ಹೈನುಗಾರಿಕೆ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಮುಖ್ಯ

KannadaprabhaNewsNetwork |  
Published : Dec 07, 2024, 12:30 AM IST
ಪೋಟೋ 3 : ಬೆಣ್ಣೆಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ದನೀರಿನ ಘಟಕ ನಿರ್ಮಾಣಕ್ಕೆ ಬಮೂಲ್ ನಿರ್ದೇಶಕ ಭಾಸ್ಕರ್ ಹಾಗೂ ನಿರ್ದೇಶಕರುಗಳು ಗುದ್ದಲಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಹಾಲು ಉತ್ಪಾದನೆ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದು ಬಮೂಲ್ ನಿರ್ದೇಶಕ ಭಾಸ್ಕರ್ ತಿಳಿಸಿದರು.

ದಾಬಸ್‍ಪೇಟೆ: ಹಾಲು ಉತ್ಪಾದನೆ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದು ಬಮೂಲ್ ನಿರ್ದೇಶಕ ಭಾಸ್ಕರ್ ತಿಳಿಸಿದರು.

ಸೋಂಪುರ ಹೋಬಳಿಯ ಬೆಣ್ಣೆಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ದನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು ಸಂಘದ ಸದಸ್ಯರಾಗುವ ಜತೆಗೆ ಡೇರಿಯ ಎಲ್ಲ ವ್ಯವಹಾರದಲ್ಲಿ ಭಾಗಿಗಳಾಗಬೇಕು. ಮಹಿಳೆಯರು ಸ್ವಸಹಾಯ ಸಂಘಗಳಿಂದ ಪಡೆದ ಸಾಲ ಸಕಾಲದಲ್ಲಿ ಮರು ಪಾವತಿ ಮತ್ತೊಬ್ಬರಿಗೆ ಸಹಕರಿಸಬೇಕು ಎಂದರು.

ಗ್ರಾಪಂ ಮಾಜಿ ಸದಸ್ಯ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ಡೇರಿಗಳು ಆರ್ಥಿಕತೆ ಶಕ್ತಿ ಕೇಂದ್ರಗಳು. ಒಂದು ಡೇರಿ ಬಂದರೆ ಆ ಗ್ರಾಮ ಅಭಿವೃದ್ಧಿಯಾದಂತೆ ಎಂದರು.

ಡೇರಿ ಅಧ್ಯಕ್ಷೆ ಪ್ರೇಮಲತಾ ಮಾತನಾಡಿ, ಗ್ರಾಮದ ಹಿರಿಯರಾದ ಸಾವಂದಪ್ಪನವರು ಡೇರಿ ಕಟ್ಟಡಕ್ಕೆ 2 ಗುಂಟೆ ಜಮೀನು ದಾನ ಮಾಡಿದ್ದು, ಬಮೂಲ್ ವತಿಯಿಂದ 21 ಲಕ್ಷ ರು. ವೆಚ್ಚದಲ್ಲಿ ಡೇರಿ ಹಾಗೂ ಶುದ್ಧ ನೀರಿನ ಘಟಕ ನಿರ್ಮಿಸುತ್ತಿರುವುದು ಸಂತೋಷದ ವಿಚಾರ ಎಂದರು.

ಈ ಸಂದರ್ಭದಲ್ಲಿ ಡೇರಿ ಕಟ್ಟಡಕ್ಕೆ ಭೂಮಿ ದಾನ ಮಾಡಿದ ಸಾವಂದಪ್ಪ ಅವರನ್ನು ಡೇರಿ ನಿರ್ದೇಶಕರು ಸನ್ಮಾನಿಸಿದರು.

ನೆಲಮಂಗಲ ತಾಲೂಕು ಶಿಬಿರ ವ್ಯವಸ್ಥಾಪಕ ಡಾ.ಗೋಪಾಲಗೌಡ, ವಿಸ್ತರಣಾಧಿಕಾರಿ ಚಂದನ್, ಕಾರ್ಯದರ್ಶಿ ಉಮಾದೇವಿ ಗಿರೀಶ್, ಹೊನ್ನಗಂಗಯ್ಯಪಾಳ್ಯ ಡೇರಿ ಅಧ್ಯಕ್ಷ ಜಗದೀಶ್, ಡೇರಿ ಕಾರ್ಯದರ್ಶಿಗಳಾದ ತಟ್ಟೆಕೆರೆ ನಾಗರಾಜು, ಹರೀಶ್, ಗಂಗರಾಜು, ಭರತ್ ಮಾಜಿ ಕಾರ್ಯದರ್ಶಿ ಸಚ್ಚಿದಾನಂದಮೂರ್ತಿ ಇತರರು ಉಪಸ್ಥಿತರಿದ್ದರು.

ಪೋಟೋ 3:

ಬೆಣ್ಣೆಗೆರೆ ಗ್ರಾಮದಲ್ಲಿ ಡೇರಿ ಕಟ್ಟಡ ಹಾಗೂ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಬಮೂಲ್ ನಿರ್ದೇಶಕ ಭಾಸ್ಕರ್ , ಡೇರಿ ಅಧ್ಯಕ್ಷೆ ಪ್ರೇಮಲತಾ, ನಿರ್ದೇಶಕರು ಇತರರು ಗುದ್ದಲಿಪೂಜೆ ನೆರವೇರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ