ದೊಡ್ಡಬಳ್ಳಾಪುರ: ನಗರದ ಸರ್ಕಾರಿ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ನಡೆದ ದಾದಿಯರ ದಿನಾಚರಣೆಯಲ್ಲಿ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಕೆ.ನಾಗರತ್ನಮ್ಮ ಹಲವು ದಾದಿಯರನ್ನು ಸನ್ಮಾನಿಸಿ ಅಭಿನಂದಿಸಿದರು.
ಎಂತಹದ್ದೇ ಸನ್ನಿವೇಶ ಬಂದರೂ ಇನ್ನೊಬ್ಬರಿಗಾಗಿ ಸೇವೆ ಸಲ್ಲಿಸುವ ಇವರ ನಗುಮುಖದ ಸೇವೆಯೇ ರೋಗಿಗಳ ಪಾಲಿಗೆ ದೊಡ್ಡ ಧೈರ್ಯ, ಚೈತನ್ಯ ತರುತ್ತದೆ. ದಾದಿಯರ ಕೆಲಸ ಎಂದರೆ ಸುಲಭದ ಕೆಲಸವಲ್ಲ. ಬದುಕಿನ ಸಂಕಷ್ಟ ನುಂಗಿಕೊಂಡು ಈ ವೃತ್ತಿ ಆಯ್ಕೆ ಮಾಡಿಕೊಂಡು ಮತ್ತೊಬ್ಬರ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ ಎಂದರು. ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಮುಸಿಬಾ, ಚಂದ್ರಣ್ಣ, ಯಶೋಧಮ್ಮ, ಪ್ರೇಮದಾಸ, ಮಹಿಳಾ ಮುಖಂಡರಾದ ಮಹೇಶ್ವರಿ, ಮಂಜುಳಮ್ಮ, ಮಮತಾ, ಹಿರಿಯ ಕಲಾವಿದರಾದ ಪುಟ್ಟಸಿದ್ದಯ್ಯ, ವನಿತಾ, ಯೋಗೀಶ ಇದ್ದರು.