ರಾಜ್ಯ ಸರ್ಕಾರ ದಿವಾಳಿಯಾಗಿ ಕೋಮಾ ತಲುಪಿದೆ

KannadaprabhaNewsNetwork | Published : Jan 23, 2025 12:48 AM

ಸಾರಾಂಶ

ರಾಜ್ಯ ಸರ್ಕಾರ ಬಸ್ ದರ, ಸ್ಟಾಂಪ್ ಡ್ಯೂಟಿ, ತೆರಿಗೆ, ಹಾಲಿನ ದರ ಹೆಚ್ಚಳ, ಮೆಟ್ರೋ ದರ ಹೆಚ್ಚಳ ಹೀಗೆ ಎಲ್ಲಾ ವಿಧದಲ್ಲೂ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬರೆ ಹಾಕಿದೆ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೋಮಾ ಹಂತ ತಲುಪಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯ ಸರ್ಕಾರ ಬಸ್ ದರ, ಸ್ಟಾಂಪ್ ಡ್ಯೂಟಿ, ತೆರಿಗೆ, ಹಾಲಿನ ದರ ಹೆಚ್ಚಳ, ಮೆಟ್ರೋ ದರ ಹೆಚ್ಚಳ ಹೀಗೆ ಎಲ್ಲಾ ವಿಧದಲ್ಲೂ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬರೆ ಹಾಕಿದೆ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕೋಮಾ ಹಂತ ತಲುಪಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಬ್ಯಾಂಕ್ ದರೋಡೆ, ಹಸುವಿನ ಕೆಚ್ಚಲು ಕೊಯ್ಯುವುದು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೀಗೆ ನಾನಾ ವಿಧವಾದ ಅಪರಾಧಗಳು ಜರುಗುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಸರ್ಕಾರ ಐಸಿಯುನಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸುವ ವೇಳೆ 25,000 ಕೋಟಿ ರು.ಗಳ ಸಾಲ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ರಾಜ್ಯದ ಜನತೆ ಮೇಲೆ ಸಾಲದ ಹೊರೆಯಾಗಬಾರದೆಂದು ನಾವು ಸಾಲ ತೆಗೆದುಕೊಂಡಿಲ್ಲ. ಇನ್ನೇನು ಕೇರಳ ರಾಜ್ಯದ ರೀತಿ ಭಿಕ್ಷೆ ಬೇಡುವ ಅಂತ ತಲುಪಲಿದೆ. ಅವರದೇ ಪಕ್ಷದ ಶಾಸಕರುಗಳು ಅಭಿವೃದ್ಧಿಗೆ ಹಣವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುತ್ತಾರೆ. ರಾಜ್ಯದ ಎಲ್ಲೆಡೆ ಭ್ರಷ್ಟಾಚಾರ ಅತಿಯಾಗುತ್ತಿದೆ. ಇದು 60% ಕಮಿಷನ್ ಸರ್ಕಾರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯಿಂದ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ. ಎಂದು ಭವಿಷ್ಯ ನುಡಿದರು. ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆಯಿಂದ ನಡೆಯುವುದರಿಂದ ಯಾವುದೇ ಗೊಂದಲವಿಲ್ಲ ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ. ಗೌಡ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿಪಿ ರಂಗನಾಥ್, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ಚಿಕ್ಕನಕೋಟೆ ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.

Share this article