ನವಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದೆ : ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Dec 03, 2025, 01:15 AM IST

ಸಾರಾಂಶ

ಬೀರೂರುನವಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಕ್ಷೇತ್ರ ಶಾಸಕ ಕೆ,ಎಸ್.ಆನಂದ್ ಹೇಳಿದರು.

ಪಿಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬೀರೂರು ಶೈಕ್ಷಣಿಕ ವಲಯಯದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಕನ್ನಡಪ್ರಭ ವಾರ್ತೆ, ಬೀರೂರುನವಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಕ್ಷೇತ್ರ ಶಾಸಕ ಕೆ,ಎಸ್.ಆನಂದ್ ಹೇಳಿದರು.ಪಟ್ಟಣದ ಪಿಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೀರೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗೆ ಶಿಕ್ಷಣದ ಜತೆ ಇತರೆ ಚಟುವಟಿಕೆ ನಡೆಸುವುದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಈ ದಿಸೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದರು.ಮಕ್ಕಳ ರಚನಾತ್ಮಕ ಚಟುವಟಿಕೆಗಳನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರೇ ಕ್ರೀಯಾ ಶೀಲ ಮನಸ್ಸುಗಳು ಮೂಡಿ ಬರಲಿವೆ. ಗುಣಾತ್ಮಕ ಕಲಿಕೆಗೆ ಶಿಕ್ಷಣ ಇಲಾಖೆ ರೂಪಿಸಿರುವ ಪ್ರತಿಭಾ ಕಾರಂಜಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಗೌರವದ ಭಾವನೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗುವಂತೆ ಮಾಡಬೇಕಿದೆ. ಕಲೆಗೆ ಬೆಲೆಕಟ್ಟಲಾಗದು, ನಿರ್ಣಾಯಕರ ನಿರ್ಣಯ ಮಕ್ಕಳ ಮನ್ನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಾರದು. ಅಲ್ಲದೆ ಮಕ್ಕಳು ಕೂಡ ಗೆಲುವಿನಷ್ಟೆ ಸೋಲನ್ನು ಸಮಾನಾಗಿ ಸ್ವೀಕರಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಸ್ವಾರ್ಥ ಅಡಗಿರುತ್ತದೆ. ಆದರೆ ನಿಸ್ವಾರ್ಥ ಮನೋಭಾವನೆ ಇಲ್ಲದೆ ಸೇವೆ ಸಲ್ಲಿಸುವ ಏಕೈಕ ಕ್ಷೇತ್ರ ಅದು ಶಿಕ್ಷಣ ಕ್ಷೇತ್ರ, ಅದು ಮೌಲ್ಯಯುತ ಕ್ಷೇತ್ರವಾಗಿದ್ದು ಎಲ್ಲರಿಂದಲೂ ಗೌರವಕ್ಕೊಳಪಟ್ಟಿದೆ. ಕಷ್ಟ ಪಟ್ಟು ಓದಬೇಡಿ ಇಷ್ಟ ಪಟ್ಟು ಓದಿ ಸಾಧನೆ ಮಾಡಿದರೆ ಮಾತ್ರ ಗೆಲುವು ಸಾಧ್ಯ ಎಂದರು.ಬೀರೂರು ಶೈಕ್ಷಣಿಕ ವಲಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಈ ಹಿಂದೆ ಅನೇಕ ರಾಜಕೀಯ ಮುಖಂಡರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟ ಗಳಿಸಿರುವುದು ಈ ಶಾಲೆ ಉನ್ನತಿಗೆ ಸಾಕ್ಷಿಯಾಗಿದ್ದು, ಇದರ ಮುನ್ನಡೆಯನ್ನು ನಡೆಸುತ್ತಿರುವ ಶಾಲಾಭಿವೃದ್ಧಿ ಸಮಿತಿ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದ ಅವರು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ಜನಪ್ರನಿಧಿಗಳದ್ದಾಗಿದೆ ಎಂದರು.ನನ್ನ ಎರಡೂವರೆ ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಕಡೂರು ಕ್ಷೇತ್ರಕ್ಕೆ ಸುಮಾರು ₹130ಕೋಟಿಗೂ ಅಧಿಕ ಹಣ ಮಂಜೂರು ಮಾಡಿಸಿ ಹಲವಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಿಸಲಾಗಿದ್ದು ಬಡವರ ಪರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ ವಿಶ್ವನಾಥ ಗೌಡ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಮಕ್ಕಳ ಸೃಜನಶೀಲತೆ, ಕಲಾತ್ಮಕತೆ ,ಕ್ರೀಯಾಶೀಲತೆ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಅನಾವರಣಗೊಳಿಸುವ ಸಲುವಾಗಿ ರೂಪಿಸಲು ಸರ್ಕಾರ ಈ ಯೋಜನೆ ರೂಪಿಸಿದ್ದು ,ಈ ವೇದಿಕೆ ಮೂಲಕ ಅದನ್ನು ಪ್ರಕಟಪಡಿಸುವ ಅವಕಾಶ ಕಲ್ಪಿಸಿದೆ .ಮಕ್ಕಳು ಯಾರೂ ಹಿಂಜರಿಕೆ ತೋರದೆ ಯಾರ ಸಹಾಯವಿಲ್ಲದೇ ಸ್ವತಂತ್ರವಾಗಿ ತಮ್ಮ ಪ್ರತಿಭೆ ವ್ಯಕ್ತಗೊಳಿಸಲು ಇದು ಉತ್ತಮ ಅವಕಾಶ ವಾಗಿದ್ದು ಅವರ ಅವ್ಯಕ್ತ ಭಾವನೆಗಳನ್ನು ಕಲೆ ಮೂಲಕ ಜಾಹೀರುಗೊಳಿಸುವ ಸದವಕಾಶವಾಗಿದ್ದು ಅವಕಾಶಕ್ಕಾಗಿ ಕಾಯದೆ ತಾವೇ ಅವಕಾಶ ಸೃಷ್ಟಿಸಿಕೊಂಡು ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕು ಎಂದರು.ಬಿಇಒ ಚೋಪ್ದರಾ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಬೇಕಾದ ಹತ್ತು ಹಲವು ಕಾರ್ಯಕ್ರಮ ರೂಪಿಸಿ ಶಿಕ್ಷಣ ಇಲಾಖೆ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಕ್ಲಸ್ಟರ್ ಮಟ್ಟದಿಂದ ರಾಜ್ಯಮಟ್ಟದ ವರೆಗೆ ಮಕ್ಕಳು ವೇದಿಕೆಗಳ ಮೂಲಕ ಗುರುತಿಸಿಕೊಳ್ಳುವ ಕಾರ್ಯಕ್ಕೆ ಪೋಷಕರು ಸಹಕಾರ ನೀಡಿ ಎಂದರು.ಜಿ ಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ,ಜೆ ಜಗದೀಶ್ ಮಾತನಾಡಿ, ಮಕ್ಕಳ ವಿಕಸನಕ್ಕೆ ಪಠ್ಯಚಟು ವಟಿಕೆಗಳಷ್ಟೆ ಪಠ್ಯೇತರ ವಿಷಯಗಳೂ ಕಾರಣವಾಗಬೇಕಿದ್ದು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತಿದ್ದು ಪ್ರತಿಭೆ ಅನಾವರಣದ ವೇದಿಕೆಯಾಗಿ ಈ ಕಾರ್ಯಕ್ರಮ ಯಶಸ್ಸು ಕಂಡಿದೆ. ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಪ್ರಯೋಜನಕಾರಿ ಆಗಲಿ ಎಂದು ಆಶಿಸಿದರು.ಕಾರ್ಯಕ್ರಮಕ್ಕೂ ಮುನ್ನ ಶ್ರೀ ವೀರಭದ್ರೇಶ್ವರ ದೇಗುಲದ ಮುಂಭಾಗದಲ್ಲಿ ಶಾಲೆ ಪೋಷಕರಿಂದ ಪೂರ್ಣಕುಂಭಕ್ಕೆ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆ ಎಸ್.ಡಿ.ಎಂಸಿ ಅಧ್ಯಕ್ಷ ಬಿ.ಎನ್.ಪ್ರಸನ್ನಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವರ ಮನೆ ಗಿರೀಶ್, ಪೂರ್ಣಿಮಾ, ಗುರುಪ್ರಸಾದ್, ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಆರ್.ಟಿ.ಅಶೋಕ್,ಶಿಕ್ಷಕ ಮರುಳಸಿದ್ದಪ್ಪ, ಮುಖ್ಯ ಶಿಕ್ಷಕರಾದ ಅನಸೂಯ, ಮಾಜಿ ಜಿ.ಪಂ.ಸದಸ್ಯ ಬಿ.ಪಿ.ನಾಗರಾಜ್, ಮೈಲಾರಪ್ಪ, ಜಯದೇವಪ್ಪ, ರವಿಕುಮಾರ್, ಯಮುನಾ, ಮೋಹನ್ ರಾಜ್, ಗಂಗಪ್ಪ, ಎನ್.ಡಿ.ಸೀತಾಲಕ್ಷಿö್ಮ, ಗೀತಾ ಸೇರಿದಂತೆ ಮತ್ತಿತರ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಶೈಕ್ಷಣಿಕ ವಲಯದ ಶಿಕ್ಷಕರು ಇದ್ದರು.2 ಬೀರೂರು 2ಬೀರೂರು ಪಟ್ಟಣದ ಪಿಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕಮತ್ತು ಪ್ರೌಡ ಶಾಲೆಯ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೀರೂರು ಶೈಕ್ಷಣಿಕ ವಲಯದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ