ಕನ್ನಡಪ್ರಭ ವಾರ್ತೆ ಮೈಸೂರು
ವಸ್ತು ಪ್ರದರ್ಶನ ಆವರಣದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಈ ಕುಸ್ತಿ ಪಂದ್ಯಾವಳಿಯಲ್ಲಿ ಸಿದ್ದು ಮತ್ತು ದೀಕ್ಷಿತ್ ನಡುವಿನ ಪಂದ್ಯಾವಳಿಯು ವಿಶೇಷ ಗಮನ ಸೆಳೆಯಿತು. 15 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಸಿದ್ದು ಪರಾಭವಗೊಂಡು, ದೀಕ್ಷಿತ್ ಗೆಲುವು ಸಾಧಿಸಿದರು. ಆರಂಭದಿಂದಲೂ ಇಬ್ಬರೂ ಸಮಬಲ ಸಾಧಿಸುತ್ತ ಬಂದರಾದರೂ ಕೊನೆಯ ಗಳಿಗೆಯಲ್ಲಿ ದೀಕ್ಷಿತ್‌ಕೈ ಮೇಲಾಗತೊಡಗಿತು.
ದರ್ಶನ್‌ಮತ್ತು ಎಚ್.ಸಿ. ಸೂರಜ್ ನಡುವಿನ ಪಂದ್ಯಾವಳಿಯಲ್ಲಿ ಸೂರಜ್‌ದರ್ಶನ್‌ಅವರನ್ನು ಮಣಿಸಿದರು. ಕುತೂಹಲ ಕೆರಳಿಸಿದ್ದ ಈ ಪಂದ್ಯಾವಳಿಯಲ್ಲಿ ಅಂತಿಮವಾಗಿ ಸೂರಜ್ ಜಯಗಳಿಸಿದರು.ಕೌಸ್ತುಬ್, ಮೊಹಮ್ಮದ್ ನೌಮಾದ್ ಅವರನ್ನು ಕೇವಲ ಒಂದೇ ನಿಮಿಷದಲ್ಲಿ ಸೋಲಿನ ದಡ ಸೇರಿಸಿದರೆ, ಶಶಾಂಕ್‌ಗೆ ಕೆ.ಎ. ಮೋಹಿತ್‌ಸೋಲಿನ ರುಚಿ ತೋರಿಸಿದರು. ರಾಯನ್‌ನೂರ್‌ಇಮ್ರಾನ್‌ವಿರುದ್ಧ ಸಿ. ಚೇತನ್ ಗೆಲುವು ಸಾಧಿಸಿದರು.