ಸವಣೂರು: ಬಸವಣ್ಣನವರ ತತ್ವ-ಸಿದ್ಧಾಂತಗಳ ಪ್ರಚಾರ ಹಾಗೂ ಸಮ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಬಸವರಾಜ ಹಡಪದ ಹೇಳಿದರು.
ಹಡಪದ ಅಪ್ಪಣ್ಣನವರು ಅಪ್ರತಿಮ ಭಕ್ತಿ ಮತ್ತು ಜ್ಞಾನವುಳ್ಳವರು. ಬಸವಣ್ಣನವರ ವಿಚಾರಗಳಿಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಅಂದಿನ ಕಾಲದ ಮೌಢ್ಯ ಹಾಗೂ ಜಾತಿ ಪದ್ಧತಿ ಧಿಕ್ಕರಿಸಿ, ಅಪ್ಪಣ್ಣ ಕೇವಲ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿರದೇ, ಅವರ ಜೀವದ ಒಡನಾಡಿಯಾಗಿದ್ದರು. 242 ವಚನಗಳನ್ನು ರಚಿಸಿದ್ದು ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಯ್ಯ ಹಿರೇಮಠ, ಉಡಚಪ್ಪ ದೊಡ್ಡಉಡಚಪ್ಪನವರ, ನಿಂಗಪ್ಪ ದೇವಸೂರ, ನೀಲಪ್ಪ ಹಡಪದ, ಶಂಭು ಹಡಪದ, ಅಶೋಕ ಯಲಿಗಾರ, ಎಲ್ಲಪ್ಪ ದೇವಗೇರಿ, ಮಂಜು ಕೊಪ್ಪದ, ಗಣೇಶ ಹಡಪದ, ಚನ್ನಪ್ಪ ಹಡಪದ, ಮಹಾಂತೇಶ ಹಡಪದ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಇತರರು ಇದ್ದರು.