ಕನ್ನಡಪ್ರಭ ವಾರ್ತೆ ಹನೂರು
ಮೇಕೆ ಕುರಿಗಳನ್ನು ಗುರಿಯಾಗಿಸಿ ದಾಳಿ ಮಾಡಿ ಕೊಂದು ತಿನ್ನುತ್ತಿರುವ ಚಿರತೆ ಪ್ರತಿ ಎರಡು ಮೂರು ದಿನದ ಒಳಗಡೆ ರೈತರ ಜಮೀನುಗಳಲ್ಲಿ ಓಡಾಡಿರುವ ಹೆಜ್ಜೆ ಗುರುತಿನ ಜೊತೆ ತೋಟದ ಮನೆಯ ಸುತ್ತಮುತ್ತಲಿನಲ್ಲೂ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಮೇಕೆ ಮತ್ತು ಕುರಿ ಮತ್ತು ನಾಯಿಗಳನ್ನು ಗುರಿಯಾಗಿಸಿಕೊಂಡು ಚಿರತೆ ಬೇಟೆಯಾಡುತ್ತಿದೆ. ಇದರಿಂದಾಗಿ ಮನುಷ್ಯನ ಮೇಲೆ ಚಿರತೆ ದಾಳಿ ಮಾಡಿದರೆ ಏನು ಮಾಡುವುದು ಎಂದು ರೈತರು ಆತಂಕದಲ್ಲೇ ಓಡಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.ಹೆಜ್ಜೆ ಗುರುತು: ದಿನನಿತ್ಯ ರಾತ್ರಿ ವೇಳೆ ಹೊರಬರುವ ಚಿರತೆ ಬೋನ್ ಇಡಲಾಗಿರುವ ಸ್ಥಳದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಓಡಾಡುತ್ತಿರುವ ಚಿರತೆಯ ಹೆಜ್ಜೆ ಗುರುತು ಸಹ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಾಗಣ್ಣ ನಗರ ಅಂಬಿಕಾಪುರ ಮತ್ತು ಬಸಪ್ಪನ ದೊಡ್ಡಿ ವಿವಿಧಡೆ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗುತ್ತಿದ್ದು ಚಾಲಾಕಿ ಚಿರತೆ ಬೋನಿನ ಸಮೀಪದಲ್ಲಿ ಓಡಾಡುತ್ತಿದರೂ ಬೋನಿಗೆ ಬೀಳದೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಇದರಿಂದಾಗಿ ರೈತರು ಭಯದಲ್ಲೇ ಕಾಲ ಕಳೆಯುವಂತಾಗಿದೆ.ಡ್ರೋಣ್ ಕ್ಯಾಮೆರಾ ಬಳಸಿ ರೈತರಿಂದ ಒತ್ತಾಯ: ನಿರಂತರವಾಗಿ ರಾತ್ರಿ ವೇಳೆ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ಗಂಗನದೊಡ್ಡಿ ಬಸಪ್ಪನ ದೊಡ್ಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಚಿರತೆಯನ್ನು ಡ್ರೋಣ್ ಕ್ಯಾಮೆರಾ ಬಳಸಿ, ಪಟಾಕಿ ಸಿಡಿಸಿ ಬಲೆ ಹಾಕಿ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ನಿರಂತರ ಶೋಧನೆಯಲ್ಲಿ ಅರಣ್ಯ ಗಸ್ತು ಪಾಲಕ ಅಶೋಕ್ ಹಾಗೂ ಈಟಿಎಫ್ ಅರಣ್ಯ ಸಿಬ್ಬಂದಿ ಗಂಗನದೊಡ್ಡಿ ಬಸಪ್ಪನ ದೊಡ್ಡಿ ಅರಕನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಾಗಿ ಸಿಬ್ಬಂದಿ ಶೋಧನೆ ನಡೆಸುತ್ತಿದ್ದಾರೆ.