ಕಂಪ್ಲಿ: ತಾಲೂಕಿನ ಶ್ರೀರಾಮರಂಗಾಪುರ (ಕೊಟ್ಬಾಲ್) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ ಜರುಗಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಎಸ್.ರಮೇಶ 2022-23 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಸಂಘವು 3602 ಸದಸ್ಯರನ್ನು ಹೊಂದಿದ್ದು, ಸುಮಾರು 91 ಲಕ್ಷ 50ಸಾವಿರದ 338ರೂ ಶೇರು ಬಂಡವಾಳ ಹೊಂದಿದೆ. ಸಂಘವು 2023-24 ರಲ್ಲಿ ₹3.75 ಲಕ್ಷ ನಿವ್ವಳ ಲಾಭ ಗಳಿಸಿದೆ. ರೈತರಿಗೆ ಕೆಸಿಸಿ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಹೀಗೆ ವಿವಿಧ ಹಂತದ ಸಾಲಗಳನ್ನು ವಿತರಿಸಲಾಗಿದೆ. ಸಹಕಾರ ಅಭಿವೃದ್ಧಿಗೆ ರೈತರ ಹಾಗೂ ಸಂಘದ ಜನರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಸಭೆಯಲ್ಲಿ ಉಪಾಧ್ಯಕ್ಷ ಆರ್.ರಮೇಶ್ ನಾಯುಡು, ನಿರ್ದೆಶಕರಾದ ಟಿ.ಅಮೃತಾ, ಟಿ.ಪ್ರಭಾಕರ, ಬಿ.ತೇಜಸ್ಸು ನಾಯ್ಡು, ಪಿ.ಅಲ್ಲಿಸಾಬ್, ಬಿ.ದೊಡ್ಡಪ್ಪ, ವದ್ದಿಗೇರಿ ಶಿದ್ದಪ್ಪ, ಮಾರುತಿ ಪ್ರಸಾದ್, ಎಂ.ಶ್ರೀನಾಥ, ಬಿ.ಚಿನ್ನಹನು ಮಂತು, ಪಿ.ಚಂದ್ರಕಲಾ, ವಿ.ಗಾಳೆಮ್ಮ, ಸಿಬ್ಬಂದಿ ಜೆ.ಎಂ. ಶಿವಶಂಕರ್, ಎಂ.ಪುರುಷೋತ್ತಮ, ಟಿ.ವಿಶ್ವೇಶ್ವರಯ್ಯ, ಬಿ.ಗೋವಿಂದ ಹಾಗೂ ರೈತ ಮುಖಂಡರು ಸೇರಿದಂತೆ ಅನೇಕರಿದ್ದರು.