ಇ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ

KannadaprabhaNewsNetwork |  
Published : Apr 02, 2025, 01:00 AM IST
1ಎಚ್ಎಸ್ಎನ್15 : ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪುರಸಭೆ ಅನುದಾನದಲ್ಲಿ ೨೩ ನೇ ವಾರ್ಡಿನ ಅಂಗವಿಕಲ ವ್ಯಕ್ತಿಗೆ ಶಾಸಕ ಎಚ್.ಡಿ.ರೇವಣ್ಣ ತ್ರಿಚಕ್ರದ ಸ್ಕೂಟರ್ ವಿತರಿಸಿದರು. ಎಚ್.ಕೆ.ಪ್ರಸನ್ನ ಇದ್ದರು. | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ೧೮ ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ. ಆದ್ದರಿಂದ ಅಧಿಕಾರಿಗಳು ಎಚ್ಚರದಿಂದ ಇರಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಕವರ್‌ ಡೆಕ್ ಪಕ್ಕದಲ್ಲಿರುವ ಪತಂಜಲಿ ಯೋಗಭವನದ ಪಕ್ಕದ ಖಾಲಿ ನಿವೇಶನವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಲು ಪುರಸಭೆ ಅನುಮೋದನೆ ನೀಡಿದ್ದರೂ ಏಕೆ ನೀಡಿಲ್ಲ, ಪುರಸಭೆಗೆ ನೀಡಲು ಅವಕಾಶವಿದೆ, ಅವರಿಗೆ ನಿವೇಶನ ಮಂಜೂರು ಮಾಡಿಕೊಡಿ ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪುರಸಭೆ ವ್ಯಾಪ್ತಿಯಲ್ಲಿ ೧೮ ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ. ಆದ್ದರಿಂದ ಅಧಿಕಾರಿಗಳು ಎಚ್ಚರದಿಂದ ಇರಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.

ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ನೀಡಿರುವ ಆಶ್ರಯ ಮನೆಗಳನ್ನು ಬಾಡಿಗೆ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ೧೭ನೇ ವಾರ್ಡಿನಲ್ಲಿ ೨ ಸಾವಿರ ಮನೆ ಕಟ್ಟಿಸಿ ಕೊಟ್ಟಿದ್ದೇವೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ ಕೆಲವರು ಬಾಡಿಗೆ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಪ್ರತಿ ಮನೆಗೆ ತೆರಳಿ ಪರಿಶೀಲಿಸಿ, ಬಾಡಿಗೆ ನೀಡಿದ್ದರೇ ವಶಕ್ಕೆ ಪಡೆದು ಬಡವರಿಗೆ ನೀಡಿ ಎಂದು ಸಲಹೆ ನೀಡಿದರು.

ಪುರಸಭೆಯ ೨೩ ವಾರ್ಡಿನಲ್ಲಿ ಇ ಸ್ವತ್ತು ಮತ್ತು ಖಾತೆ ಮಾಡಿಸಿಕೊಳ್ಳಲು ಪ್ರತಿಯೊಬ್ಬರು ಅರ್ಜಿ ನೀಡಿ, ಎಲ್ಲರಿಗೂ ಅರ್ಜಿ ಸಂಬಂಧಿಸಿದಂತೆ ಸ್ಪಂದಿಸಲಾಗುತ್ತೆ ಮತ್ತು ಸ್ವತ್ತಿಗೆ ಸಂಬಂಧಿಸಿದಂತೆ ದಾವೆ ಇದ್ದರೆ ಪುರಸಭೆ ಪ್ರವೇಶ ಮಾಡುವುದಿಲ್ಲವೆಂದರು. ಪುರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಡೆಸುವ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು, ಜನರಿಂದ ಯಾವುದೇ ದೂರು ಬರಬಾರದು, ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕೆಂದು ಪುರಸಭೆ ಎಂಜಿನಿಯರ್‌ಗೆ ಸಲಹೆ ನೀಡಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಕವರ್‌ ಡೆಕ್ ಪಕ್ಕದಲ್ಲಿರುವ ಪತಂಜಲಿ ಯೋಗಭವನದ ಪಕ್ಕದ ಖಾಲಿ ನಿವೇಶನವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಲು ಪುರಸಭೆ ಅನುಮೋದನೆ ನೀಡಿದ್ದರೂ ಏಕೆ ನೀಡಿಲ್ಲ, ಪುರಸಭೆಗೆ ನೀಡಲು ಅವಕಾಶವಿದೆ, ಅವರಿಗೆ ನಿವೇಶನ ಮಂಜೂರು ಮಾಡಿಕೊಡಿ ಎಂದು ಸೂಚಿಸಿದರು.ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖ್ಯಾಧಿಕಾರಿ ಶಿವಶಂಕರ್, ಕಂದಾಯ ವಿಭಾಗದ ಅಧಿಕಾರಿ ನಾಗೇಂದ್ರ, ಇಂಜಿನಿಯರ್ ಶಿವಕುಮಾರ್, ಪುರಸಭೆ ಸದಸ್ಯರು ಇದ್ದರು. ಪುರಸಭೆ ಅನುದಾನದಲ್ಲಿ ೨೩ನೇ ವಾರ್ಡಿನ ಅಂಗವಿಕಲ ವ್ಯಕ್ತಿಗೆ ತ್ರಿಚಕ್ರದ ಸ್ಕೂಟರ್ ವಿತರಿಸಲಾಯಿತು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು