ಜಿಲ್ಲಾಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ

KannadaprabhaNewsNetwork |  
Published : Aug 16, 2025, 12:00 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಆರೋಗ್ಯ ಮತ್ತು ನೀರಾವರಿ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ. ಕೊಳ್ಳೇಗಾಲ

ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಆರೋಗ್ಯ ಮತ್ತು ನೀರಾವರಿ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ

ಮಾತನಾಡಿ, ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಬಡವರ ಪರ ಸರ್ಕಾರ ಕೆಲಸ ಮಾಡುತ್ತಿದೆ. ನೀರಾವರಿ ಸಚಿವರಾದ ಡಿ ಕೆ ಶಿವಕುಮಾರ್ ಅವರು ಜಿಲ್ಲೆಯ ಸುವರ್ಣಾವತಿಗೆ 70 ಕೋಟಿ ರು., ಗುಂಡಾಲ್ ಜಲಾಶಯದ ಅಭಿವೃದ್ಧಿಗೆ 50 ಕೋಟಿ ರು., ಹೊಂಗನೂರು ಹಿರಿಕೆರೆಗೆ 14.5 ಕೋಟಿ ರು. ನೀಡುವ ಜೊತೆಗೆ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ.

ಪಟ್ಟಣದ ಮುಡಿಗುಂಡದಲ್ಲಿ ಜಿಲ್ಲಾ ಹಂತದ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಡಿಗುಂಡ ಸೇತುವೆ ಅಭಿವೃದ್ಧಿಗೆ 15 ಕೋಟಿ ರು. ನೀಡಿದೆ. ಕಳೆದ ಬಾರಿ ನೀಡಿದ್ದ ನೂರು ಕೋಟಿ ರು. ಅನುದಾನವನ್ನು ಎಲ್ಲಾ ಧರ್ಮ. ವರ್ಗಗಳ ಸಮುಧಾಯ ಭವನಗಳಿಗೆ ಹಂಚಿಕೆ ಮಾಡಿದ್ದೇವೆ. ಸರ್ಕಾರ ನೀಡಿರುವ 50 ಕೋಟಿ ರು. ಅನುದಾನದಲ್ಲಿ ಗ್ರಾಮೀಣ ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಬಳಸಲು ಅವಕಾಶವಿದೆ.

ಮಹದೇಶ್ವರ ಕಾಲೇಜು ಕ್ರೀಡಾಂಗಣ ಅಭಿವೃದ್ಧಿಗೆ ಸರ್ಕಾರ 3 ಕೋಟಿ ರು. ಅನುಮೋದನೆ ನೀಡಿದೆ. ಉಸ್ತುವಾರಿ ಸಚಿವ ವೆಂಕಟೇಶ್ ಅವರು ಪರಿಶಿಷ್ಟರ ಕಲ್ಯಾಣಕ್ಕಾಗಿ ನೂಲು ಬಿಚ್ಚಣಿದಾರರ ಅಭಿವೃದ್ಧಿಗೆ 15 ಕೋಟಿ ರು. ಅನುದಾನ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಯುವ ಪೀಳಿಗೆ ದೇಶಕ್ಕೆ ಸ್ವತಂತ್ರ ತಂದುಕೊಡಲು ಶ್ರಮಿಸಿದ ಗಣ್ಯ ಮಹನೀಯರನ್ನು ಸ್ಮರಿಸುವ ಜೊತೆಗೆ ಉತ್ತಮ ದೇಶ ಭಕ್ತರಾಗಬೇಕು. ಆಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ನಾವೆಲ್ಲರೂ ಭಾರತೀಯರೆಂಬ ಮನೋಭಾವ ಹೊಂದೋಣ. ದೇಶದ ಐಕ್ಯತೆಗೆ ಧಕ್ಕೆ ತರದಂತೆ ಅಭಿವೃದ್ಧಿಗೆ ಸಹಕರಿಸೋಣ ಎಂದರು .

ಉಪವಿಭಾಗಾಧಿಕಾರಿ ಮೀನಾ, ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ರಾಜೇಂದ್ರ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ, ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ತಹಸೀಲ್ದಾರ್ ಬಸವರಾಜು, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಅಕ್ಷರ ದಾಸೋಹ ಅಧಿಕಾರಿ ರಂ ಗಸ್ವಾಮಿ, ನಗರಸಭೆ ಆಯುಕ್ತ ರಮೇಶ, ಸ್ವಾಮಿ ನಂಜಪ್ಪ, ರಾಘವೇಂದ್ರ, ಬಸ್ತಿಪುರ ಶಾಂತರಾಜು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!