ಹಾನಗಲ್ಲ: ಬರಗಾಲ ಘೋಷಣೆ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಮಾತ್ರವಲ್ಲ, ರಾಜ್ಯದಲ್ಲಿ ಆಡಳಿತವೇ ಸತ್ತು ಹೋಗಿದೆ, ಎಲ್ಲದಕ್ಕೂ ಕೇಂದ್ರದ ಕಡೆಗೆ ನೋಡುವುದಾದರೆ ನಿಮ್ಮ ಕೆಲಸ ಏನು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಕಿಡಿ ಕಾರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಇದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಅವರಲ್ಲಿ ಮನಸ್ಸಿಲ್ಲ. ಬಿಜೆಪಿಗೆ ಈ ಬಾರಿ ಎಲ್ಲ ಗ್ರಾಪಂ, ಜಿಪಂ, ತಾಪಂ ಚುನಾವಣೆ ಗೆಲ್ಲುವ ವಿಶ್ವಸವಿದೆ. ಹಾನಗಲ್ಲ ತಾಲೂಕಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿಯೇ ಎಲ್ಲ ಚುನಾವಣೆ ಎದುರಿಸುತ್ತೇವೆ. ಇದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಿಕ್ಕಿದೆ. ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಬಲಾಢ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಮಾಜಿ ಶಾಸಕ ಶಿವರಾಜ ಸಜ್ಜನ, ಶಿವಾನಂದ ಮ್ಯಾಗೇರ, ರಾಜಶೇಖರ ಕಟ್ಟೇಗೌಡರ, ನಾಗರಾಜ ಉದಾಸಿ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ಮಾಲತೇಶ ಸೊಪ್ಪಿನ, ಭೋಜರಾಜ ಕರೂದಿ, ರಾಘವೇಂದ್ರ ತಹಸೀಲ್ದಾರ್, ಕೃಷ್ಣ ಈಳಿಗೇರ, ನಿಂಗಪ್ಪ ಗೊಬ್ಬೇರ, ಚಂದ್ರಣ್ಣ ಹರಿಜನ, ಗಣೇಶಪ್ಪ ಕೋಡಿಹಳ್ಳಿ, ರಾಜು ಗೌಳಿ, ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಗೌಳಿ, ಸುನೀಲ ಹಿರೇಮಠ ಮೊದಲಾದವರು ಇದ್ದರು.