ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಮಹತ್ವದ್ದು

KannadaprabhaNewsNetwork |  
Published : Mar 19, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ನಗರದ ಸ್ವಚ್ಛತೆಗೆ, ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಮಹತ್ವವಾದದ್ದು, ಪೌರಕಾರ್ಮಿಕರು ಕಾರ್ಯನಿರ್ವಹಿಸದಿದ್ದರೆ ಊರು ಕೊಳೆತು ನಾರುತ್ತಿತು. ಊರಿನ ಸೌಂದರ್ಯಕ್ಕೆ, ನೈರ್ಮಲ್ಯತೆಗೆ ಕಾರಣವಾಗಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪ್ರತಾಪ್ ಮದಕರಿ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು ನಗರದ ಸ್ವಚ್ಛತೆಗೆ, ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಮಹತ್ವವಾದದ್ದು, ಪೌರಕಾರ್ಮಿಕರು ಕಾರ್ಯನಿರ್ವಹಿಸದಿದ್ದರೆ ಊರು ಕೊಳೆತು ನಾರುತ್ತಿತು. ಊರಿನ ಸೌಂದರ್ಯಕ್ಕೆ, ನೈರ್ಮಲ್ಯತೆಗೆ ಕಾರಣವಾಗಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪ್ರತಾಪ್ ಮದಕರಿ ಹೇಳಿದರು.ನಗರದ ಡಾ.ಪುನೀತ್‌ರಾಜ್‌ಕುಮಾರ್ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ನಗರ ಸಂಚಾಲನ ಸಮಿತಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ಜನ್ಮದಿನ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆ ನೆರವೇರಿಸಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಲ್ಲದಿದ್ದರೆ ಅನೇಕ ರೋಗಗಳು ಹರಡಿ ನಾವೆಲ್ಲಾ ಅನಾರೋಗ್ಯಕ್ಕೆ ತುತ್ತಾಗಬೇಕಾಗಿತ್ತು. ಸಾವು ನೋವಿಗೂ ಕಾರಣವಾಗುತ್ತಿತ್ತು. ಆದರೆ ಇದಕ್ಕೆ ಅವಕಾಶವಾಗದಂತೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಿರ್ವಹಿಸಿ ಆರೋಗ್ಯವಂತ ಪರಿಸರ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಪೌರಕಾರ್ಮಿಕರನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು, ಅವರ ಸೇವಾಕಾರ್ಯದಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.

ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಂಪತ್‌ ಕುಮಾರ್, ಸಹ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ಗುರುರಾಜ್ ಟಿ, ಲೋಕೇಶ್, ಲಕ್ಷ್ಮೀಕಾಂತ್, ವೆಂಕಟೇಶ್, ವಕೀಲರಾದ ಗಂಗಣ್ಣ, ಪ್ರದೀಪ್,ರಿಜಿಸ್ಟ್ರಾರ್ ಇಲಾಖೆ ನಿವೃತ್ತ ನೌಕರ ವಿಜಯ್‌ಕುಮಾರ್, ನಂದಿನಿ, ಮಾನವ ಬಂಧುತ್ವ ವೇದಿಕೆಯ ನಗರ ಸಂಚಾಲಕ ಎಚ್.ಸಾಗರ್,ಜಿಲ್ಲಾ ಸಹ ಸಂಚಾಲಕ ಅಭೀಶಕ್‌ಯಾದವ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ