ಕನ್ನಡಪ್ರಭ ವಾರ್ತೆ ಮೂಡಲಗಿ
ದೇಶದ ಸುಧಾರಣೆಯ ಮುಂಚೂಣಿಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಮಹತ್ವವಾದದ್ದು. ಗ್ರಾಮೀಣ ಮಟ್ಟದಲ್ಲಿ ಮಹತ್ತರವಾಗಿ ಕೆಲಸ ಮಾಡುತ್ತಿರುವ ಗ್ರಾಪಂಗಳು ಇನ್ನೂ ಹಲವಾರು ರೀತಿಯಲ್ಲಿ ಬದಲಾವಣೆಯ ಹಂತಗಳ ಮುಖಾಂತರ ಸುಧಾರಣೆ ತರಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಗೈಬು ಜೈನೆಖಾನ ಹೇಳಿದರು.ತಾಲೂಕಿನ ಯಾದವಾಡದ ಗ್ರಾಪಂ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಮೂಡಲಗಿ ತಾಲೂಕು ಘಟಕದ ಎರಡನೇ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಗ್ರಾಮೀಣ ಜನರ ನಿರ್ದಿಷ್ಟ ಸಮಸ್ಯೆ ಪರಿಹರಿಸಲು, ಜೀವನಮಟ್ಟ ಸುಧಾರಿಸಲು, ಅವಕಾಶಗಳನ್ನು ಸೃಷ್ಟಿಸಲು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಬಡತನ ಮತ್ತು ನಿರುದ್ಯೋಗ ಕಡಿಮೆ ಮಾಡುವುದು, ಆರೋಗ್ಯ ಮತ್ತು ಶಿಕ್ಷಣ ಸುಧಾರಿಸುವುದು ಮುಂತಾದ ಕ್ಷೇತ್ರಗಳ ಸುಧಾರಣೆ ಮಾಡುವುದರ ಜೊತೆಗೆ ಗ್ರಾಪಂ ಸಿಬ್ಬಂದಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಜೀವನ ಮಟ್ಟ ಸುಧಾರಿಸಬೇಕಾಗಿದೆ. ಇದರಿಂದಾಗಿ ಸಾಮಾಜಿಕ ಅಸಮತೋಲನವನ್ನು ಕಡಿಮೆ ಮಾಡುತ್ತದೆ ಮತ್ತು ಅಭಿವೃದ್ಧಿ ಪ್ರಕ್ರಿಯೆ ವೇಗಗೊಳಿಸುತ್ತದೆ ಎಂದು ತಿಳಿಸಿದರು.
ಯಾದವಾಡ ಗ್ರಾಪಂ ಅಧ್ಯಕ್ಷ ಬಸವರಾಜ ವಿ.ಭೂತಾಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಪಂ ಸಿಬ್ಬಂದಿ ತಮ್ಮ ಕೆಲಸ ಕಾರ್ಯಗಳಲ್ಲಿ ಹಲವಾರು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗಳು ಸರ್ಕಾರದ ಮಟ್ಟದ ಚರ್ಚೆಗಳು ನಡೆಸುವಂತೆ ಸಂಘಟನಾತ್ಮಕ ಶಕ್ತಿಗಳು ಕ್ರಿಯಾಶೀಲಾಗಿರಬೇಕು ಹಾಗೂ ಅಂತಹ ಸಮಸ್ಯೆಗಳಿಗೆ ಗಮನಹರಿಸಲು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ಬರುವಂತೆ ನೋಡಿಕೊಳ್ಳುವಂತಾಗಬೇಕೆಂದರು.ಪಂಚಾಯಿತಿ ನೌಕರರ ಸಂಘದ ಮೂಡಲಗಿ ಘಟಕದ ಅಧ್ಯಕ್ಷ ರಮೇಶ ಹೋಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಮುಖ್ಯ ಅತಿಥಿಗಳಾಗಿ ಯಾದವಾಡ ಗ್ರಾಪಂ ಉಪಾಧ್ಯಕ್ಷ ಕಲ್ಮೇಶ ಗಾಣಗಿ, ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ, ಕಾರ್ಯದರ್ಶಿ ಬಾಳೇಶ ದುಂಡಾನಟ್ಟಿ, ರಾಮದುರ್ಗ ತಾಲೂಕು ಅಧ್ಯಕ್ಷ ವೀರಭದ್ರ ಕಂಪ್ಲಿ, ಗ್ರಾಪಂ ನೌಕರರ ಸಂಘದ ಹುಕ್ಕೇರಿ ತಾಲೂಕು ಅಧ್ಯಕ್ಷ ಮಲ್ಲಯ್ಯ ಮಠಪತಿ, ಕಾರ್ಯದರ್ಶಿ ಯಲ್ಲಪ್ಪ ನಾಯಿಕ, ಬೈಲಹೊಂಗಲ ತಾಲೂಕು ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸವದತ್ತಿ ಘಟಕದ ಅಧ್ಯಕ್ಷ ಕೇಶವ ದಾಸರ, ಅಥಣಿ ತಾಲೂಕು ಅಧ್ಯಕ್ಷ ಹನಮಂತ ಸತ್ತಿ, ರಾಮದುರ್ಗ ಘಟಕದ ಅಧ್ಯಕ್ಷ ಬಾಬು ಗೇನಾನಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ನಾ.ಮಿರ್ಜಿ, ಗೂಳಪ್ಪ ಹೊಸೂರ, ಸಿದ್ರಾಯಿ ಬಡಕುರಿ, ಗುಲಾಬ ಪೀರಜಾದೆ ಮುಂತಾದವರು ಇದ್ದರು.
ಸಭೆಯಲ್ಲಿ ಮೂಡಲಗಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು. ಗ್ರಾಪಂ ಮೂಡಲಗಿ ತಾಲೂಕು ಘಟಕದ ಅಧ್ಯಕ್ಷರಾಗಿ ರಮೇಶ ಬಸಪ್ಪ ಹೋಳಿ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಮಿರ್ಜಿ, ಉಪಾದಕ್ಷರಾಗಿ ಗೂಳಪ್ಪ ಹೊಸೂರ, ಸಿದ್ರಾಯಿ ಬಡಕುರಿ, ಖಜಾಂಚಿಯಾಗಿ ಗುಲಾಬ ಅ.ಫೀರಜಾದೆ, ಸಹ ಕಾರ್ಯದರ್ಶಿಯಾಗಿ ನಾರಾಯಣ ಗುಜನಟ್ಟಿ, ಪವಿತ್ರಾ ಮಾದೇವ ಮಾದರ ಅವಿರೋಧವಾಗಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಸುಮಿತ್ರಾ ತಿಮ್ಮಣ್ಣ ಮೇತ್ರಿ, ಮಹಾದೇವ ಬಸಪ್ಪ ಮಾದರ, ಸಿದ್ದಾರೂಢ ಪಾಂಡಪ್ಪ ಹುಲಕುಂದ, ಲಕ್ಷ್ಮಣ ಲಕ್ಕಪ್ಪ ಹಳ್ಳೂರ, ರಮೇಶ ಮೇತ್ರಿ, ಬಾಳೇಶ ಹ. ಶಿರಗಾಂವಿ, ಮಂಜುನಾಥ ಮರ್ದಿ, ರಮೇಶ ಕೆಂಪವ್ವಗೋಳ, ಮಾಂತೇಶ ಕುಂದರಗಿ, ಬಸವರಾಜ ಬಾಳಪ್ಪ ಬಾಪುಕುರಿ, ಬಂದವ್ವ ಹೊನಕುಪ್ಪಿ, ಇಂದಿರಾ ಗುರುಸಿದ್ದ ಶೆಕ್ಕಿ, ಚಂದ್ರಶೇಖರ ತುಬಾಕಿ, ಶಿವಯ್ಯ ದುಂಡಯ್ಯ ಅಂಬಲಿಮಠ, ರಾಜು ದೊಡಮನಿ, ಶಿವಾನಂದ ಹರಿಜನ , ಶಿವಲಿಂಗ ಪೂಜೇರಿ, ನಾಗಪ್ಪ ಮಾ. ತೆಳಗಡೆ ಅವರು ಆಯ್ಕೆಯಾದರು.