸ್ತುತ 30 ವರ್ಷಗಳಲ್ಲಿ ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಯಾರ ಮನೆಯನ್ನು ಯಾವ ಸಮಸ್ಯೆಯನ್ನು ಬೇಕಾದರೂ ಹುಡುಕಬಹುದು, ಚೈನಾದೇಶ ತನ್ನ ಬುದ್ಧಿ ಕೌಶಲ್ಯದಿಂದ ಜಗತ್ತಿಗೆ ಮುಂದುವರಿದ ದೇಶವಾಗಿದೆ. ಇಂದು ನೊಬೆಲ್
ಪ್ರಶಸ್ತಿ ಪಡೆದಿರುವ ಸಾಧಕರು ಕೂಡ ಬಹಳ ಕಡು ಬಡತನದಿಂದ ಬಂದವರಾಗಿದ್ದಾರೆ ವಿದ್ಯೆ ಬುದ್ಧಿವಂತರ ಸ್ವತ್ತು. ಅಂತಹ ವಿದ್ಯೆ ಸಂಸ್ಕಾರವನ್ನು ಮಾನಸ ಶಿಕ್ಷಣ ಸಂಸ್ಥೆ ನೀಡುತ್ತಿದೆ ಎಂದರು.ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಹಿರಿಯ ಪತ್ರಕತ೯ರೂ ಆದ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ,
ನಾಡಿನ ಹೆಸರಾಂತ ಸಾಧಕರಿಗೆ ಮಾನಸ ಶಿಕ್ಷಣ ಸಂಸ್ಥೆ ಮಾನಸ ಪ್ರಶಸ್ತಿ ನೀಡಿ ಈ ಸಂಸ್ಥೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಮಂಜುನಾಥ ಪ್ರಸನ್ನರವರು ಮಾತನಾಡಿ, ಆಧುನಿಕ ಯುಗದಲ್ಲಿ ವಿದ್ಯಾಥಿ೯ಗಳ ಜ್ಞಾನದ ವೇಗ ಹೆಚ್ಚಬೇಕು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮಾನಸ ಶಿಕ್ಷಣ ಸಂಸ್ಥೆ ಜಿಲ್ಲಾದ್ಯಂತ ತನ್ನ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಬೇಕು, ತಂತ್ರಜ್ಞಾನ ಮುಂದುವರೆಯುತ್ತಿರುವ ಹಿನ್ನೆಲೆ ಯುವ ಪೀಳಿಗೆಯೂ ಇದಕ್ಕೆ ಒಗ್ಗಿಕೊಳ್ಳಬೇಕು, ಶಿಕ್ಷಣ ಹುಲಿ ಹಾಲಿದ್ದಂತೆ ಎಂದು ಬಾಬ ಸಾಹೇಬರು ಉಲ್ಲೀಖಿಸಿದ್ದಾರೆ, ಅದರಂತೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಪೈಪೋಟಿ ಯುಗದಲ್ಲಿ ವಿದ್ಯಾಥಿ೯ಗಳು ಸಾಧಕರಾಗಬೇಕು ಎಂದರು.
ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ನಾಗರಾಜು ಕಾರ್ಯದರ್ಶಿಗಳಾದ ಡಾ.ಎಸ್.ದತ್ತೇಶ್ ಕುಮಾರ್‌ರವರು ಕಳೆದ 30 ವರ್ಷಗಳಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಕ್ಷರದ ಜೊತೆಗೆ ಅನ್ನ ದಾಸೋಹ ಮಾಡುತ್ತಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಸಂಸ್ಥೆ ಬೆಳವಣಿಗೆ ನಿಟ್ಟಿನಲ್ಲಿ ನಾನು ಸಹಾ ಕೈಜೋಡಿಸುವೆ, ಇದೊಂದು ಮೌಲ್ಯಯುತ ಶಿಕ್ಷಣ ಸಂಸ್ಥೆ ಎಂದರು.
ಈ ಸಂಸ್ಥೆಯಲ್ಲಿ ಬೋಧಕ ಬೋಧಕೇತರರನ್ನೆಲ್ಲ ಸ್ವಾಗತಿಸುತ್ತಿರುವುದು ಅಭಿನಂದನಾರ್ಹ, ದ್ಯಾನದ ಮೂಲಕ ನಾವು ಸಕಲವನ್ನು ಗಳಿಸಬಹುದು ಮಾನಸ ಶಿಕ್ಷಣ ಸಂಸ್ಥೆ ವಿದ್ಯೆ, ಅನ್ನ, ಉದ್ಯೋಗ ಎಲ್ಲವನ್ನು ನೀಡುತ್ತಿದೆ ಬಡತನವನ್ನು ನಾವೆಲ್ಲರೂ ಸ್ವೀಕರಿಸಬೇಕು ಸಮ ಸಮಾಜವನ್ನು ನಿರ್ಮಿಸಬೇಕು ಅಶೋಕನ ಶಾಂತಿ ಹೊಂದಬೇಕು, ಬಸವಣ್ಣನವರ ಸಮಾನತೆ ಮೈಗೂಡಿಸಿಕೊಳ್ಳಬೇಕು ಎಂದರು.