ಗದಗ: ಇಂದಿನ ಆಧುನಿಕ ಒತ್ತಡದ ವ್ಯವಸ್ಥೆಯಲ್ಲಿ ಮನೋರೋಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದ್ದು, ಮುಂದೊಂದು ದಿನ ಆತ್ಮಹತ್ಯೆ ಘಟನೆ ಸರ್ವೇ ಸಾಮಾನ್ಯ ಕಂಡುಬರುವ ಸ್ಥಿತಿ ಉಂಟಾಗಬಹುದು. ಇದರಿಂದ ಕೌಟುಂಬಿಕ, ಸಾಮಾಜಿಕ ವಿಘಟನೆಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ಮನಶಾಸ್ತ್ರಜ್ಞ ಶ್ರೀಧರ ಎಂ.ಸಿ. ಹೇಳಿದರು.
ವಿನಾಯಕ ಕಾಳೆ ಮಾತನಾಡಿ, ಮನೋವ್ಯಾಕುಲತೆ ಒಂದು ವಾಸಿಯಾಗುವ ರೋಗ, ಈ ರೋಗ ಸಮಾಜದಲ್ಲಿ ಕಾಣಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವುದಲ್ಲದೇ ಈ ರೋಗದ ಲಕ್ಷಣಗಳು ಕಂಡಬಂದ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಸುಲಭವಾಗಿ ರೋಗಮುಕ್ತಗೊಳಿಸಲು ಇಲಾಖೆ ಸನ್ನದ್ಧವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾ. ಆರ್.ಎಸ್. ದಾನರಡ್ಡಿ ಮಾತನಾಡಿ, ಮನೋರೋಗ ಚಿಕ್ಕವರು, ದೊಡ್ಡವರು ಎನ್ನದೇ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜ ಆರೋಗ್ಯ ಇಲಾಖೆ ವಿವಿಧ ರೂಪಗಳಲ್ಲಿ ಜಾಗೃತಾ ಜಾಥಾ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಯಶಸ್ವಿಯಾಗಲು ಸಾಧ್ಯ ಎಂದರು.
ಡಾ. ವಿ.ಎ. ನಿಂಗೋಜಿ ಸ್ವಾಗತಿಸಿದರು. ಶರೀಫ ಬೆಣಕಲ್ ನಿರೂಪಿಸಿದರು. ಪ್ರೊ. ಎಫ್.ಬಿ. ಅಂಗಡಿ ವಂದಿಸಿದರು.