ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದು

KannadaprabhaNewsNetwork |  
Published : May 13, 2024, 12:06 AM IST
ಪೋಟೋ : 12 ಹೆಚ್‌ಎಸ್‌ಕೆ 5ಹೊಸಕೋಟೆ ನಗರದಲ್ಲಿ ಜನನಿ ಟ್ರಸ್ಟ್ ಅರ್ಧಯಕ್ಷ ಡಾ.ಸಿ.ಜಯರಾಜ್ ರವರು ಹುತಾತ್ಮ  ಯೋಧ ಸಿಪಾಯಿ ಬಸವರಾಜು ಕುಟುಂಬಕ್ಕೆ  ಜನನಿ ಚಾರಿಟೇಬಲ್ ಟ್ರಸ್ಟ್ ನಿಂದ ಒಂದು ಲಕ್ಷರೂಪಾಯಿ ಚೆಕ್ ನೀಡಿ ಸನ್ಮಾನಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಕಣ್ಣುಗಳ ರಕ್ಷಣೆಗೆ ರೆಪ್ಪೆಗಳು ಎಷ್ಟು ಅವಶ್ಯವೋ, ಹಾಗೆಯೇ ದೇಶ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಮಹತ್ವದ್ದು ಎಂದು ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಯನ್ ಡಾ.ಸಿ.ಜಯರಾಜ್ ತಿಳಿಸಿದರು.

ಹೊಸಕೋಟೆ: ಕಣ್ಣುಗಳ ರಕ್ಷಣೆಗೆ ರೆಪ್ಪೆಗಳು ಎಷ್ಟು ಅವಶ್ಯವೋ, ಹಾಗೆಯೇ ದೇಶ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಮಹತ್ವದ್ದು ಎಂದು ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಯನ್ ಡಾ.ಸಿ.ಜಯರಾಜ್ ತಿಳಿಸಿದರು.

ನಗರದಲ್ಲಿ ಯೋಧ ಸಿಪಾಯಿ ಬಸವರಾಜು ಕುಟುಂಬಕ್ಕೆ ಜನನಿ ಚಾರಿಟಬಲ್ ಟ್ರಸ್ಟ್‌ನಿಂದ 1 ಲಕ್ಷ ರುಪಾಯಿ ಚೆಕ್ ವಿತರಿಸಿ ಮಾತನಾಡಿ, ರಾಯಚೂರು ನಗರದ ವಸಂತಪುರದಲ್ಲಿ 1948ರಲ್ಲಿ ಜನಿಸಿದ ಸಿಪಾಯಿ ಬಸವರಾಜು 1971ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ, 18ನೇ ಮದ್ರಾಸ್ ರೆಜಿಮೆಂಟ್‌ನಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದು ಸೂಲಿಬೆಲೆ ಚಕ್ರವರ್ತಿ ಮುಖಾಂತರ ಇವರ ಸಂಪರ್ಕವಾಗಿ ಜನನಿ ಚಾರಿಟೇಬಲ್ ಟ್ರಸ್ಟ್ ಮೂಲಕ 1 ಲಕ್ಷ ರುಪಾಯಿ ಚೆಕ್ ನ್ನು ಯೋಧ ಬಸವರಾಜು ಅವರ ಮಡದಿ ಮಲ್ಲಮ್ಮನವರಿಗೆ ನೀಡಲಾಗಿದೆ. ಮಲ್ಲಮ್ಮನವರು ಸಿಪಾಯಿ ಬಸವರಾಜು ಅವರನ್ನು ವಿವಾಹವಾದ ಒಂದು ತಿಂಗಳಲ್ಲೆ ಯುದ್ದಕ್ಕೆ ಹೋದವರು ಮರಳಿ ಬರಲೆ ಇಲ್ಲ. ಮಲ್ಲಮ್ಮ ಯೋಧ ಬಸವರಾಜು ನೆನಪಿನಲ್ಲಿ ಏಕಾಂಗಿ ಜೀವನ ಮಾಡುತ್ತಿದ್ದಾರೆ. ಇಂದು ಅವರ ದರ್ಶನ ಪಡೆದು ಸನ್ಮಾನಿಸುವ ಭಾಗ್ಯ ನಮಗೆ ದೊರೆತಿರುವುದು ನಮಗೆ ದೇಶ ಸೇವೆ ಮಾಡಿದಷ್ಟೆ ಸಂತಸ ತಂದಿದೆ. ಇಂದಿನ ಯುವ ಪೀಳಿಗೆ ಆಡಂಬರದ ಆಚರಣೆಗಳನ್ನು ತೊರೆದು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ದೇಶಸೇವೆ ಇದ್ದಂತೆ ಎಂದು ಹೇಳಿದರು.

ಹುತಾತ್ಮ ಯೋಧರಾದ ಸಿಪಾಯಿ ಬಸವರಾಜು ಪತ್ನಿ ಮಲ್ಲಮ್ಮ ಮಾತನಾಡಿ, ನನಗೆ ಸೈನಿಕನನ್ನು ವರಿಸಿದ್ದೇನೆಂಬ ಹೆಮ್ಮೆ ಇತ್ತು. ವಿಧಿ ಬರಹ ನನ್ನ ಪತಿ ಭಾರತ ಪಾಕಿಸ್ತಾನ ಯುದ್ದಕ್ಕೆಂದು ಹೋದವರು ವೀರಮರಣವನ್ನಪ್ಪಿ ಶವವಾಗಿ ಬಂದರು. ನಾನು ಇಂದಿಗೂ ಅವರ ನೆನಒಲ್ಲೇಲ್ಲಿ ಜೀವನ ಕಳೆಯುಗ್ದ್ದೇನೆ. ಇಂದಿನ ಈ ಸನ್ಮಾನ, ಆರ್ಥಿಕ ನೆರವು ನನ್ನ ಪತಿ ಮರಳಿ ಬಂದಷ್ಟೇ ಸಂತೃಪ್ತಿ ನನಗೆ ಸಿಕ್ಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜನನಿ ಚಾರಿಟೇಬಲ್ ಟ್ರಸ್ಟ್‌ ಪಧಾದಿಕಾರಿಗಳು ಇತರರಿದ್ದರು.12 ಹೆಚ್‌ಎಸ್‌ಕೆ 5

ಹೊಸಕೋಟೆಯಲ್ಲಿ ಜನನಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ಹುತಾತ್ಮ ಯೋಧ ಸಿಪಾಯಿ ಬಸವರಾಜು ಕುಟುಂಬಕ್ಕೆ ಜನನಿ ಚಾರಿಟಬಲ್‌ ಟ್ರಸ್ಟ್‌ನಿಂದ 1 ಲಕ್ಷ ರುಪಾಯಿ ಚೆಕ್ ನೀಡಿ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ