ಕನ್ನಡಪ್ರಭ ವಾರ್ತೆ ಬೇಲೂರು
ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದಿಂದ ಪಟ್ಟಣದ ಶಾಂತಲಾ ಪ್ರೌಢಶಾಲೆ ಆವರಣ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಒಂದಿಲ್ಲೊಂದು ಕಾಯಿಲೆ ಸಾಮಾನ್ಯ. ಆದರೆ ತಮಗಿರುವ ಕಾಯಿಲೆ ಯಾವುದೆಂದು ತಿಳಿಯಲು ಸಾಧ್ಯವಾಗದೆ ಕೆಲವರು ಅಸುನೀಗುವುದು ಕಾಣುತ್ತೇವೆ. ಜತೆಗೆ ಕೆಲವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ತೆರಳುವುದು ಸಾಮಾನ್ಯ. ಈ ಭಾಗದಲ್ಲಿ ಹೆಚ್ಚಾಗಿ ಮಂಗಳೂರು ಅಥವಾ ಬೆಂಗಳೂರಿಗೆ ತೆರಳುತ್ತಾರೆ. ಆದರೆ ಬೇಲೂರು ಜನರಿಗೆ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಮತ್ತು ತಪಾಸಣೆ ಮಾಡಿಸುವುದಕ್ಕಾಗಿ ಮಂಗಳೂರಿನಿನ ಕಣಚೂರು ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರ ತಂಡವನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸುತ್ತಿರುವುದು ಸಹಕಾರಿಯಾಗಿದೆ. ಅಲ್ಲದೆ ಬೇಲೂರಿನಿಂದ ಕಣಚೂರು ಆಸ್ಪತ್ರೆಗೆ ರೋಗಿಗಳು ಹೋಗಿ ಬರಲು ಕೆಎಸ್‌ಆರ್‌ಟಿಸಿ ಬಸ್ ಬಿಡಿಸುವುದಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಹಾಜಿ ಯುಕೆ ಮೋನು ಮಾತನಾಡಿ, ನನಗೂ ಕಾರ್ಮಿಕನಾಗಿ ಕೆಲಸ ಮಾಡಿ ಮತ್ತು ಮಾಡಿಸಿದ ಅನುಭವ ಇದೆ. ೧೪ ವರ್ಷಗಳ ಹಿಂದೆ ಕಣಚೂರಿನಲ್ಲಿ ೧೨೦೦ ಬೆಡ್‌ಗಳಿರುವ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದ್ದೇವೆ. ಆದರೆ ಬಡವರು ಹಣವಿಲ್ಲವೆಂದು ಚಿಕಿತ್ಸೆ ಪಡೆಯದೆ ನರಳಬಾರದು ಎಂದು ಉಚಿತವಾಗಿ ವೈದ್ಯರಿಂದ ತಪಾಸಣೆ ಮಾಡುತ್ತೇವೆ. ರೋಗಿಗಳ ಅನುಕೂಲಕ್ಕಾಗಿ ಉಚಿತವಾಗಿ ಬೆಳಗ್ಗೆ ಕಾಫಿ, ತಿಂಡಿ, ಮಧ್ಯಾಹ್ನ ಊಟ, ಸಂಜೆ ಕಾಫಿ, ರಾತ್ರಿ ಊಟವನ್ನು ಕೊಡುತ್ತೇವೆ. ಆದರೆ ಔಷಧ, ಮಾತ್ರೆಗೆ ಮಾತ್ರ ಹಣವನ್ನು ಪಡೆಯುತ್ತೇವೆ ಹೊರತು ಬೇರೆಯದಕ್ಕೆ ಹಣ ಪಡೆಯುವುದಿಲ್ಲ. ಇದರೊಂದಿಗೆ ಅನಾಥರನ್ನು ಕರೆ ತಂದರೆ ಅವರಿಗೂ ಉಚಿತವಾಗಿ ಟ್ರಸ್ಟ್‌ನಿಂದ ಚಿಕಿತ್ಸೆ ನೀಡಿ ಸೌಲಭ್ಯ ಒದಗಿಸುತ್ತೇವೆ. ಆಸ್ಪತ್ರೆಗೆ ಬಂದು ಹೋಗುವ ರೋಗಿಗಳ ಅನುಕೂಲಕ್ಕಾಗಿ ಬೇಲೂರಿನಿಂದ ಕಣಚೂರು ಆಸ್ಪತ್ರೆಗೆ ಬಸ್ ಬಂದು ಹೋಗುವಂತೆ ಮಾಡಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕು ಎಂದರು.ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಕಣಚೂರು ಮೆಡಿಕಲ್ ಕಾಲೇಜು ವೈದ್ಯರಾದ ಡಾ.ಶ್ರೀಕಾಂತ್ ಹೆಗ್ಡೆ, ಡಾ.ಅಂಜನ್ ಕುಮಾರ್, ಶಾಂತಲಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಭಗವಾನ್, ಕಸಾಪ ಅಧ್ಯಕ್ಷ ಮಂಜೇಗೌಡ, ಗೌರವ ಕಾರ್ಯದರ್ಶಿ ಶಿವರಾಜ್, ಕಾವೇರಿ ಕ್ಲಿನಿಕ್ ವೈದ್ಯ ಡಾ.ಚಂದ್ರಮೌಳಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ತಾರಾಮಣಿ, ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದ ಅಧ್ಯಕ್ಷ ಕೇಬಲ್ ವಿಜಯ್ ಕುಮಾರ್, ಗೌರವಾಧ್ಯಕ್ಷರಾದ ನಜೀರುದ್ದೀನ್ ಶಹಜಾದ್, ಅಚ್ಚುತರಾವ್, ಪ್ರಧಾನ ಕಾರ್ಯದರ್ಶಿ ಸಮೀರ್, ಉಪಾಧ್ಯಕ್ಷ ಬಾಬುರಾವ್, ಅನೀಲ್, ಸುಧೀಂದ್ರ ಸೇರಿದಂತೆ ಇತರರಿದ್ದರು.