ಶಿಗ್ಗಾವಿ: ದೇಶದ ಪ್ರಗತಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು, ಇಂದಿನ ವಿದ್ಯಾರ್ಥಿಗಳು ದಾರ್ಶನಿಕರ, ಮಹನೀಯರ ಆತ್ಮ ಕಥೆಗಳನ್ನು ಓದಿ ಅವರು ನೀಡಿದ ಉಪದೇಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ತಮ್ಮ ವಿದ್ಯಾರ್ಥಿ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್.ಕೆ.ಪವಾರ ಹೇಳಿದರು.
ಮಹಾವಿದ್ಯಾಲಯದ ಪ್ರಚಾರ್ಯ ಡಾ.ಬಿ.ವೈ. ತೊಂಡಿಹಾಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭೆಯನ್ನು ಕೇವಲ ಪ್ರಶಸ್ತಿಗಳಿಗೆ ಸೀಮಿತವಾಗಿರಿಸಿಕೊಳ್ಳದೆ ಇಂತಹ ಹಲವು ವೇದಿಕೆಗಳಲ್ಲಿ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರೆ ಪ್ರಶಸ್ತಿಯು ತಾನಾಗಿಯೇ ಆರಸಿ ಬರುತ್ತದೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಕಾಲೇಜಿನ ನಿವೃತ್ತ ಪ್ರಚಾರ್ಯ ಪಿ.ಸಿ.ಹಿರೇಮಠ ಉಪನ್ಯಾಸ ನೀಡಿದರು. ಯುವಜನೋತ್ಸವ ಸಂಯೋಜಕ ಡಾ. ಶ್ರೀಶೈಲ ಹುದ್ದಾರ, ಸಹ ಸಂಯೋಜಕ ಡಾ.ಎಚ್.ಕೆ.ವಿನಯ, ಧಾರವಾಡ ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಅಧಿಕ್ಷಕ ಸಂತೋಷ ಕೆ., ಮತ್ತು ಅಧ್ಯಕ್ಷ ಎಸ್ ಕದಾಣಿ, ಡಾ.ಡಿ.ಎ.ಗೊಬ್ಬರಗುಂಪಿ, ಸಿ.ಎಸ್.ತಾವರಗುಂದಿ, ಪ್ರೊ.ಬಿ.ಎಂ.ಮುಳಗುಂದ, ಜಿ. ಎನ್. ಎಲಿಗಾರ, ಮಲ್ಲಪ್ಪ ರಾಮಗೇರಿ, ಶೃತಿ ಕಟ್ಟಿ, ಹಾಗೂ ವಿವಿಧ ಮಹಾವಿದ್ಯಾಲಯದಿಂದ ಆಗಮಿಸಿದ ಪ್ರಾಚಾರ್ಯರು ಮತ್ತು ಸಂಯೋಜಕರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.