ಕನ್ನಡಪ್ರಭ ವಾರ್ತೆ ಕೆಜಿಎಫ್ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜಾಗಿಲ್ಲ, ೮, ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕ ಇನ್ನೂ ತಲುಪಿಲ್ಲ. ಮೇ ೩೧ರಿಂದ ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ. ಆದರೆ ಅವರ ಕಲಿಕೆಗೆ ಬೇಕಾದ ಪುಸ್ತಕಗಳೇ ಲಭ್ಯವಿಲ್ಲ.ಮಕ್ಕಳಿಗೆ ಪಠ್ಯ ಪುಸ್ತಕ ಕೊರತೆ
ರಜೆ ಇದ್ದ ಸಮಯದಲ್ಲಿಯೇ ಪಸ್ತಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಿತ್ತು, ಮಕ್ಕಳು ಮರಳಿ ಶಾಲೆಗೆ ಬರುವ ಹೊತ್ತಿಗೆ ಎಲ್ಲ ಸಿದ್ದತೆ ಮಾಡಿಕೊಂಡು ಅವರವನ್ನು ಕಲಿಕೆಗೆ ಅಣಿಗೊಳಿಸಬೇಕಿತ್ತು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ, ತಾತ್ಸರ ಭಾವನೆಯಿಂದ ಮಕ್ಕಳು ಪಾಠದಿಂದ ದೂರ ಉಳಿಯುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ವರ್ಷ ಮತ್ತೆ ಪುಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹೊಸ ಪುಸ್ತಕ ಸಿಗುತ್ತಿಲ್ಲ, ಹಳೆಯ ಪುಸ್ತಕ ಮುಂದುವರಿಸಲು ಸಾಧ್ಯವಾಗುತ್ತಿಲ್ಲ, ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕ ಇಲ್ಲದಿದ್ದರೆ ಪಾಠ ಮಾಡಲು ಆಗುವುದಿಲ್ಲ ಪುಸ್ತಕ ಸಿಗದೆ ಮಕ್ಕಳ ಭವಿಷ್ಯವೇ ಆತಂತ್ರವಾಗಿದೆ.ಮಕ್ಕಳಿಗೆ, ಶಿಕ್ಷಕರಿಗೆ ಹೊರೆ
ತಡವಾಗಿ ಪುಸ್ತಕ ಪೂರೈಸಿದರೆ ಮಕ್ಕಳು, ಶಿಕ್ಷಕರ ಮೇಲೆ ಹೊರೆಯಾಗಲಿದೆ, ಪರಿಪೂರ್ಣ ಕಲಿಕೆ ಸಾಧ್ಯವಾಗುವುದಿಲ್ಲ, ಶಿಕ್ಷಕರು ಒತ್ತಡದಲ್ಲಿ ಬೋಧನೆ ಮಾಡಬೇಕಾದ ಪರಿಸ್ಥತಿ ಉದ್ಬವಿಸುತ್ತದೆ, ವಾರ್ಷಿಕ ಪರೀಕ್ಷೆಯ ಒಳಗೆ ಎಲ್ಲ ಅಧ್ಯಯಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ, ಬೋಧನೆ, ಕಲಿಕೆ ಎರಡೂ ಅರ್ಧಂಬರ್ಧ ಆಗುತ್ತದೆ ಎಂದು ಶಿಕ್ಷರೊಬ್ಬರು ಅಳಲು ತೋಡಿಕೊಂಡರು.ಕೋಟ್ಕೆಜಿಎಫ್ ತಾಲೂಕಿನಲ್ಲಿ ಪಠ್ಯ ಪುಸ್ತಕ ಸರಬರಾಜು ಆಗುತ್ತಿದೆ, ಯಾವುದೇ ಸಮಸ್ಯೆಯಾಗದಂತೆ ಪುಸ್ತಕ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅದ್ಯತೆ ಮೇರೆಗೆ ಪುಸ್ತಕ ತಲುಪಿಸಲಾಗುತ್ತಿದೆ ಸದ್ಯಕ್ಕೆ ಯಾವುದೇ ಸಮಸ್ಯೆಯಾಗುತ್ತಿಲ್ಲ.- ವೆಂಕಟರಮಣಚಾರಿ, ಬಿಇಒ.