ಸುಭದ್ರ ದೇಶ ನಿರ್ಮಿಸುವಲ್ಲಿ ಯುವ ಮತದಾರರ ಪಾತ್ರ ನಿರ್ಣಾಯಕ: ದುಂಡಪ್ಪ ತುರಾದಿ

KannadaprabhaNewsNetwork |  
Published : Nov 13, 2024, 12:03 AM IST
12ಕೆಪಿಎಲ್23 ಅಳವಂಡಿ ಗ್ರಾಮದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಮತದಾರರ ನೊಂದಣಿ ಅಭಿಯಾನ ಕಾರ್ಯಕ್ರಮ | Kannada Prabha

ಸಾರಾಂಶ

ಸುಭದ್ರ ದೇಶ ನಿರ್ಮಿಸುವಲ್ಲಿ ಯುವ ಮತದಾರರ ಪಾತ್ರ ನಿರ್ಣಾಯಕವಾಗಿದೆ.

ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಮತದಾರರ ನೋಂದಣಿ ಅಭಿಯಾನ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸುಭದ್ರ ದೇಶ ನಿರ್ಮಿಸುವಲ್ಲಿ ಯುವ ಮತದಾರರ ಪಾತ್ರ ನಿರ್ಣಾಯಕವಾಗಿದೆ ಎಂದು ಮತದಾರರ ವಿಶೇಷ ಸಹಾಯಕ ನೋಂದಣಾಧಿಕಾರಿ, ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದರು.

ಅಳವಂಡಿ ಗ್ರಾಮದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹಳಷ್ಟು ಯುವಕರು ಮತದಾನದ ಮಹತ್ವದ ಬಗ್ಗೆ ತಿಳಿದಿದಿಲ್ಲ. ಸುಭದ್ರ ಸರ್ಕಾರಕ್ಕೆ ಪ್ರತಿ ಮತ ಅಮೂಲ್ಯ. ಮತದಾನ ಎನ್ನುವುದು ಪವಿತ್ರವಾದ ಕಾರ್ಯ. ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ 18 ವರ್ಷ ತುಂಬಿದ ಎಲ್ಲಾ ಯುವಕ ಮತ್ತು ಯುವತಿಯರು ಅಗತ್ಯವಾದ ವರ್ಗಾವಣೆ ಪ್ರಮಾಣಪತ್ರದ ಪ್ರತಿ, ಆಧಾರ್‌ ಕಾರ್ಡ್‌ ಪ್ರತಿ, 02 ಪಾಸ್ ಪೋರ್ಟ್‌ ಸೈಜ್ ಪೋಟೊ ಹಾಗೂ ಪಾಲಕರ ಮತದಾನ ಗುರುತಿನ ಚೀಟಿಯ ಪ್ರತಿಯೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ನಿಮ್ಮ ಮನೆಯಲ್ಲಿ ಹಾಗೂ ಅಕ್ಕ ಪಕ್ಕದ ಮನೆಯಲ್ಲಿ 18 ವರ್ಷ ತುಂಬಿದವರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮಾಹಿತಿ ನೀಡುವಂತೆ ತಿಳಿಸಿದರು.

ಕೊಪ್ಪಳ ತಹಸೀಲ್ದಾರ ವಿಠಲ್ ಚೌಗಲಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಜಗದೀಶ ಹಾಲದಕಟ್ಟಿ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ತಾಲೂಕ ಸ್ವೀಪ್ ತಂಡದ ಸದಸ್ಯರಾದ ಬಸವರಾಜ ಬಳಿಗಾರ, ಗ್ರಾಪಂ ಕಾರ್ಯದರ್ಶಿ ಕಾಲೇಜಿನ ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’