ರೋಗಿಗಳ ಆರೈಕೆಯಲ್ಲಿ ದಾದಿಯರ ಸೇವೆ ಶ್ರೇಷ್ಠ: ಡಾ.ವಜ್ಜರಮಟ್ಟಿಮಠ

KannadaprabhaNewsNetwork | Published : May 17, 2024 12:31 AM

ಸಾರಾಂಶ

ಮಹಾಲಿಂಗಪುರದ ಡಾ.ವಿ.ಪಿ ಕನಕರಡ್ಡಿ ಮೆಮೋರಿಯಲ್ ನರ್ಸಿಂಗ್‌ ಕಾಲೇಜಿನಲ್ಲಿ ಕೇಕ್ ಕಟ್‌ ಮಾಡುವ ಮೂಲಕ ವಿಶ್ವ ದಾದಿಯರ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಆಸ್ಪತ್ರೆಯ ದಾದಿಯರ ಸೇವೆ ಸರ್ವಶ್ರೇಷ್ಠ ಸೇವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಎಂ. ವಜ್ಜರಮಟ್ಟಿಮಠ ಹೇಳಿದರು.

ಸ್ಥಳೀಯ ಡಾ.ವಿ.ಪಿ ಕನಕರಡ್ಡಿ ಮೆಮೋರಿಯಲ್ ನರ್ಸಿಂಗ್‌ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಅವರು ಮಾತನಾಡಿ, ವೆಂಕಟೇಶ ಆಸ್ಪತ್ರೆ ಮೂಲಕ ಆಪ್ತ ಆರೋಗ್ಯ ಸೇವೆ ನೀಡುತ್ತಿದ್ದ ಡಾ. ಅಜಿತ ಕನಕರಡ್ಡಿ ನರ್ಸಿಂಗ್‌ ಕಾಲೇಜು ಸ್ಥಾಪಿಸುವ ಮೂಲಕ ಸಮಾಜಕ್ಕೆ ದಾದಿಯರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕೆಎಲ್ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವಂತೆ ಆಸ್ಪತ್ರೆಯ ದಾದಿಯರು ಆರೋಗ್ಯದ ಭಾಗ್ಯದಾತೆಯರು. ಯಾರು ಸೇವೆಯಲ್ಲಿ ದೇವರನ್ನು ಕಾಣುತ್ತಾರೋ ಅವರು ರೋಗಿಗಳಿಗೆ ದೇವರಾಗಿ ಕಾಣುತ್ತಾರೆ. ಇಂಥ ಅಮೂಲ್ಯ ಸೇವೆಯ ವೃತ್ತಿ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದರು.

ಠಾಣಾಧಿಕಾರಿ ಪ್ರವೀಣ ಬೀಳಗಿ ಮಾತನಾಡಿ, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗಳು ರಜೆಯಿಲ್ಲದ ಸದಾ ಬ್ಯುಜಿಯಾಗಿಸುವ ನಿರಂತರ ಸೇವೆಯ ವೃತ್ತಿಯಾಗಿದ್ದು, ಸಾರ್ವಜನಿಕ ಸೇವೆಗೆ ಬದ್ಧರಾಗಿರಬೇಕು ಎಂದರು. ಪ್ರಾಚಾರ್ಯ ಸವಿತಾ ಹೆಬ್ಬಾಳ, ವೈಷ್ಣವಿ ಒಂಟಮೂರಿ ಮಾತನಾಡಿದರು.

ಇದಕ್ಕೂ ಮುನ್ನ ಶ್ರೇಷ್ಠ ದಾದಿ ದಿ.ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕ್ಯಾಂಡಲ್ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೇಕ್ ಕಟ್‌ ಮಾಡುವ ಮೂಲಕ ನೈಟಿಂಗೇಲ್ ಜನ್ಮದಿನದ ವಾರ್ಷಿಕೋತ್ಸವ ಆಚರಿಸಲಾಯಿತು. ವೇದಿಕೆ ಮುಂಭಾಗದಲ್ಲಿ ನರ್ಸ್‌ ಲೋಗೋ ಮತ್ತು ಈ ವರ್ಷದ ಥೀಮ್ ಘೋಷವಾಕ್ಯದ ಬಗ್ಗೆ ರಂಗೋಲಿ ಚಿತ್ತಾರ ಬಿಡಿಸಿ ಸ್ವಾಗತಿಸಲಾಯಿತು.

ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ವಾಣಿ ಉಪ್ಪಾರ, ಕವಿತಾ ಗುಡದನ್ನವರ, ಪ್ರಜ್ವಲ ತೋಟಗಿ, ಮೊಹಮ್ಮದ ಮುಧೋಳ ಅವರಿಗೆ ಅಭಿನಂದಿಸಲಾಯಿತು. ಡಾ.ಅಜಿತ ಕನಕರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಆನಂದ, ವಿನಾಯಕ, ಸವಿತಾ, ಸಂಗೀತಾ, ಶಿವಾನಂದ ಇದ್ದರು. ಕವಿತಾ, ಉಮಾ ಪ್ರಾರ್ಥನೆ ಹಾಡಿದರು. ವಾಣಿ ಉಪ್ಪಾರ ಸ್ವಾಗತಿಸಿದರು. ಧೃತಿ, ಗಂಗಾಧರ ನಿರೂಪಿಸಿದರು. ಯಶೋಧಾ ವಂದಿಸಿದರು.

Share this article