ಮಹಿಳೆ ಗಮನ ಬೇರೆಡೆಗೆ ಸೆಳೆದು ಬಳೆ ಅಪಹರಿಸಿದ ಕಳ್ಳ

KannadaprabhaNewsNetwork | Published : Oct 10, 2023 1:01 AM

ಸಾರಾಂಶ

ದಾಬಸ್‌ಪೇಟೆ: ಅಂಗಡಿಯಲ್ಲಿದ್ದ ಮಹಿಳೆ ಗಮನ ಬೇರೆಡೆ ಸೆಳೆದು ಕೈಯಲ್ಲಿದ್ದ 13 ಗ್ರಾಂ ಚಿನ್ನದ ಬಳೆಯನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ದಾಬಸ್‌ಪೇಟೆ: ಅಂಗಡಿಯಲ್ಲಿದ್ದ ಮಹಿಳೆ ಗಮನ ಬೇರೆಡೆ ಸೆಳೆದು ಕೈಯಲ್ಲಿದ್ದ 13 ಗ್ರಾಂ ಚಿನ್ನದ ಬಳೆಯನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಸೋಂಪುರ ಹೋಬಳಿ ಶಿವಗಂಗೆ ಗ್ರಾಮದ ಆಶಾ(56) ಚಿನ್ನದ ಬಳೆ ಕಳೆದುಕೊಂಡವವರಾಗಿದ್ದು, ಇವರು ಪಟ್ಟಣದ ಶಿವಗಂಗೆ ರಸ್ತೆಯಲ್ಲಿರುವ ಧನುಷ್ ಕಾಂಡಿಮೆಂಡ್ಸ್‌ ನಲ್ಲಿ ವ್ಯಾಪಾರದ ವೇಳೆ ಇಬ್ಬರು ಅಪರಿಚಿತರು ಬಂದು ಏನೋ ಕೊಳ್ಳಲು ಕೇಳುವಂತೆ ಕೇಳಿ ವೃದ್ಧೆಯ ಕೈ ಮುಟ್ಟಿದ್ದಾನೆ. ಆಗ ಮಹಿಳೆಗೆ ಅರಿವು ತಪ್ಪಿದ್ದು, ನಂತರ ಆಕೆಯ ಯಜಮಾನರು ಬಂದು ಮಾತನಾಡಿಸುವವರೆಗೂ ಹಾಗೇ ಇದ್ದರು. ಅರಿವು ಬಂದು ಕೈ ನೋಡಿಕೊಂಡಾಗ ಚಿನ್ನದ ಬಳೆ ಇರಲಿಲ್ಲವೆಂದು ಗೊತ್ತಾಗಿದೆ. ಆಶಾ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share this article