ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ಬಸವ ಭವನದಲ್ಲಿ ಕುಷ್ಟಗಿ ಕಸಾಪ ವತಿಯಿಂದ ನಡೆದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗಡಿ ಕನ್ನಡದ ಕಾರ್ಯಕ್ರಮಗಳನ್ನು ಮಾಡುವಲ್ಲಿ ತುಂಬಾ ಹಠವಾದಿಯಾಗಿದ್ದರು. ಅಂದುಕೊಂಡ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸುವತನಕ ಬಿಡುವ ವ್ಯಕ್ತಿಯಲ್ಲ, ಇವರು ಕನ್ನಡ ಕಟ್ಟುವ ಕಟ್ಟಾಳುಗಳಾಗಿ ಕೆಲಸ ಮಾಡಿದ್ದಾರೆ ಎಂದರು. ಅವರ ನೇತೃತ್ವದಲ್ಲಿ ನಮ್ಮ ತಾಲೂಕಿನಲ್ಲಿ ಮೂರು ಕಸಾಪ ಭವನ ನಿರ್ಮಾಣವಾಗಿವೆ. ಆಜೀವ ಸದಸ್ಯರನ್ನು ಹೆಚ್ಚು ಮಾಡುವಲ್ಲಿ ತುಂಬಾ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.ಸಾಹಿತಿ ಹನುಮೇಶ ಗುಮಗೇರಿ ಮಾತನಾಡಿ, ಅಂಗಡಿ ಸಾಹಿತ್ಯ ಬರೆದ ವ್ಯಕ್ತಿ ಅಲ್ಲ, ನೂರಾರು ಕವಿಗಳಿಗೆ ಸಾಹಿತಿಗಳಿಗೆ ಅವಕಾಶ ಒದಗಿಸಿಕೊಟ್ಟು ಸಾಹಿತ್ಯವನ್ನು ಸಂರಕ್ಷಣೆ ಮಾಡಲು ಮುಂದಾಗಿದ್ದ ಶ್ರೇಷ್ಟ ಹಾಗೂ ಸರಳ ಸಜ್ಜನಿಕೆಯ ಸಂಘಟಕ ಎಂದರು.
ಕುಷ್ಟಗಿ ಕಸಾಪ ಘಟಕದ ವತಿಯಿಂದ ರಾಜಶೇಖರ ಅಂಗಡಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ನಿರ್ಣಯಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ವಹಿಸಿದ್ದರು. ಕಾರ್ಯದರ್ಶಿ ಮಹೇಶ ಹಡಪದ, ಶರಣಪ್ಪ ಲೈನದ, ಪರಶಿವಮೂರ್ತಿ ದೋಟಿಹಾಳ, ಬಸವರಾಜ ದೇವರಮನಿ, ರವೀಂದ್ರ ಬಳಿಗಾರ, ರಹೀಮಾನ ಸಾಬ್ ದೋಟಿಹಾಳ, ವೀರೇಶ ಕರಡಿ ಸೇರಿದಂತೆ ಇತರರು ಇದ್ದರು.