ಅಂಬೇಡ್ಕರ್‌ ಸಾಧನೆ ಸೂರ್ಯ, ಚಂದ್ರರು ಇರುವವರೆಗೂ ಶಾಶ್ವತ

KannadaprabhaNewsNetwork | Published : Apr 18, 2025 12:33 AM

ಸಾರಾಂಶ

ಶಿಕ್ಷಣದಿಂದ ಸರ್ವವನ್ನು ಸಾಧಿಸಬಹುದು ಎಂದು ಜಗತ್ತಿಗೆ ತೊರಿಸಿಕೊಟ್ಟ ಬಾಬಾಸಾಹೇಬರು ತಮ್ಮ ಇಡೀ ಜೀವನವನ್ನು ಮನುಕುಲದ ಉದ್ಧಾರಕ್ಕಾಗಿ ಮುಡುಪಾಗಿಟ್ಟ ದೈವಪುರುಷ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದೇಶದ ಸಾಧಕರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಧನೆ ಸೂರ್ಯ ಮತ್ತು ಚಂದ್ರರು ಇರುವವರೆಗೂ ಶಾಶ್ವತ ಎಂದು ಬಿಇಒ ಆರ್. ಕೃಷ್ಣಪ್ಪ ಹೇಳಿದರು.

ಪಟ್ಟಣದ ಸಾರಿಗೆ ನಗರದ ಯಡತೊರೆ ಶಿಕ್ಷಣ ಮಹಾ ವಿದ್ಯಾಲಯದ ಬಿಇಡಿ ಕಾಲೇಜಿನಲ್ಲಿ ಗುರುವಾರ ನಡೆದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪ್ರವರ್ತನ ಸ್ವಾಗತ ಸಮಾರಂಭ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟಕ್ಕೆ ಶಾಶ್ವತ ಬುನಾದಿಯಾಗುವಂತಹ ಸಂವಿಧಾನವನ್ನು ರಚಿಸಿದ ಅವರು ಮಹಾ ನಾಯಕ ಎಂದರು.

ಶಿಕ್ಷಣದಿಂದ ಸರ್ವವನ್ನು ಸಾಧಿಸಬಹುದು ಎಂದು ಜಗತ್ತಿಗೆ ತೊರಿಸಿಕೊಟ್ಟ ಬಾಬಾಸಾಹೇಬರು ತಮ್ಮ ಇಡೀ ಜೀವನವನ್ನು ಮನುಕುಲದ ಉದ್ಧಾರಕ್ಕಾಗಿ ಮುಡುಪಾಗಿಟ್ಟ ದೈವಪುರುಷನಾಗಿದ್ದು ಅವರ ತತ್ವ ಆದರ್ಶ ಮತ್ತು ಜೀವನದ ಸಿದ್ಧಾಂತವನ್ನು ಎಲ್ಲರೂ ಅಳವಡಿಸಿಕೊಂಡರೆ ಸುಂದರ ಮತ್ತು ಸಂತೃಪ್ತ ಬದುಕು ನಡೆಸಬಹುದು ಎಂದು ತಿಳಿಸಿದರು.

ಶಿಕ್ಷಣ ಎಂಬುದು ನಿರಂತರ ಕಲಿಕ ಪ್ರಕ್ರಿಯೆಯಾಗಿದ್ದು ಕಾಲ ಬದಲಾದಂತೆ ಭೋದನಾ ಪದ್ಧತಿ ಬದಲಾಗಬೇಕು. ಆಗಾಗಿ ಬಿಇಡಿ ವಿದ್ಯಾರ್ಥಿಗಳು ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಯುಗಕ್ಕೆ ಒಗ್ಗಿಕೊಂಡು ಭವಿಷ್ಯದ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಎಂ.ಪಿ. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆ ನಿರಂತರ ಚಟುವಟಿಕೆಯಾಗಿದ್ದು ನೀವು ಶ್ರದ್ಧೆಯಿಂದ ಅಧ್ಯಾಯನ ಮಾಡಿ ಸಾಧನೆ ಮಾಡುವುದರ ಜತೆಗೆ ಇತರರಿಗೆ ಮಾದರಿಯಾಗುವಂತೆ ಭೋದನಾ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೆ.ಆರ್. ನಗರ ಪಟ್ಟಣದಲ್ಲಿ ಕಳೆದ 16 ವರ್ಷಗಳಿಂದ ಆರಂಭವಾದ ಯಡತೊರೆ ಬಿಇಡಿ ಕಾಲೇಜು ಎನ್‌.ಸಿ.ಟಿಯಿಂದ ಶಾಶ್ವತ ಸಂಯೋಜನೆ ಮತ್ತು ಮೈಸೂರು ವಿವಿಯಿಂದ ಅಂಗೀಕರಿಸಲ್ಪಟ್ಟಿದ್ದು ಆರಂಭದಿಂದ ಈವರೆಗೆ ಗುಣಾತ್ಮಕ ಫಲಿತಾಂಶ ನೀಡುತ್ತಿದ್ದು ಇದಕ್ಕೆ ಕಾರಣರಾಗಿರುವ ಕಾಲೇಜಿನ ಆಡಳಿತ ಮಂಡಳಿ, ಭೋದನಾ ವೃಂದ ಮತ್ತು ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು.

ಕಾಲೇಜು ಆಡಳಿತ ಮಂಡಳಿ ಸದಸ್ಯ ಜನಾರ್ಧನ್, ವ್ಯವಸ್ಥಾಪಕ ಲೋಕೇಶ್‌ ಭರಣಿ, ಪ್ರಾಂಶುಪಾಲೆ ಎನ್.ಎಸ್. ದೀಪಾ, ಉಪನ್ಯಾಸಕರಾದ ಮಹದೇವ್, ಜಯಶೀಲ, ವಸಂತ, ಮಹೇಶ್ವರಿಸ್ವಾಮಿ, ಕೆ.ಬಿ. ಬೀನಾ, ಜಯರತ್ನ ಮೊದಲಾದವರು ಇದ್ದರು.

----------------

eom/mys/dnm/

Share this article