ಕನ್ನಡಪ್ರಭವಾರ್ತೆ ಪಾವಗಡ
ಪತ್ರಕರ್ತ ಸತ್ಯ ಲೋಕೇಶ್ ಮಾತನಾಡಿ, ಯೋಗಿ ನಾರಾಯಣರ ಯತಿಂದ್ರರ ಜಯಂತ್ಯುತ್ಸವವನ್ನು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸದೆ ಪ್ರತಿವರ್ಷ ಅಚ್ಚುಕಟ್ಟಾಗಿ ಆಚರಣೆ ಮಾಡಬೇಕು. ಎಲ್ಲಾ ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಮತ್ತು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಯೋಗಿ ನಾರಾಯಣರ ಜಯಂತಿಯನ್ನು ಆಚರಿಸಿ ಅವರ ಚಿಂತನೆ ಹಾಗೂ ಸಂದೇಶ ಅರ್ಥೈಸುವಂತೆ ತಹಸೀಲ್ದಾರ್ ಖಡಕ್ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.ಶಿಕ್ಷಕರಾದ ರಾಜವಂತಿ ರಂಗನಾಥ್ ಮಾತನಾಡಿ, ಬಲಿಜ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಡ ಜನಾಂಗಕ್ಕೆ ಆರ್ಥಿಕವಾಗಿ ಮೇಲೆತ್ತುವ ಜನಾಂಗ, ಸಮಾಜ ಮುಖಿ ಕಾರ್ಯಕ್ರಮ ಹೆಚ್ಚು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತಾಲೂಕು ಬಲಿಜ ಸಂಘ ಮುಂದಾಗುವಂತೆ ಮನವಿ ಮಾಡಿದರು.
ಮುಖಂಡ ಬಿಜೆಪಿ ರವಿ ಮಾತನಾಡಿ, ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಕಚೇರಿಗಳಿಗೆ ಸಂಘದ ವತಿಯಿಂದ ಯೋಗಿ ನಾರಾಯಣ ಯತೀಂದ್ರ ರ ಫೋಟೋವನ್ನು ವಿತರಣೆ ಮಾಡಲು ಸಂಘವು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆ ಶಾಂತಿ ಎಸ್‌ಎಸ್‌ಕೆ ಕಾಲೇಜಿನ ಪ್ರಾಂಶುಪಾಲರಾದ ವಿನಯ್ ಬಾಬು ಮಾತನಾಡಿ, ಪಟ್ಟಣದಲ್ಲಿ ಬಲಿಜ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು ಶ್ರೀಕೃಷ್ಣ ದೇವರಾಯರ ಪ್ರತಿಮೆಯನ್ನು ನಿರ್ಮಾಣ ಮಾಡಲು ತಾಲೂಕು ಆಡಳಿತ, ಪುರಸಭೆ ಮುಂದಾಗಬೇಕೆಂದು ಒತ್ತಾಯಿಸಿದರು.ಈ ವೇಳೆ ಗ್ರೇಡ್ 2 ತಹಸೀ ಲ್ದಾರ್ ಮಾರುತಿ ಪ್ರಸಾದ್, ಮಾಜಿ ಪುರಸಭಾ ಸದಸ್ಯ ಕಲ್ಪವೃಕ್ಷ ರವಿ, ಬಲಿಜ ಸಂಘದ ಅಧ್ಯಕ್ಷ ಗುರಪ್ಪ, ಮುಖಂಡರಾದ ಸೂರ್ಯ ನಾರಾಯಣ್, ಸ್ಟುಡಿಯೋ ಅಮರ್, ಎಸ್. ಎಸ್. ಕೆ.ಸುಧಾಕರ್, ಗಜ ರಮೇಶ್, ಮಿಷನ್ ಮನೋಹರ್, ತಾಪಂ ಎಡಿ ಮಾರುತಿ ಪ್ರಸಾದ್, ರಾಘವೇಂದ್ರ ಗುರಪ್ಪ, ಸುರೇಶ್ ಗುರಪ್ಪ, ಅನಿಲ್ ಮಹಾದೇವ್, ಯೋಗಿ ನಾರಾಯಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಕುಮಾರ್, ಆರ್.ಐ.ರಾಜಗೋಪಾಲ್, ಗ್ರಾಮ ಆಡಳಿತಾಧಿಕಾರಿ, ರಾಜೇಶ್,ಗಡ್ಡಂ ತಿಮ್ಮರಾಜು, ವೆಂಕಟೇಶ್ ಪ್ರಸಾದ್, ತಹಸೀಲ್ದಾರ್ ಕಾರ್ಯಲಯದ ಸಿಬ್ಬಂದಿ ಹಾಗೂ ಬಲಿಜ ಜನಾಂಗದ ಮುಖಂಡರುಗಳು ಹಾಜರಿದ್ದರು.