ಗದಗ: ಸಮುದಾಯದ ಸ್ವಚ್ಛತೆಯಲ್ಲಿ ಯುವಕರ ಪಾತ್ರ ಬಹು ದೊಡ್ಡದು ಎಂದು ಹಿಂದುಳಿದ ವರ್ಗ ಹಾಗೂ ಕಲ್ಯಾಣ ಇಲಾಖೆಯ ವಿಸ್ತರಣಾ ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಹೇಳಿದರು.
ಗದುಗಿನ ಆದರ್ಶ ಶಿಕ್ಷಣ ಸಮಿತಿಯು ಹೆಸರಿಗೆ ತಕ್ಕಹಾಗೆ ಆದರ್ಶಮಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಸಂಸ್ಥೆ ಆದರ್ಶಮಯವಾಗಿದೆ. ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಅತ್ಯುತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತಿದೆ. ದೇಶದಲ್ಲೆಡೆ ಸ್ವಚ್ಛ ಹಿ ಸೇವಾ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಯುವಕರು ಇದರ ಬಗ್ಗೆ ಅರಿತುಕೊಂಡು ಈ ಜಾಗೃತಿ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಮಹಾವಿದ್ಯಾಲಯದ ಪ್ರಾ. ಪ್ರೊ.ಕೆ. ಗಿರಿರಾಜಕುಮಾರ ಮಾತನಾಡಿದರು. ಉಪ ಪ್ರಾ.ಡಾ. ವಿ.ಟಿ. ನಾಯ್ಕರ, ಪ್ರೊ.ಬಿ.ಪಿ. ಜೈನರ್, ಮನೋಜ ದಲಬಂಜನ ಹಾಗೂ ಮಹಾವಿದ್ಯಾಲಯದ ಸ್ವಯಂ ಸೇವರು ಇದ್ದರು.