ಎಡಿಹೆಚ್‌ಡಿ ಸಮಸ್ಯೆ ಇದೆ ಎಂದು ಘೋಷಿಸಿದ ಫಹಾದ್‌ ಫಾಸಿಲ್‌

| Published : May 30 2024, 12:48 AM IST / Updated: May 30 2024, 08:37 AM IST

ಎಡಿಹೆಚ್‌ಡಿ ಸಮಸ್ಯೆ ಇದೆ ಎಂದು ಘೋಷಿಸಿದ ಫಹಾದ್‌ ಫಾಸಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಡಿಎಚ್‌ಡಿ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಅತ್ಯಂತ ಅಗತ್ಯ. ನನಗೂ ಈ ಸಮಸ್ಯೆ ಇದೆ ಎಂದು ಖ್ಯಾತ ನಟ ಫಹಾದ್‌ ಫಾಸಿಲ್‌ ಹೇಳಿದ್ದಾರೆ.

  ಸಿನಿವಾರ್ತೆ

ಮಲಯಾಳಂ ನಟ ಫಹಾದ್ ಫಾಸಿಲ್ ತಮಗೆ ಎಡಿಹೆಚ್‌ಡಿ (ಅಟೆನ್ಷನ್‌ ಡಿಫಿಸಿಟ್‌ ಹೈಪರ್‌ಆಕ್ಟಿವಿಟಿ ಡಿಸಾರ್ಡರ್‌) ಸಮಸ್ಯೆ ಇದೆ ಎಂದು ಘೋಷಿಸಿದ್ದಾರೆ. ಈ ಸಮಸ್ಯೆ ಇರುವವರಿಗೆ ಏಕಾಗ್ರತೆ ಇರುವುದಿಲ್ಲ.

‘ಇತ್ತೀಚೆಗೆ ನರಕ್ಕೆ ಸಂಬಂಧಿಸಿದ ಈ ಸಮಸ್ಯೆ ಪತ್ತೆಯಾಗಿದೆ. ನನಗೀಗ 41 ವರ್ಷ ವಯಸ್ಸು. ಹದಿಹರೆಯದಲ್ಲೇನಾದರೂ ಈ ಸಮಸ್ಯೆ ಪತ್ತೆಯಾಗಿದ್ದರೆ ಇದನ್ನು ಗುಣಪಡಿಸಬಹುದಿತ್ತು. ಆದರೆ ಈ ವಯಸ್ಸಿನಲ್ಲಿ ಪರಿಹಾರ ಕಷ್ಟಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಈಗ ಎಡಿಹೆಚ್‌ಡಿ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕಬಹುದಷ್ಟೇ’ ಎಂದು ಫಹಾದ್‌ ಹೇಳಿದ್ದಾರೆ.

‘ಎಡಿಎಚ್‌ಡಿ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಅತ್ಯಂತ ಅಗತ್ಯ. ನನ್ನಂತಿರುವ ಎಷ್ಟೋ ಮಕ್ಕಳ ಮುಖದಲ್ಲಿ ನಾನು ನಗು ಮೂಡಿಸಲು ಸಾಧ್ಯವಾದರೆ, ನನಗೆ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ’ ಎಂದೂ ಫಹಾದ್‌ ತಿಳಿಸಿದ್ದಾರೆ.