ಸಾರಾಂಶ
ಹೃತಿಕ್, ಜ್ಯೂ. ಎನ್‌ಟಿಆರ್ ನಟನೆಯ ವಾರ್ 2 ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸ್ತಾರ?
ಸಿನಿವಾರ್ತೆ : ಧ್ರುವ ಸರ್ಜಾಗೆ ಬಾಲಿವುಡ್‌ನಿಂದ ದೊಡ್ಡ ಆಫರ್ ಬಂದಿದೆ ಎನ್ನಲಾಗಿದೆ. ಹೃತಿಕ್ ರೋಶನ್ ನಟನೆಯ ‘ವಾರ್ 2 ’ ಸಿನಿಮಾದಲ್ಲಿ ಹೃತಿಕ್ ರೋಷನ್ ಸಹೋದರನ ಪಾತ್ರದಲ್ಲಿ ನಟಿಸಲು ಧ್ರುವ ಸರ್ಜಾಗೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಹೃತಿಕ್ ರೋಷನ್, ಜಾನ್ ಅಬ್ರಾಹಂ, ಜ್ಯೂ. ಎನ್‌ಟಿಆರ್, ಕಿಯಾರ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಈ ಮಧ್ಯೆ ಧ್ರುವ ಸರ್ಜಾ ಕೂಡ ಈ ತಂಡ ಸೇರಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಹರ್ಷ ಉಂಟು ಮಾಡಿದೆ. ‘ವಾರ್ 2’ ಸಿನಿಮಾ ತಯಾರಿ ಭರದಿಂದ ನಡೆಯುತ್ತಿದ್ದು, ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. 2025ರ ಆಗಸ್ಟ್ 14ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.