ನಾನೂ ಯಶ್‌ ಎಲ್ಲರ ಹಾಗೇ ಜಗಳ ಆಡ್ತೀವಿ: ರಾಧಿಕಾ ಪಂಡಿತ್‌

| Published : May 30 2024, 12:53 AM IST / Updated: May 30 2024, 08:34 AM IST

ನಾನೂ ಯಶ್‌ ಎಲ್ಲರ ಹಾಗೇ ಜಗಳ ಆಡ್ತೀವಿ: ರಾಧಿಕಾ ಪಂಡಿತ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾನೂ ಯಶ್‌ ಜಗಳ ಆಡ್ತೀವಿ. ಸಂಸಾರದಲ್ಲಿ ಜಗಳ ನಾರ್ಮಲ್. ಆಮೇಲೆ ಪ್ಯಾಚ್‌ಅಪ್‌ ಮಾಡ್ಕೊಳ್ಳೋದರಲ್ಲಿ ಸಂಸಾರದ ಭವಿಷ್ಯ ಅಡಗಿರುತ್ತೆ ಎಂದು ರಾಮಾಚಾರಿ ಬೆಡಗಿ ರಾಧಿಕಾ ಪಂಡಿತ್‌ ಹೇಳಿದ್ದಾರೆ.

  ಸಿನಿವಾರ್ತೆ

‘ಜಗತ್ತಿನ ಎಲ್ಲಾ ದಾಂಪತ್ಯದಲ್ಲಿರುವಂತೆ ನಮ್ಮ ನಡುವೆಯೂ ವಾದ, ಜಗಳ ನಡೆಯುತ್ತಿರುತ್ತದೆ. ಸುದೀರ್ಘ ಸಂಬಂಧಗಳಲ್ಲಿ ಇದೆಲ್ಲ ಸಾಮಾನ್ಯ. ಆದರೆ ಕೊನೆಯಲ್ಲಿ ಆ ಜಗಳವನ್ನು ಸರಿಪಡಿಸಿಕೊಂಡು ಹೇಗೆ ಬದುಕುತ್ತೇವೆ ಅನ್ನುವುದು ಮುಖ್ಯ’.

- ಹೀಗೆ ಹೇಳಿರುವುದು ರಾಧಿಕಾ ಪಂಡಿತ್‌.

ಅಪರೂಪಕ್ಕೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆಗೆ ಕಿರು ಸಂವಾದ ನಡೆಸಿದ ನಟಿ ಯಶ್ ಜೊತೆಗಿನ ದಾಂಪತ್ಯದ ಕುರಿತು ಮಾತನಾಡಿದರು. ಜಗಳದ ಕುರಿತು ಅವರು, ‘ಜಗಳಕ್ಕಿಂತ ಜಗಳದ ನಂತರ ಹೇಗೆ ಪ್ಯಾಚ್‌ಅಪ್‌ ಮಾಡ್ಕೊಳ್ತೀವಿ ಅನ್ನೋದು ಮುಖ್ಯ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತದೆ. ಆದರೆ ಎಲ್ಲಾ ಮುಗಿದ ಮೇಲೆ ಇಗೋ, ಜಡ್ಜ್‌ಮೆಂಟ್‌ಗಳಿಗೆ ಜಾಗ ಇರಬಾರದು’ ಎಂದು ಹೇಳಿದ್ದಾರೆ.