ಬಾಲಿವುಡ್ ನಟಿ ಹ್ಯೂಮಾ ಖುರೇಷಿ, ಯಶ್‌ ನಟನೆಯ ‘ಟಾಕ್ಸಿಕ್‌’ನಲ್ಲಿ ನಟಿಸುತ್ತಿರುವುದನ್ನು ಅಧಿಕೃತವಾಗಿ ತಿಳಿಸಿದ್ದಾರೆ.   ‘ಅದೊಂದು ದೈತ್ಯ ಪ್ರೊಡಕ್ಷನ್‌. ಅಂಥಾ ಸಿನಿಮಾದಲ್ಲಿ ಯಶ್ ಅವರಂಥಾ  ಸ್ಟಾರ್‌, ಗೀತೂ ಅವರಂಥಾ ಕ್ರಿಯೇಟಿವ್‌ ನಿರ್ದೇಶಕಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ

ಸಿನಿವಾರ್ತೆ

ಬಾಲಿವುಡ್ ನಟಿ ಹ್ಯೂಮಾ ಖುರೇಷಿ, ಯಶ್‌ ನಟನೆಯ ‘ಟಾಕ್ಸಿಕ್‌’ನಲ್ಲಿ ನಟಿಸುತ್ತಿರುವುದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಇದೇ ವೇಳೆ ಸಿನಿಮಾ ಬಗ್ಗೆ ವಿವರ ನೀಡಿದ ಅವರು, ‘ಅದೊಂದು ದೈತ್ಯ ಪ್ರೊಡಕ್ಷನ್‌. 

ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ

ಅಂಥಾ ಸಿನಿಮಾದಲ್ಲಿ ಯಶ್ ಅವರಂಥಾ ದೊಡ್ಡ ಸ್ಟಾರ್‌, ಗೀತೂ ಮೋಹನ್‌ದಾಸ್‌ ಅವರಂಥಾ ಕ್ರಿಯೇಟಿವ್‌ ನಿರ್ದೇಶಕಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಇದೆ. ಯಶ್‌ ಹಾಗೂ ಗೀತೂ ಅವರು ಸೇರಿ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಇದೊಂದು ಕಾದು ನೋಡಬೇಕಾದ ಅಸಾಧಾರಣ ಸಿನಿಮಾ. ಊಹೆಗೂ ಮೀರಿದ ಸಿನಿಮ್ಯಾಟಿಕ್‌ ಅನುಭವವನ್ನು ಕಟ್ಟಿಕೊಡುವ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ’ ಎಂದಿದ್ದಾರೆ.

ದಕ್ಷಿಣ ಭಾರತೀಯ ಸಿನಿಮಾಗಳ ಬಗ್ಗೆ ಅಭಿಮಾನ

‘ನನಗೆ ದಕ್ಷಿಣ ಭಾರತೀಯ ಸಿನಿಮಾಗಳ ಬಗ್ಗೆ ಅಭಿಮಾನವಿದೆ. ಹೆಚ್ಚೆಚ್ಚು ಸೌತ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ತವಕವಿದೆ. ಆದರೆ ನನಗಿಷ್ಟವಾಗುವಂಥಾ ಪಾತ್ರಗಳು ಇಲ್ಲಿ ಸಿಗುತ್ತಿಲ್ಲ’ ಎಂದೂ ಹೂಮಾ ಹೇಳಿದ್ದಾರೆ.