ಜೂ.4ರಂದು ಬಿಡುಗಡೆಯಾಗುತ್ತಿರುವ ‘ಪೆದ್ದಿ’ ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್‌ಚರಣ್‌ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್‌ ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.

ಪೆದ್ದಿಯಲ್ಲಿ ಕುಸ್ತಿ ಪಟು ಪಾತ್ರದಲ್ಲಿ ರಾಮ್‌ಚರಣ್‌ಅಮರಾವತಿ: ಜೂ.4ರಂದು ಬಿಡುಗಡೆಯಾಗುತ್ತಿರುವ ‘ಪೆದ್ದಿ’ ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್‌ಚರಣ್‌ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್‌ ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.

ಚಿತ್ರದಲ್ಲಿ ಪೆದ್ದಿ ಎಂಬ ಪೈಲ್ವಾನನ ಪಾತ್ರ ಮಾಡುತ್ತಿರುವ ಮೆಗಾ ಪವರ್‌ಸ್ಟಾರ್‌, ಆಫ್ರಿಕಾದ ಎಂಎಂಎ ಕುಸ್ತಿಪಟು ಕೆವಿನ್ ಕುಂಟಾ ಅವರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದು, ಅವರಿಗೆ ದಿನಕ್ಕೇ 2-4 ಲಕ್ಷ ರು. ಪಾವತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ನಿಜವೇ ಆದಲ್ಲಿ ಭಾರತೀಯ ನಟರೊಬ್ಬರ ಅಂಗರಕ್ಷಕ ಪಡೆಯುತ್ತಿರುವ ಬೃಹತ್‌ ಸಂಬಳ ಎನಿಸಿಕೊಳ್ಳುವುದು.

ಗಾಂಬಿಯಾದವರಾದ ಕೆವಿನ್ ಸದ್ಯ ಇಟಲಿ ನಿವಾಸಿಯಾಗಿದ್ದಾರೆ. ಮಾರ್ಷಲ್ ಆರ್ಟ್ಸ್‌ನ ವಿಧವಾದ ಎಂಎಂಎ ಸ್ಪರ್ಧೆಗಳಿಂದಲೇ ಪ್ರಸಿದ್ಧವಾಗಿರುವ ಇವರು, ಹಲವು ಗಣ್ಯರಿಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡುವ ಅನುಭವ ಹೊಂದಿದ್ದಾರೆ.