ಮೀಸಲಾತಿ ಹೆಚ್ಚಳ ದೊರಕುವವರೆಗೂ ಹೋರಾಟ: ಅಣ್ಣಪ್ಪ

KannadaprabhaNewsNetwork |  
Published : Oct 18, 2026, 03:15 AM IST
ಹರಪನಹಳ್ಳಿಯಲ್ಲಿ ಎಸ್ಸಿ, ಎಸ್ಟಿ ಗೆ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿ ಯನ್ನು ಹೈ ಕೋರ್ಟ ರದ್ದು ಪಡಿಸಿರುವ ಸಂಬಂಧ ಮುಂದಿನ ರೂಪರೇಷಗಳ ಕುರಿತು ವಾಲ್ಮೀಕಿ ಸಮಾಜದ ಮುಖಂಡರು ಸಭೆ ಸೇರಿ ಚರ್ಚಿಸಿದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾರಿ ಮಾಡಿದ್ದ ಮೀಸಲಾತಿ ಹೆಚ್ಚಳ ಈಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಪಡಿಸಿರುವ ನಿರ್ಧಾರ ನಮ್ಮ ಸಮಾಜದ ಶಾಂತಿ ಕದಡದಿರಲಿ

ಹರಪನಹಳ್ಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ ಮಾಡಿದ್ದ ಮೀಸಲಾತಿ ಹೆಚ್ಚಳವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಪಡಿಸಿರುವುದು ಬೇಸರದ ಸಂಗತಿಯಾಗಿದ್ದು, ನಾವು ಸುಮ್ಮನಿದ್ದೇವೆ ಅಂದ್ರೆ ಕೈಲಾಗೋದಿಲ್ಲ ಅಂತಲ್ಲ ಹೋರಾಟಕ್ಕೆ ನಿಂತ್ರೆ, ಜಯ ಸಿಗುವವರೆಗೂ ಬಿಡಲ್ಲ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ವೈ.ಡಿ.ಅಣ್ಣಪ್ಪ ಹೇಳಿದ್ದಾರೆ.

ಅವರು ಪಟ್ಟಣದ ವಾಲ್ಮೀಕಿ ಸಭಾಭವನದಲ್ಲಿ ವಿಜಯನಗರ ಜಿಲ್ಲೆ ವಾಲ್ಮೀಕಿ ಸಮಾಜದ ಜಾಗೃತಿ ಸಮಿತಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯ ಮೀಸಲಾತಿ ಹೆಚ್ಚಳ ರದ್ದುಪಡಿಸಿ ಹೊರಡಿಸಿದ ಆದೇಶ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾರಿ ಮಾಡಿದ್ದ ಮೀಸಲಾತಿ ಹೆಚ್ಚಳ ಈಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಪಡಿಸಿರುವ ನಿರ್ಧಾರ ನಮ್ಮ ಸಮಾಜದ ಶಾಂತಿ ಕದಡದಿರಲಿ, ನಮ್ಮದು ಬಲಿಷ್ಠ ಸಮಾಜ ನಮ್ಮ ಹಕ್ಕನ್ನು ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ನುಡಿದರು.

ಮುಂದಿನ ಹೋರಾಟದ ರೂಪರೇಷ ಸಮುದಾಯದವರೊಂದಿಗೆ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದು ರೈಲ್ವೆ ಸ್ಟೇಷನ್ ಗೆ ಮುತ್ತಿಗೆ ಹಾಕಿ ಚಳವಳಿ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದರ ಮುಖಾಂತರ ತಕ್ಕ ಪಾಠ ಕಲಿಸುವಂತಹ ಯೋಜನೆ ಅತಿ ಶೀಘ್ರದಲ್ಲಿ ಪ್ರಕಟಿಸುತ್ತೇವೆ. ಪ್ರತಿ ತಾಲೂಕಿನಲ್ಲೂ ರಸ್ತೆ ತಡೆ ಹಾಗೂ ಇನ್ನಿತರ ರೀತಿಯಲ್ಲಿ ಬಂದ್ ಮಾಡಲಾಗುತ್ತದೆ ಎಂದು ಹೇಳಿದರು.

ವಾಲ್ಮೀಕಿ ನಾಯಕ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ ಮಾತನಾಡಿ, 2022 ರಲ್ಲಿ ಎಸ್ಸಿ ಹಾಗೂ ಎಸ್ಟಿ ಮೀಸಲಾತಿಯಲ್ಲಿ ಶೇ. 50 ರಿಂದ ಶೇ.56ಕ್ಕೆ ಹೆಚ್ಚು ಮಾಡಲಾಗಿತ್ತು, ಆದರೆ ಇಂದು ಷಡ್ಯಂತ್ರದಿಂದ ಮೀಸಲಾತಿ ಕಾನೂನು ಬಾಹಿರ ಎಂಬ ನಿರ್ದಾರಕ್ಕೆ ನಮ್ಮ ದಿಕ್ಕಾರವಿದೆ ಎಂದ ಅವರು, ಹೊರ ರಾಜ್ಯಗಳಲ್ಲಿ ಶೇ.50 ಕ್ಕೂ ಮೀರಿ 76 ರವರೆಗೆ ಮೀಸಲಾತಿ ಇದ್ದರು ಸಂವಿಧಾನಕ್ಕೆ ಅಡ್ಡಿಯಾಗದ್ದು ನಮ್ಮ ರಾಜ್ಯದಲ್ಲಿ ಮಾತ್ರ ಸಂವಿಧಾನದ ಅಡ್ಡಿಯಾಗವುದೇ, ಶೇ.50ಕ್ಕೂ ಹೆಚ್ಚು ಮೀಸಲಾತಿ ಇರಬಾರದು ಎಂದು ಕಾನೂನಿನಲ್ಲಿಯೇ ಇಲ್ಲ. ಆದರೂ ಇಂತ ನಿರ್ಧಾರಕ್ಕೆ ಮುಂದಾಗಿರುವುದು ಸಮಾಜಕ್ಕೆ ಘಾಸಿ ಉಂಟು ಮಾಡಿದೆ. ನಮ್ಮ ಹಕ್ಕು ಪಡೆಯಲು ಹಂತ ಹಂತವಾಗಿ ಪ್ರತಿಭಟನೆಗೆ ಮುಂದಾಗಲಿದ್ದೇವೆ ಎಂದರು.

ವಾಲ್ಮೀಕಿ ಸಮಾಜದ ಮುಖಂಡ, ವಕೀಲ ಬಸವರಾಜ್ ಸಂಗಪ್ಪನವರ್ ಮಾತನಾಡಿ. ಮೀಸಲಾತಿ ಹೆಚ್ಚಿಸುವಂತಹ ಸಂದರ್ಭದಲ್ಲಿ ಸಾಂವಿಧಾನಿಕ ದೃಢತೆ ಮತ್ತು ಕಾರ್ಯ ವಿಧಾನ ವ್ಯವಸ್ಥಿತವಾಗಿ ಚೌಕಟ್ಟಿಗೆ ತಂದುಕೊಂಡು ರಾಜಕೀಯ ಇಚ್ಚಾಶಕ್ತಿ ಉಳ್ಳವರು ಮಾಡಬೇಕಾಗುತ್ತದೆ. ಇದ್ಯಾವುದೂ ಇಲ್ಲದೆ ತೆಗೆದುಕೊಂಡ ನಿರ್ಧಾರ ಸರಿಯಾದ ಕ್ರಮವಲ್ಲ ಇದನ್ನು ಖಂಡಿಸಿ ವಾಲ್ಮೀಕಿ ಸಮಾಜದ ಪ್ರತಿಯೊಬ್ಬರು ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಾಧ್ಯಕ್ಷ ಪವಾಡಿ ಹನುಮಂತಪ್ಪ, ಗೌರವಾಧ್ಯಕ್ಷ ಕುಪ್ಪಿನ ಕೇರಿ ಉಡಚ್ಚಪ್ಪ, ಹಡಗಲಿ ತಾಲೂಕಾಧ್ಯಕ್ಷ ಹೊನ್ನಪ್ಪ, ಕೊಟ್ಟೂರು ತಾಲೂಕಾಧ್ಯಕ್ಷ ಕೆ ಮಂಜಪ್ಪ, ಚಿರಿಬಿ ಕೋಟ್ರೇಶ, ಹಡಗಲಿ ಹನುಮಂತಪ್ಪ, ಟಿ ಉಮಾಕಾಂತ, ಮಂಜುನಾಥ ಕಮ್ಮಾರ, ಆಲ್ದಹಳ್ಳಿ ಷಣ್ಮುಖಪ್ಪ, ಪ್ರಾಣೇಶ್ ವಕೀಲರು, ರೇವಣಸಿದ್ದಪ್ಪ ಮಂಜಪ್ಪ,ಎಂ.ಟಿ.ಸೋಮಣ್ಣ, ಎಚ್.ಟಿ.ಶಿವಯೋಗಿ, ಎಚ್.ಕೆ. ಮಂಜುನಾಥ, ಬಾಣದ ಅಂಜಿನಪ್ಪ, ಗಿರಜ್ಜಿ ನಾಗರಾಜ, ಗಿಡ್ಡಹಳ್ಳಿ ನಾಗರಾಜ, ಪಿ ಪರಶುರಾಮ, ಟಿ.ಕೆಂಚಪ್ಪ, ತೆಲಿಗಿ ಅಂಜಿನಪ್ಪ, ಶಿವಣ್ಣ ಯೋಗೇಶ್, ದುಗ್ಗತ್ತಿ ಮಂಜುನಾಥ, ರಾಜು ಪೂಜಾರ್, ಪದ್ಮಾವತಿ ಶೋಭಾ, ಮಂಜಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸರ್ ಗೆ ಭಯಪಡದೆ ತಪಾಸಣೆ ಮಾಡಿಸಿಕೊಳ್ಳಿ : ಡಾ. ಅನುಷಾ
ಪದವಿ ಜೀವನದ ಮಹತ್ತರವಾದ ಕಾಲಘಟ್ಟ‌: ಡಾ. ಪ್ರಮೋದ್ ಕುಮಾರ್