ಮಕ್ಕಳು ಪುಸ್ತಕ ಓದುವಂತೆ ಆಕರ್ಷಿಸಲು ಸಂಡೆ ಲೈಬ್ರರಿ ಸಹಕಾರಿ

KannadaprabhaNewsNetwork |  
Published : Sep 22, 2026, 01:45 AM IST
21ಕೆಎಂಎನ್ ಡಿ27 | Kannada Prabha

ಸಾರಾಂಶ

‘ಸಂಡೆ ಲೈಬ್ರರಿ’ಯ ಈ ತಿಂಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಂಗ ನಿರ್ದೇಶಕ ಚಂದ್ರು ಅದಮ್ಯ ಅವರು, ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಾಟಕ, ರಂಗಗೀತೆ ಹಾಗೂ ಅಭಿನಯ ಗೀತೆಗಳನ್ನು ಹೇಳಿಕೊಟ್ಟರು. ಜೊತೆಗೆ ನಾಟಕವನ್ನು ಓದಿ ಹೇಳುವ ಮೂಲಕ ರಂಗಾಭಿನಯದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸುಭಾಷ್ ನಗರದ ಶಿವನಂಜಪ್ಪ ಪಾರ್ಕ್‌ನಲ್ಲಿ ಪರಿಚಯ ಪ್ರಕಾಶನದಿಂದ ಮಕ್ಕಳು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲು ಸಂಡೆ ಲೈಬ್ರರಿ ಕಾರ್ಯಕ್ರಮ ನಡೆಯಿತು.

ಪ್ರತಿ ತಿಂಗಳ ಮೂರನೇ ಭಾನುವಾರ ಪಾರ್ಕ್ ನ ದೇವರಕಾಡು ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಂಟಪದ ಮೇಲೆ ಹರಡಲಾದ ಪುಸ್ತಕಗಳ ರಾಶಿಯಿಂದ ತಮಗೆ ಇಷ್ಟವಾದ ಪುಸ್ತಕಗಳನ್ನು ಆಯ್ದುಕೊಂಡ ಮಕ್ಕಳು ಸುಂದರ ನಿಸರ್ಗದ ಮಡಿಲಲ್ಲಿ ಕುಳಿತು ಮಕ್ಕಳು ಓದುತ್ತಿದ್ದ ದೃಶ್ಯ ಕಂಡುಬಂತು.

ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಉತ್ಸಾಹದಿಂದ ಪುಸ್ತಕಗಳನ್ನು ಓದಿದರು. ಓದಿದ ನಂತರ ತಾವು ಅರ್ಥೈಸಿಕೊಂಡ ಕಥೆ ಹಾಗೂ ಪುಸ್ತಕದ ಸಾರಾಂಶವನ್ನು ತಮ್ಮ ಮುಗ್ಧ ಮಾತುಗಳಲ್ಲಿ ಎಲ್ಲರೊಂದಿಗೆ ಹಂಚಿಕೊಂಡರು.

‘ಸಂಡೆ ಲೈಬ್ರರಿ’ಯ ಈ ತಿಂಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಂಗ ನಿರ್ದೇಶಕ ಚಂದ್ರು ಅದಮ್ಯ ಅವರು, ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಾಟಕ, ರಂಗಗೀತೆ ಹಾಗೂ ಅಭಿನಯ ಗೀತೆಗಳನ್ನು ಹೇಳಿಕೊಟ್ಟರು. ಜೊತೆಗೆ ನಾಟಕವನ್ನು ಓದಿ ಹೇಳುವ ಮೂಲಕ ರಂಗಾಭಿನಯದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಿದರು.

ಮಕ್ಕಳು ಸಹ ನಾಟಕದಲ್ಲಿ ಬಂದ ಪಾತ್ರಗಳ ಕುರಿತು ಮುಕ್ತವಾಗಿ ಮಾತನಾಡಿದರು. ಇದೇ ವೇಳೆ ಮಕ್ಕಳಲ್ಲಿ ಓದಿನ ಆಸಕ್ತಿ ಹಾಗೂ ಪುಸ್ತಕಗಳ ಬಗ್ಗೆ ಕುತೂಹಲ ಬೆಳೆಸುವಂತಹ ಹಲವು ಸ್ವಾರಸ್ಯಕರ ಆಟಗಳನ್ನು ಆಡಿಸಲಾಯಿತು.

ಇಂದು ಬಹುತೇ ಮಕ್ಕಳು ಮೊಬೈಲ್, ಟಿವಿ ಹಾಗೂ ಸಿನಿಮಾಗಳಲ್ಲೇ ಹೆಚ್ಚಾಗಿ ಮುಳುಗುತ್ತಿದ್ದು, ಸಂಡೆ ಲೈಬ್ರರಿಯಂತಹ ವಿಶಿಷ್ಟ ಕಾರ್ಯಕ್ರಮ ಮಕ್ಕಳು ಮತ್ತೆ ಪುಸ್ತಕಗಳತ್ತ ಆಕರ್ಷಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ಪೋಷಕರಿಂದ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ಕುಮಾರ್, ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ, ಟಿ.ಡಿ.ನಾಗರಾಜು, ನಾರಾಯಣ್, ಕೆ.ಪಿ.ಬಾಬು, ಬಿ.ಕೆ.ಪುಷ್ಪ, ಭವಾನಿ, ಸುನಿತಾ ಹಾಗೂ ಪ್ರತಿಭಾ ಅವರು ಭಾಗವಹಿಸಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ

ಪಾಂಡವಪುರ:ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಷೇರುದಾರರ ಮಕ್ಕಳಾದ ವಿದ್ಯಾಶ್ರೀ, ಹರ್ಷಿತ ಕೆ.ಪಿ, ಶ್ರೀರಕ್ಷ, ಪಾವನಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್.ಪಿ.ದಿನೇಶ್, ಉಪಾಧ್ಯಕ್ಷೆ ಶೋಭಾ, ಮಾಜಿ ಅಧ್ಯಕ್ಷ, ನಿರ್ದೇಶಕರಾದ ಹೆಚ್.ಜೆ.ರಾಮಕೃಷ್ಣ, ಸಿ.ಮಹದೇವು, ಈರೇಗೌಡ, ಸಿ.ಕೆ.ಲೋಕೇಶ್, ಕುಳ್ಳಯ್ಯ, ಶಿವಶಂಕರ್, ಬೊಮ್ಮರಾಜು, ಎಸ್.ಕೆ.ಉಷಾ, ಬೊಮ್ಮೇಗೌಡ, ಬ್ಯಾಂಕ್ ಮೇಲ್ವಿಚಾರಕ ಸುರೇಶ್ ಎಸ್.ಕೆ., ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅರುಣ್ ಕುಮಾರ್ ಸಿ., ಮಾರಾಟ ಗುಮಾಸ್ತರಾದ ನಾಗರಾಜು ಎನ್.ಆರ್., ಸಿ.ಆರ್.ಸಂತೋಷ್ ಕುಮಾರ್, ಕೆ.ಪವಿತ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಬಸ್ ಗ್ಯಾರಂಟಿ ಇಲ್ಲ.. ಖಾಸಗಿ ಬಸ್‌ಗೆ ಕಾಸಿಲ್ಲ!
ಇಂದು ಗಣೇಶ ವಿಸರ್ಜನೆ: ಬಿಗಿ ಬಂದೋಬಸ್ತ್‌