ಕನ್ನಡಪ್ರಭ ವಾರ್ತೆ, ತುಮಕೂರುಆರ್ ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಮೃತ ಮಟ್ಟಿದ್ದು ಅತ್ಯಂತ ದುರಂತಮಯವಾದದ್ದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಿಷಾದಿಸಿದ್ದಾರೆ.ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೇ ಆಗಲಿ. ಯಾರಿಗೆ ಆಗಲಿ ಜೀವ ಹಾನಿ ಆಗುವಂತದದ್ದು ಯಾರು ಸಹಿಸಿಕೊಳ್ಳಲು ಆಗುವುದಿಲ್ಲ. ಹೆತ್ತವರಿಗೆ ಆದ ನೋವನ್ನು ಭರಿಸಲು ಸಾಧ್ಯವಿಲ್ಲ ಎಂದರು. ತಂಡ ಕಪ್ ಗೆದ್ದಿರುವುದು ಖುಷಿ ವಿಚಾರ ಆಗಿತ್ತು. ಆದರೆ ಆರ್ ಸಿಬಿಯವರು ಸಂಭ್ರಮಾಚರಣೆ ಮಾಡಬೇಕು ಎಂದು ಯಾವ ದೃಷ್ಟಿಯಿಂದ. ಹೇಗೆ ಮಾಡಿದರೋ ಗೊತ್ತಿಲ್ಲ. ನಾನು ಕೇಳಿದ ಹಾಗೆ ಅವತ್ತಿನ ರಾತ್ರಿಯಿಂದ ಬೆಳಗಿನವಾದವರೆಗೂ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಆ ಸಮಯದಲ್ಲಿ ಪೊಲೀಸರು ಬಹಳ ಹರಸಾಹಸಪಟ್ಟು ತಹಬದಿಗೆ ತಂದಿದ್ದಾರೆ. ಮತ್ತೆ ಮಾರನೇ ದಿನ ಅವರನ್ನು ಸ್ವಾಗತ ಮಾಡಿಕೊಂಡು ಕಾರ್ಯ ಕ್ರಮ ಆಯೋಜಿಸಿದ್ದಾರೆ. ಆ ವೇಳೆ ತುಂಬ ಜನ ಸೇರಿದ್ದಾರೆ. ಜನಗಳಿಗೂ ಸಂಭ್ರಮಾಚರಣೆ ಅಂತ ಆಹ್ವಾನ ಕೊಟ್ಟಿದ್ದಾರೆ. ಜನ ತಾನು ಮುಂದು ನಾನು ಮುಂದು ಎಂದು ಮುಗಿಬಿದಿದ್ದಾರೆ. ಗೇಟ್ ತೆಗೆದಿದ್ದರೇ ಈತರ ಘಟನೆಯಾಗುತ್ತಿರಲಿಲ್ಲ. ಅಲ್ಲಿ ಜಾಮ್ ಆಗಿದ್ದರಿಂದ ನೂಕಾಟ ತಳ್ಳಾಟ ಶುರುವಾಗಿದೆ. ಹೀಗಾಗಿ ಇಂತಹದೊಂದು ದುರಂತ ನಡೆದಿದೆ. ಕೆಳಗೆ ಬಿದ್ದವರನ್ನು ತುಳಿದುಕೊಂಡು ಹೋಗಿರುವುದು ಅತ್ಯಂತ ನೋವಿನ ಸಂಗತಿ. ಈ ವೇಳೆ 11 ಜನ ಜೀವವನ್ನು ಕಳೆದುಕೊಂಡಿರುವುದು ಮತ್ತಷ್ಟು ನೋವಿನ ಸಂಗತಿ ಎಂದ ಶ್ರೀಗಳು ಸಾವನಪ್ಪಿರುವವರೆಲ್ಲರೂ ಚಿಕ್ಕಮಕ್ಕಳು, ಮುಂದೆ ಬೆಳೆಯಬೇಕಾದವರು ಎಂದರು.
ನೋವಿನ ಸಂಗತಿ: ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಡೆಸಿದ ಹೋರಾಟದಲ್ಲಿ ಸ್ವಾಮಿಗಳ ಮೇಲೆ ಕೇಸ್ ಹಾಕಿರುವುದು ನೋವಿನ ಸಂಗತಿ. ಆದಷ್ಟು ಬೇಗ ಅದನ್ನು ವಾಪಾಸ್ ತೆಗೆದುಕೊಳ್ಳಲಿ ಎಂದ ಅವರು ಸ್ವಾಮೀಜಿಗಳ ಮೇಲೆ ಹಾಕಿರುವ ಕೇಸ್ ವಾಪಾಸ್ ಪಡೆದರೆ ಸ್ವಾಗತ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನು ಪರಿಗಣಿಸಿದ್ದಾರೆಂದು ಭಾವಿಸುತ್ತೀನಿ ಎಂದ ಶ್ರೀಗಳು ಅಲ್ಲಿ ಶಾಂತಿಯುತವಾಗಿದ್ದರೆ ಏನು ಆಗುತ್ತಿರಲಿಲ್ಲ.ಎಂದರು.ವಾಹನಗಳನ್ನು ತಳ್ಳಾಡಿರುವಂತದ್ದು. ಅಕಸ್ಮಾತ್ ಜೀವವೇ ಹೊಗಿದ್ದರೇ ಎಂದ ಅವರು ಬಹುಮುಖ್ಯವಾಗಿ ಅಲ್ಲಿ ಯಾರ ಪ್ರಾಣಕ್ಕೂ ಕುತ್ತು ಬಂದಿಲ್ಲ.ಅಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಇದ್ದಾಗ ಬಹಳ ಕಷ್ಟವಾಗುತ್ತದೆ. ಆದರೂ ಕೂಡ ಪೊಲೀಸರು ಎಲ್ಲವನ್ನು ನಿಯಂತ್ರಣ ಮಾಡಿದ್ದಾರೆ. ನೀರು ಎಲ್ಲರಿಗೂ ಬೇಕಾಗಿರುವಂತದ್ದು. ತುಮಕೂರು ಜಿಲ್ಲೆಗೆ ಎಷ್ಟು ಹಂಚಿಕೆ ಆಗಿದೆ ಅದನ್ನೇ ಬಳಸಿಕೊಳ್ಳಲು ಆಗುತ್ತಿಲ್ಲ. ಬಳಸಿಕೊಳ್ಳುವಂತಹ ಪ್ರಯತ್ನವನ್ನು ಸರ್ಕಾರ ಮಾಡಬೇಕಾಗಿದೆ ಎಂದರು.ಪೂರ್ಣ ಪ್ರಮಾಣದಲ್ಲಿ ನೀರು ತುಮಕೂರಿಗೆ ಒದಗಿಸಿಕೊಟ್ಟು ಮಿಕ್ಕಿದನ್ನು ಅವರಿಗೆ ನ್ಯಾಯಯುತವಾಗಿ ಕೊಡಬೇಕಾಗುತ್ತೆ. ವಿಷಯ ತಜ್ಞರು ಹಾಗೂ ನೀರಾವರಿ ತಜ್ಞರು ಎಲ್ಲರೂ ಸೇರಿ ಚಿಂತನೆ ಮಾಡಿ ಒಂದು ನಿರ್ಣಯಕ್ಕೆ ಬರಬೇಕು ಎಂದರು.