ಹನುಮಸಾಗರ: ಪಟ್ಟಣದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.
ಪೌರಕಾರ್ಮಿಕರು ಪ್ರತಿದಿನ ಬೆಳಗಿನ ಜಾವದಿಂದಲೇ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುವುದರಿಂದ ಅವರ ಅನುಕೂಲಕ್ಕಾಗಿ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಪಪಂ ಅಗತ್ಯ ಸಹಕಾರ ನೀಡಲಿದೆ. ಕಾಯಂ ಸೇವೆ ಕುರಿತು ಸರ್ಕಾರದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಪಂ ಸದಾ ಸಿದ್ಧವಿದೆ ಎಂದರು.
ವಕೀಲ ಮಹಾತೇಶ ಕುಷ್ಟಗಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಪೌರಕಾರ್ಮಿಕರ ಯಾವುದೇ ಕೆಲಸವಿದ್ದರೂ ಉಚಿತವಾಗಿ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದರು.ವೆಂಕಟೇಶ ಹೊಸಮನಿ ಹಾಗೂ ಶಂಕರ ಅವರು ಪೌರಕಾರ್ಮಿಕರ ಸೇವೆ, ಸ್ವಚ್ಛತೆಯ ಮಹತ್ವ ಮತ್ತು ಸಾರ್ವಜನಿಕರ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಸೂಚಪ್ಪ ದೇವರಮನಿ, ಮಹಾಂತೇಶ ಕುಷ್ಟಗಿ, ಮೈನುದ್ದೀನ್ ಖಾಜಿ ಮಾತನಾಡಿದರು. ಪ್ರಶಾಂತ ಕುಲಕರ್ಣಿ, ಸಿದ್ದಯ್ಯ ಬಾಳಿಹಳ್ಳಿಮಠ, ಹನುಮಂತ ಬಿಂಗಿ, ಶೈಲಪ್ಪ ಮೊಟಗಿ, ಶಿವಪ್ಪ ಕಂಪ್ಲಿ, ಚಂದ್ರು ಹಿರೇಮನಿ, ಮೌಲಾಲಿ ಮೊಟಗಿ, ರಮೇಶ ಬಡಿಗೇರ, ಮಾರುತಿಸಾ ರಂಗ್ರೇಜ, ಮರೇಗೌಡ ಬೋದುರ, ಮಹಾಂತಯ್ಯ ಕೋಮಾರಿ, ವೀರೇಶ ಕುರನಾಳ ಇದ್ದರು.