ಶಿಕ್ಷಕರು, ವೈದ್ಯರ ಸೇವೆ ಸದಾ ಸ್ಮರಣೀಯ: ಶ್ರೀಗಳು

KannadaprabhaNewsNetwork | Published : Jun 2, 2024 1:46 AM

ಸಾರಾಂಶ

ಶಿಕ್ಷಣದ ಮೂಲಕ ಜೀವನ ಕೊಟ್ಟ ಶಿಕ್ಷಕರನ್ನು ಹಾಗೂ ಜೀವವನ್ನೇ ಬದುಕಿಸಿಕೊಡುವ ವೈದ್ಯರನ್ನು ಸಾಮಾನ್ಯವಾಗಿ ಯಾರೂ ಮರೆಯದೇ ನೆನಪಿಟ್ಟುಕೊಳ್ಳುತ್ತಾರೆ. ಇವರ ಸೇವೆ ಸದಾ ಸ್ಮರಣೀಯ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.

- ಹಿರೇಕಲ್ಮಠದ ಸಮುದಾಯ ಭವನದಲ್ಲಿ ಡಾ. ಕೆಂಚಪ್ಪ ಆರ್. ಬಂಟಿ ಸನ್ಮಾನ ಸಮಾರಂಭ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಶಿಕ್ಷಣದ ಮೂಲಕ ಜೀವನ ಕೊಟ್ಟ ಶಿಕ್ಷಕರನ್ನು ಹಾಗೂ ಜೀವವನ್ನೇ ಬದುಕಿಸಿಕೊಡುವ ವೈದ್ಯರನ್ನು ಸಾಮಾನ್ಯವಾಗಿ ಯಾರೂ ಮರೆಯದೇ ನೆನಪಿಟ್ಟುಕೊಳ್ಳುತ್ತಾರೆ. ಇವರ ಸೇವೆ ಸದಾ ಸ್ಮರಣೀಯ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಹಿರೇಕಲ್ಮಠದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಿವೃತ್ತ ಹೊನ್ನಾಳಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್. ಬಂಟಿ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಡಾ. ಕೆಂಚಪ್ಪ ಆರ್. ಬಂಟಿ ಅವರು ಅತ್ಯಂತ ಬಡರೈತ ಕುಟುಂಬದಲ್ಲಿ ಜನಿಸಿದವರು. ಪ್ರತಿಭೆಯಿಂದಲೇ ವೈದ್ಯಕೀಯ ಶಿಕ್ಷಣ ಪಡೆದು ಹುಟ್ಟೂರಾದ ಹೊನ್ನಾಳಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಜನತೆ ಅಕ್ಕಪಕ್ಕದ ಶಿವಮೊಗ್ಗ ಅಥವಾ ದಾವಣೆಗೆರೆ ಹೋಗಿ ಹೆಚ್ಚಿನ ಹಣ ಖರ್ಚು ಮಾಡುವುದನ್ನು ನೋಡಿ, ಹೊನ್ನಾಳಿಯಲ್ಲಿಯೇ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿದರು. ಬಳಿಕ ಎಷ್ಟೇ ಕಷ್ಟವಾದರೂ ಹೊನ್ನಾಳಿಯಲ್ಲಿಯೇ ದೇವಿ ನರ್ಸಿಂಗ್ ಹೋಂ ಆರಂಭಿಸಿದ್ದಾರೆ ಎಂದು ಶ್ಲಾಘಿಸಿದರು.

ಡಾ. ಕೆಂಚಪ್ಪ ಆರ್. ಬಂಟಿ ನಿವೃತ್ತಿ ಹಿನ್ನೆಲೆ ನಡೆದ ಸಮಾರಂಭ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ನೌಕರರ ಸಂಘ ನೇತೃತ್ವದಲ್ಲಿ ದಾವಣಗೆರೆ ಚಿಗಟೇರಿ ಆಸ್ಪತ್ರೆ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪುನರ್ಮನನ ಕಾರ್ಯಾಗಾರ ಹಾಗೂ ತಂಬಾಕು ವಿರೋಧಿ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹೊನ್ನಾಳಿ ತಾಲೂಕು ಆಸ್ಪತ್ರೆ ವೈದ್ಯ ಡಾ.ರಾಜ್‌ಕುಮಾರ್ ಅವರು ತಂಬಾಕು ಸೇವನೆ ದುಷ್ಪರಿಣಾಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಡಾ. ಜಿ.ಬಿ.ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ, ಸಿಡಿಪಿಒ ಜ್ಯೋತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಸರ್ಕಾರಿ ನೌಕರರ ಮಾಜಿ ಅಧ್ಯಕ್ಷ ಕುಮಾರ್, ಹೊನ್ನಾಳಿ ಹಾಲಿ ಆಧ್ಯಕ್ಷ ಆರ್.ಎಸ್. ಪಾಟೀಲ್, ನ್ಯಾಮತಿ ಅಧ್ಯಕ್ಷ ಸಂತೋಷ್, ಜಿಲ್ಲಾ ಮತ್ತು ತಾಲೂಕಿನ ಎಲ್ಲ ಪಿಎಚ್‌ಸಿ, ವೈದ್ಯಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯವರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ನೌಕರರು ಉಪಸ್ಥಿತರಿದ್ದರು.

- - - -1ಎಚ್.ಎಲ್.ಐ4:

ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಆರ್. ಬಂಟಿ ಸನ್ಮಾನ ಸಮಾರಂಭವನ್ನು ಹಿರೇಕಲ್ಮಠ ಸ್ವಾಮೀಜಿ ಉದ್ಘಾಟಿಸಿದರು. ಡಾ. ಕೆಂಚಪ್ಪ ಆರ್. ಬಂಟಿ ಕುಟಂಬ, ವೈದ್ಯಾಧಿಕಾರಿಗಳು, ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Share this article