ಕನ್ನಡಪ್ರಭ ವಾರ್ತೆ ಬಾಗಲಕೋಟೆಹೆರಿಗೆ ಸಮಯದಲ್ಲಿ ಶುಶ್ರೂಷಕಿಯರ ಪಾತ್ರ ಅತಿ ಮುಖ್ಯವಾಗಿದೆ. ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾಯಿ ಮಗುವನ್ನು ಕಾಪಾಡುವುದು ಮುಖ್ಯ ಜವಾಬ್ದಾರಿಯಾಗಿದೆ ಎಂದು ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಗ್ಯಶ್ರೀ ಬೆಂಡಿಗೇರಿ ಹೇಳಿದರು.
ಬಿವಿವಿಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಸವ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶರಣಮ್ಮ ಬಂಟನೂರ ಹವಾಮಾನ ವೈಪರೀತ್ಯದ ಪರಿಹಾರ ಹಾಗೂ ಪ್ರಸವ ಸಮಯದಿಂದ ಹೆರಿಗೆಯಾಗಿ 6 ತಿಂಳವರೆಗೆ ತಾಯಿ ಮಗುವನ್ನು ರಕ್ಷಿಸುವಲ್ಲಿ ಕುಟುಂಬಸ್ಥರ ಪಾತ್ರ ಪ್ರಮುಖವಾಗಿರುತ್ತದೆ. ಇವೆಲ್ಲ ಸಂಗತಿಗಳನ್ನು ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಈ ಸಂದೇಶವನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.
ತೃತೀಯ ವರ್ಷದ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಹವಾಮಾನ ವೈಪರೀತ್ಯದ ಪರಿಹಾರದ ಬಗ್ಗೆ, ಶುಶ್ರೂಷಕಿಯರ ಮತ್ತು ಆಶಾಕರ್ಯಕರ್ತೆಯರ ಪಾತ್ರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಅಶೋಕ ಚಿತ್ತವಾಡಗಿ ಉಪಸ್ಥಿತರಿದ್ದರು. ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರು ಹಾಗೂ ಆಶಾಕರ್ಯಕರ್ತೆಯರು ಪಾಲ್ಗೊಂಡಿದ್ದರು. ತೃತೀಯ ವರ್ಷದ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿ ಸಚೀನ ಕಾಳಗಿ ಸ್ವಾಗತಿಸಿದಳು. ಸಂಗೀತಾ ಹೆಳವರ ವಂದಿಸಿದಳು.