ಕೊಪ್ಪಳ: ಸಂವಿಧಾನದ ಆಶಯಗಳನ್ನು ರಕ್ಷಿಸುವಲ್ಲಿ ಹಾಗೂ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕ ಉತ್ತರದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲ ಚನ್ನಬಸವರಾಜ ಎಫ್. ಕುದರಿಮೋತಿ ಹೇಳಿದರು.
ಬಳ್ಳಾರಿ ವಿಭಾಗದ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಸಂವಿಧಾನದ ಆಶಯ ಹಾಗೂ ಮಹತ್ವ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಡಿ. ಮಾತನಾಡಿದರು. ಪ್ರಾಂಶುಪಾಲೆ ಉಷಾದೇವಿ ಹಿರೇಮಠ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಬಿ. ಆನಂದಹಳ್ಳಿ, ಪ್ರಧಾನ ಕಾರ್ಯದರ್ಶಿ ಬಿ.ವಿ. ಸಜ್ಜನ್, ಹಿರಿಯ ವಕೀಲರಾದ ವಿ.ಎಂ. ಭೂಸನೂರಮಠ, ಆರ್.ಬಿ. ಪಾನಗಂಟಿ ಉಪಸ್ಥಿತರಿದ್ದರು.
ಪರಿಷತ್ ಉಪಾಧ್ಯಕ್ಷ ಎಸ್.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶರಣು ಸಾವರ್ಕರ್ ಸಂವಿಧಾನದ ಪೀಠಿಕೆ ಬೋಧಿಸಿದರು. ಕಿರಣಕುಮಾರ ಪವರ್ ಸ್ವಾಗತಿಸಿದರು. ಎಂ.ಎಸ್. ಅರೆಕೇರಿ ಕಾರ್ಯಕ್ರಮ ನಿರೂಪಿಸಿದರು. ಸುಭಾಷ್ ಬಂಡಿ ಹಾಗೂ ಆರ್.ಎಚ್. ಪೂಜಾರ್ ಅತಿಥಿಗಳ ಪರಿಚಯ ಮಾಡಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯಲಬುರ್ಗಾ ಮತ್ತು ಗಂಗಾವತಿ ಘಟಕಗಳಲ್ಲಿ ನಡೆದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ಮತ್ತು ಟ್ರೋಫಿ ನೀಡಲಾಯಿತು.