ಕನ್ನಡ ಸಾಹಿತ್ಯದ ಮೂಲ ಬೇರು ಜಾನಪದ: ಜಾಳ್ಮರ ಸುಬ್ಬರಾವ್

KannadaprabhaNewsNetwork |  
Published : Jan 21, 2026, 01:45 AM IST
ಕೊಪ್ಪ: ಅದ್ಧೂರಿಯ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ  | Kannada Prabha

ಸಾರಾಂಶ

ಕೊಪ್ಪಕನ್ನಡ ಸಾಹಿತ್ಯಕ್ಕೆ ಮೂಲ ಬೇರು ಜನಪದ ಸಾಹಿತ್ಯ.ಕನ್ನಡ ಸಾಹಿತ್ಯ ಲೋಕದ ಎರಡು ಕಣ್ಣುಗಳು ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ. ಕ್ಲಿಷ್ಟಕರವಾದ ವೇದವನ್ನು ಸರಳವಾಗಿ ಜನರಿಗೆ ತಲುಪಿಸುವುದು ದಾಸ ಸಾಹಿತ್ಯದ ವೈಶಿಷ್ಟ್ಯವಾಗಿದೆ ಎಂದು ಹಿರಿಯ ಜನಪದ ಕಲಾವಿದ ಹಾಗೂ ಹರಿಕಥೆ ಕೀರ್ತನಕಾರರಾದ ಜಾಳ್ಮರ ಸುಬ್ಬರಾವ್ ಹೇಳಿದರು.

-ಕೊಪ್ಪ: ಅದ್ಧೂರಿ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಕೊಪ್ಪ

ಕನ್ನಡ ಸಾಹಿತ್ಯಕ್ಕೆ ಮೂಲ ಬೇರು ಜನಪದ ಸಾಹಿತ್ಯ.ಕನ್ನಡ ಸಾಹಿತ್ಯ ಲೋಕದ ಎರಡು ಕಣ್ಣುಗಳು ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ. ಕ್ಲಿಷ್ಟಕರವಾದ ವೇದವನ್ನು ಸರಳವಾಗಿ ಜನರಿಗೆ ತಲುಪಿಸುವುದು ದಾಸ ಸಾಹಿತ್ಯದ ವೈಶಿಷ್ಟ್ಯವಾಗಿದೆ ಎಂದು ಹಿರಿಯ ಜನಪದ ಕಲಾವಿದ ಹಾಗೂ ಹರಿಕಥೆ ಕೀರ್ತನಕಾರರಾದ ಜಾಳ್ಮರ ಸುಬ್ಬರಾವ್ ಹೇಳಿದರು.ಕಸಾಪ ಕೊಪ್ಪ ಘಟಕದಿಂದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಾಂತಿಗ್ರಾಮ-ಕೊಗ್ರೆಯ ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿ ಭಗವಂತನಾದ ಹರಿ ಹಾಗೂ ಗುರುಗಳ ಆಶೀರ್ವಾದ, ಕೊಗ್ರೆ ಜನರ ಸಹಕಾರದಿಂದ ಇಷ್ಟೆಲ್ಲ ಸಾಧನೆ ಮಾಡಿದ್ದೇನೆ. ದಾಸ ಸಾಹಿತ್ಯ ಮುಂದಿನ ಪೀಳಿಗೆಗೆ ಮುಂದುವರಿ ಸಬೇಕೆಂದು ಅಭಿಪ್ರಾಯಪಟ್ಟರು. ಕನ್ನಡ ಸಿನಿಮಾರಂಗದ ಹಿರಿಯ ನಟ ದೊಡ್ಡಣ್ಣ ಮಾತನಾಡಿ ನಾವು ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಆಗ ಭಗವಂತ ತಕ್ಕ ಪ್ರತಿಫಲ ನೀಡುತ್ತಾನೆ. ಜಗತ್ತಿನಲ್ಲಿ ತಾಯಿ ಹಾಲು ಹಾಗೂ ಎಳನೀರು ಪವಿತ್ರವಾದದ್ದು. ಕನ್ನಡ ಸಾಹಿತ್ಯ ಅಷ್ಟೇ ಪವಿತ್ರವಾಗಿದೆ. ಮಕ್ಕಳಿಗೆ ರಾಮಾಯಣ, ಮಹಾ ಭಾರತ ಅಧ್ಯಯನ ಮಾಡಿಸುವುದು ಉತ್ತಮ ಸಂಸ್ಕಾರ ನೀಡುತ್ತದೆ. ತಾಯಂದಿರು ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸ್ತಕ ಕೊಡಿ. ಪುಸ್ತಕ ಸತ್ಯ ಹೇಳುತ್ತದೆ. ಮೊಬೈಲ್‌ನಲ್ಲಿ ಸುಳ್ಳು ಮಾಹಿತಿಯೂ ಬರಬಹುದು. ಆದ್ದರಿಂದ ಮಕ್ಕಳಿಗೆ ಪುಸ್ತಕ ಓದುವ ಅಭ್ಯಾಸ ಮಾಡಿಸಿ ಎಂದರು.ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರೀತಿಯಿಂದ ಕಟ್ಟಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಇದು ನಮ್ಮೆಲ್ಲರ ಹೆಮ್ಮೆ. ಕಸಾಪ ಕನ್ನಡ ರಕ್ಷಣೆ ಮಾಡುವ ಜೊತೆಗೆ ರಂಗಭೂಮಿಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ರಂಗಭೂಮಿ ಹಾಗೂ ಚಲನಚಿತ್ರ ಹಿರಿಯ ನಟ ಮಂಡ್ಯ ರಮೇಶ್ ಹೇಳಿದರು. ಮೆರವಣಿಗೆ ಹಾಗೂ ಪುಸ್ತಕ ಮಳಿಗೆ ಉದ್ಘಾಟಿಸಿದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂದರೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ ಇದು ನಮ್ಮ ಕನ್ನಡಿಗರ ಹೆಮ್ಮೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠ ಶೃಂಗೇರಿಯ ಗುಣನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಕೊಪ್ಪ ತಾಲೂಕು ಕಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಸ್ವಾಗತ ಸಮಿತಿ ಅಧ್ಯಕ್ಷ ಬೆಂಡೆ ಹಕ್ಲು ನಾರಾಯಣ, ಸಿನಿಮಾಟೊಗ್ರಫಿ ಅಶೋಕ್ ಕಶ್ಯಪ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಶಂ.ನ. ಶೇಷಗಿರಿ, ಗುಡ್ಡೆತೋಟ ಗ್ರಾಪಂ ಅಧ್ಯಕ್ಷೆ ಸವಿತಾ, ವೆಂಕಟೇಶ್, ಚಂದ್ರಕಲಾ, ತಲವಾನೆ ಪ್ರಕಾಶ್, ಟಿ.ಎ. ಪಿಂಟೊ, ಗೋಪಾಲಕೃಷ್ಣ, ಹೊಸಕೊಪ್ಪ ಸುಬ್ಬಣ್ಣ, ಪೂರ್ಣೇಶ್, ಶೃಂಗೇರಿ ಸುಬ್ಬಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ