ಮಳವಳ್ಳಿ:
ಪ್ರಸಾದ ವ್ಯವಸ್ಥೆ ಮಾಡಿರುವ ಸಭಾಂಗಣ, ವೇದಿಕೆ ಸೇರಿದಂತೆ ಹಲವೆಡೆ ಸಮವಸ್ತ್ರಧಾರಿ ಮಹಿಳೆಯರು ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸಿದರು. ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿರುವುದರಿಂದ ಗ್ರಾಮೀಣ ಪ್ರದೇಶದ ಸ್ವಚ್ಛತೆಗೂ ಮಹಿಳೆಯರು ಮುನ್ನುಡಿ ಬರೆದರು. ಜಯಂತ್ಯುತ್ಸವದಲ್ಲಿ ಜಿಪಂ ಸಿಇಓ ಹಾಗೂ ತಾಪಂ ಇಓ ಮಾರ್ಗದರ್ಶನದಲ್ಲಿ ಸಂಜೀವಿನಿ ಒಕ್ಕೂಟದ 27 ಚಾಲಕಿಯರು ಸೇರಿ 35ಕ್ಕೂ ಅಧಿಕ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಸುತ್ತೂರು ಕ್ಷೇತ್ರದ ಸೇವೆಯೊಂದಿಗೆ ಸರ್ಕಾರದ ಯೋಜನೆ ಯಶಸ್ವಿಗೆ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದು ಸಂಜೀವಿನಿ ಕಾರ್ಯಕ್ರಮದ ತಾಲೂಕು ಕೃಷಿಯೇತರ ಚಟುವಟಿಕೆ ವ್ಯವಸ್ಥಾಪಕಿ ಸೌಮ್ಮ ಕನ್ನಡಪ್ರಭಗೆ ತಿಳಿಸಿದರು.ಜಯಂತ್ಯುತ್ಸವದ ಯಶಸ್ವಿಗೆ ಸ್ವಯಂ ಸೇವಕರ ಸೇವೆ
7 ದಿನಗಳ ಜಯಂತ್ಯುತ್ಸವಕ್ಕೆ ಜೆ.ಎಸ್.ಎಸ್.ವಿದ್ಯಾಪೀಠದ ಸುಮಾರು 50 ಮಂದಿ ಸಿಬ್ಬಂದಿಯು 500 ಸ್ವಯಂ ಸೇವಕರು ವಿವಿಧ ಸಮಿತಿಗಳ ಮೂಲಕ ಸೇವೆ ಸಲ್ಲಿಸಿದರು. ಕಳೆದ ಐದು ದಿನಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಜಯಂತ್ಯುತ್ಸವದಲ್ಲಿ ಭಾಗಿಯಾಗುತ್ತಿದ್ದು, ಯಾವುದೇ ವ್ಯತ್ಯಾಸವಾಗದಂತೆ ಪೊಲೀಸರು ಸೇರಿದಂತೆ ಎಲ್ಲರೂ ಕರ್ತವ್ಯ ನಿರ್ವಹಿಸಿದರು.
ಮತ್ತೊಂದೆಡೆ ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಸುತ್ತೂರು ಮಠದ ಧಾರ್ಮಿಕ ಪರಂಪರೆ ನಾಡಿಗೆ ಬಿಂಬಿಸುವ ಪ್ರಯತ್ನ ನಡೆಸಿದರು. ಶಿಕ್ಷಣ ಇಲಾಖೆಯಿಂದ ಗಗನಚುಕ್ಕಿ ಜಲತಾಪದ ವೈಭವ, ರೋಬೋಟ್ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ವಿಜ್ಞಾನದ ಅವಿಷ್ಕಾರಗಳ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜನರ ಗಮನ ಸೆಳೆದರು.