ಮದುವೆಯಾಗಿ 9ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲೇ ರಾಧಿಕಾ ಪಂಡಿತ್‌ ತನ್ನ ಗಂಡ ಯಶ್‌ ಬಗ್ಗೆ ಎಐ ಎಡಿಟ್‌ ಇರುವ ಫನ್ನಿ ವೀಡಿಯೋ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಹಲವು ಅವತಾರಗಳಲ್ಲಿ ಯಶ್‌ ಅವರ ಎಐ ಇಮೇಜ್‌ ಇದೆ

 ಸಿನಿವಾರ್ತೆ 

ಮದುವೆಯಾಗಿ 9ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲೇ ರಾಧಿಕಾ ಪಂಡಿತ್‌ ತನ್ನ ಗಂಡ ಯಶ್‌ ಬಗ್ಗೆ ಎಐ ಎಡಿಟ್‌ ಇರುವ ಫನ್ನಿ ವೀಡಿಯೋ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಹಲವು ಅವತಾರಗಳಲ್ಲಿ ಯಶ್‌ ಅವರ ಎಐ ಇಮೇಜ್‌ ಇದೆ. ಅದರ ಜೊತೆಗೆ ರಾಧಿಕಾ ಗಂಡ ಯಶ್‌ ಜೊತೆಗಿನ ತನ್ನ ನವಿರಾದ ಬಂಧವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಶಾಂತಿ ನೀಡುವ ವ್ಯಕ್ತಿ

‘ನನ್ನ ಪಾಲಿನ ಬಾಡಿಗಾರ್ಡ್‌, ಚಾಟ್‌ ಜಿಪಿಟಿ, ಶೆಫ್‌, ಪರ್ಸನಲ್‌ ಫೋಟೋಗ್ರಾಫರ್‌, ಡಿಜೆ, ಡಾಕ್ಟರ್‌, ಕ್ಯಾಲ್ಕುಲೇಟರ್‌ ಜೊತೆಗೆ ಶಾಂತಿ ನೀಡುವ ವ್ಯಕ್ತಿಯೂ ಆಗಿರುವ ಗಂಡ. ಆತನೇ ನನ್ನ ಸರ್ವಸ್ವ. ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ. ಹ್ಯಾಪಿ 9’ ಎಂದು ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಈ ರೊಮ್ಯಾಂಟಿಕ್‌ ಪೋಸ್ಟ್‌ ಟ್ರೆಂಡಿಂಗ್‌ ಆಗಿದೆ.

ನನಗೆಲ್ಲ ನೀನೇ ಎಂದ ರಾಧಿಕಾ ಪಂಡಿತ್‌

‘ನನ್ನ ಗಂಡ ನನ್ನ ಸರ್ವಸ್ವ. ನನ್ನ ಬಾಡಿಗಾರ್ಡ್‌, ನನ್ನ ಚಾಟ್‌ ಜಿಪಿಟಿ, ನನ್ನ ಚೆಫ್‌, ಪರ್ಸನಲ್‌ ಫೋಟೋಗ್ರಾಫರ್‌, ಡಿಜೆ, ಡಾಕ್ಟರ್‌, ಕ್ಯಾಲ್ಕುಲೇಟರ್‌, ನನ್ನ ಶಾಂತಿ ಎಲ್ಲವೂ..’

- ಹೀಗೆ ಡಿ.9ರಂದು ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಗಂಡನ ವಿವಿಧ ಅವತಾರಗಳನ್ನು ತೋರಿಸುವ ಎಐ ಇಮೇಜ್‌ ಜೊತೆಗೆ ಸಿಹಿಯಾದ ಮೆಸೇಜ್‌ ಅನ್ನು ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದಾರೆ. ಡಿ.9ಕ್ಕೆ ಯಶ್‌ -ರಾಧಿಕಾ ವಿವಾಹವಾಗಿ 9 ವರ್ಷಗಳಾಗಿವೆ.