ಮಿಡಲ್ ಅಕ್ಷರ ಕಲಿಸಿದ ಶಿಕ್ಷಕರದು ಮಹತ್ತರ ಸೇವೆ: ಡಾ.ರಮೇಶ್‌

KannadaprabhaNewsNetwork |  
Published : Feb 02, 2026, 01:15 AM IST
ನೆಲ್ಲಿಕಟ್ಟೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ನೆಲ್ಲಿಕಟ್ಟೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಹಳ್ಳಿಗಳಲ್ಲಿ ಏನೇನೂ ಸೌಲಭ್ಯವೇ ಇಲ್ಲದ ವೇಳೆಯಲ್ಲಿ ಗ್ರಾಮಗಳಲ್ಲಿ ನೆಲೆನಿಂತು ಸಾವಿರಾರು ಜನರಿಗೆ ಅಕ್ಷರ ಕಲಿಸಿದ ಶಿಕ್ಷಕರದು ಮಹತ್ತರ ಸೇವೆ ಎಂದು ನೆಲ್ಲಿಕಟ್ಟೆ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಸಿ.ರಮೇಶ್‌ ತಿಳಿಸಿದರು.

ಭರಮಸಾಗರದ ಸಮೀಪವಿರುವ ನೆಲ್ಲಿಕಟ್ಟೆಯಲ್ಲಿ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

30 ವರ್ಷಗಳಷ್ಟು ಹಿಂದೆ ಊರಲ್ಲಿ ರಸ್ತೆಗಳು ಇರಲಿಲ್ಲ, ವಿದ್ಯುತ್‌ ಇರಲಿಲ್ಲ, ನೀರು ಇರಲಿಲ್ಲ, ಆಧುನಿಕ ಯುಗದ ನೆಟ್‌ ವರ್ಕ್‌ ಇರಲಿಲ್ಲ. ಅಂತಹ ವೇಳೆಯಲ್ಲಿ ಗ್ರಾಮಕ್ಕೆ ಬಂದ ಶಿಕ್ಷಕರು ಗ್ರಾಮೀಣ ಜನರ ಬದುಕಿನ ಕನಸುಗಳನ್ನು ಕಟ್ಟಿದರು. ಅವರ ನಿಸ್ವಾರ್ಥ ಸೇವೆ ಯಾವ ಕಾಲಕ್ಕೂ ನೆನಪಿನಲ್ಲಿಟ್ಟುಕೊಳ್ಳುವಂತದ್ದು ಎಂದರು.

ಗ್ರಾಮದ ಶಾಲೆಯಲ್ಲಿ ಓದಿ ಸುಂದರ ಬದುಕು ಕಟ್ಟಿಕೊಂಡಿರುವ ಎಲ್ಲರೂ ಇಂದು ಸಮಾರಂಭದಲ್ಲಿ ಭಾಗಿಯಾಗಿ ಶಿಕ್ಷಕರ ಸೇವೆಯನ್ನು ಮನಸಾರೆ ಗೌರವಿಸುತ್ತಿದ್ದಾರೆ. ಇದು ಶಿಕ್ಷಕರಿಗೆ ನಮ್ಮ ಗ್ರಾಮದ ಜನರ ಗೌರವ ಎಂದರು.

ಅಮೃತ ಮಹೋತ್ಸವದ ಸಮಿತಿಯ ಅಧ್ಯಕ್ಷ ಜಿ.ಪಿ.ತಿಮ್ಮೇಶ್ ಮತ್ತು ಉಪಾಧ್ಯಕ್ಷ ಕೆ.ಸಂತೋಷ್ ಹಾಗೂ ಕೇಶವಮೂರ್ತಿ, ಶ್ರೀನಿವಾಸ, ತವಂದಪ್ಪ, ಕರಿಯಪ್ಪ, ರಂಗೇಶ್, ಕರಿಚನ್ನಪ್ಪ, ಬಿ ಕಲ್ಲೇಶ್, ಎಚ್ ಆರ್. ಕರಿಯಪ್ಪ ಇದ್ದರು. ಮುಖ್ಯ ಶಿಕ್ಷಕ ವೆಂಕಟೇಶ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಬಿ. ಸದಾಶಿವ ಸ್ವಾಗತಿಸಿದರು. ನೆಲ್ಲಿಕಟ್ಟೆ ಗ್ರಾಮಸ್ಥರು, ಶಿಕ್ಷಕರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ