ಲಕ್ಷಾಂತರ ಸಂಬಳಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಜನ ಸಿದ್ಧರಿರುವ ದಿನಗಳಲ್ಲಿ, ಬೆಂಗಳೂರಿನ ಸುರಕ್ಷತೆ ಮತ್ತು ಜೀವನ ಗುಣಮಟ್ಟಕ್ಕೆ ಮನಸೋತ ಐಐಟಿ ರೂರ್ಕಿ ಪದವೀಧರರೊಬ್ಬರು, ಹರ್ಯಾಣದ ಗುರುಗ್ರಾಮದಲ್ಲಿ ಸಿಕ್ಕಿದ್ದ ವಾರ್ಷಿಕ 32 ಲಕ್ಷ ರು. ಸಂಬಳದ ನೌಕರಿಯನ್ನೇ ತಿರಸ್ಕರಿಸಿ ಗಮನ ಸೆಳೆದಿದ್ದಾರೆ
ಗುರುಗ್ರಾಮ (ಹರ್ಯಾಣ): ಲಕ್ಷಾಂತರ ಸಂಬಳಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಜನ ಸಿದ್ಧರಿರುವ ದಿನಗಳಲ್ಲಿ, ಬೆಂಗಳೂರಿನ ಸುರಕ್ಷತೆ ಮತ್ತು ಜೀವನ ಗುಣಮಟ್ಟಕ್ಕೆ ಮನಸೋತ ಐಐಟಿ ರೂರ್ಕಿ ಪದವೀಧರರೊಬ್ಬರು, ಹರ್ಯಾಣದ ಗುರುಗ್ರಾಮದಲ್ಲಿ ಸಿಕ್ಕಿದ್ದ ವಾರ್ಷಿಕ 32 ಲಕ್ಷ ರು. ಸಂಬಳದ ನೌಕರಿಯನ್ನೇ ತಿರಸ್ಕರಿಸಿ ಗಮನ ಸೆಳೆದಿದ್ದಾರೆ. ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸ್ನೇಹಪ್ರಿಯಾ ಐಐಟಿ ರೂರ್ಕಿಯಲ್ಲಿ ಪದವಿ ಪಡೆದಿದ್ದಾರೆ
ಸ್ನೇಹಪ್ರಿಯಾ ಐಐಟಿ ರೂರ್ಕಿಯಲ್ಲಿ ಪದವಿ ಪಡೆದಿದ್ದು, ಡೇಟಾ ಸೈಂಟಿಸ್ಟ್ ಆಗಿದ್ದಾರೆ. ಅವರಿಗೆ ಗುರುಗ್ರಾಮದಲ್ಲಿ ವಾರ್ಷಿಕ 32 ಲಕ್ಷ ರು. ಸಂಬಳದ ಕೆಲಸ ಸಿಕ್ಕಿತ್ತು. ಆದರೆ ಬೆಂಗಳೂರಿನಲ್ಲೇ ಇರುವ ಉದ್ದೇಶದಿಂದ ಆ ಕೆಲಸವನ್ನು ತ್ಯಜಿಸಿದ್ದಾರೆ.
ಇನ್‌ಸ್ಟಾದಲ್ಲಿ ವಿಡಿಯೋ
ಈ ಬಗ್ಗೆ ಇನ್‌ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನಾನು ಬೆಂಗಳೂರನ್ನು ಬಿಟ್ಟು ಗುರುಗ್ರಾಮದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕಿತ್ತು. ಆದರೆ ಇಲ್ಲೇ ಉಳಿಯಲು ನಿರ್ಧರಿಸಿದೆ. ಬೆಂಗಳೂರು ಅವಳಿ ಮಳೆಬಿಲ್ಲುಗಳ ಮೂಲಕ ನನ್ನ ಸಂಶಯಗಳಿಗೆ ವಿದಾಯ ಹೇಳಿತು.
ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಹಲವಾರು ಸಲ ಭೇಟಿ ನೀಡಿದ್ದೇನೆ. ಆಗೆಲ್ಲ ಅಹಿತಕರ ಅನುಭವಗಳಾಗಿವೆ. ಆದರೆ ಬೆಂಗಳೂರಿನ ಬೆಚ್ಚನೆಯ ಅನುಭವ, ಸುರಕ್ಷತೆ ಮತ್ತು ಮನೆಯ ಭಾವನೆ ಹಣಕ್ಕಿಂತ ಹೆಚ್ಚು. ಕೆಲವೊಮ್ಮೆ ಅತ್ಯುತ್ತಮ ವೃತ್ತಿಜೀವನದ ನಿರ್ಧಾರವು ಅತ್ಯುನ್ನತ ಕೊಡುಗೆಯಾಗಿರುವುದಿಲ್ಲ. ನೆಮ್ಮದಿಯನ್ನು ಆಯ್ದುಕೊಳ್ಳಿ’ ಎಂದಿದ್ದಾರೆ.

