ಕನ್ನಡಪ್ರಭ ವಾರ್ತೆ ಚಿತ್ರದುರ್ಗಬಾಲ್ಯವಿವಾಹ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ವಿ.ವೀಣಾ ಹೇಳಿದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ಪ್ರಯತ್ನಗಳು ಕಂಡುಬಂದಲ್ಲಿ ಕಾನೂನು ರೀತಿ ಶಿಕ್ಷೆಗೆ ಹಾಗೂ ದಂಡಕ್ಕೆ ಒಳಪಡಿಸಲಾಗುವುದು ಎಂದು ಹೇಳಿದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಧಿಕಾರಿ ಮಂಜುಳಾ ಮಾತನಾಡಿ, ಕಿಶೋರಿಯರಿಗೆ ಅಗತ್ಯ ಇರುವ ಪೋಷಕಾಂಶಗಳು, ಅವರ ಸದೃಢ ಭವಿಷ್ಯ, ಆರೋಗ್ಯ ಪದ್ಧತಿಯ ಮಹತ್ವ, ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳ ಸಹಯೋಗ ಬಹುಮುಖ್ಯ ಎಂದರು.ಪೊಲೀಸ್ ಅಧಿಕಾರಿ ರೇಣುಕಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ತೊಂದರೆ ಸಿಲುಕಿದಲ್ಲಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ತಡೆ ಕುರಿತು ಜಾಥಾ ನಡೆಸಲಾಯಿತು. ವಲಯ ಮೇಲ್ವಿಚಾರಕಿ, ಪಾವನ ಆರ್, ಶಾಲೆ ಮುಖ್ಯೋಪಾಧ್ಯಯ ಪಾಪಯ್ಯ, ಸಾಧಿಕ್ ಹಾಗೂ ನಗರ ಸಭೆ ಸದಸ್ಯ ದೀಪಕ್ ಸೇರಿದಂತೆ ಶಾಲಾ ಸಿಬ್ಬಂದಿ, ಅಂಗನವಾಡಿ , ಆರೋಗ್ಯ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.