ಕನ್ನಡಪ್ರಭ ವಾರ್ತೆ ಮೈಸೂರು
ನಿರ್ದಿಗಂತ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ದೇಚಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ಡಾ.ಎಸ್.ಎಲ್. ಭೈರಪ್ಪನವರ ಸಂಸ್ಮರಣೆಯೊಂದಿಗೆ ಮಂಥನ- 14 ಕಾರ್ಯಕ್ರಮದಲ್ಲಿ ಅವರು, ಭೈರಪ್ಪನವರ ಬದುಕು ಬರಹ ಕುರಿತು ಮಾತನಾಡಿದರು.
ಅಸ್ಸಾಂನ ಅಕಾಡೆಮಿಯೊಂದು ಪ್ರಶಸ್ತಿ ನೀಡಿ ಗೌರವಿಸಿದಾಗ ಬಂದ 3 ಲಕ್ಷ ರೂ.ಗಳನ್ನು ಅಲ್ಲಿನ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಾಗ ದೊರೆತ 5 ಲಕ್ಷವನ್ನು ಕನ್ನಡ ಮಾಧ್ಯಮದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಬಳಸಿಕೊಳ್ಳಿ ಎಂದು ಹಣವನ್ನು ಹಿಂದಿರುಗಿಸಿದಂತಹ ಅನೇಕ ಉದಾಹರಣೆಗಳು ಡಾ. ಭೈರಪ್ಪ ಅವರು ಕೊಡುಗೈ ದಾನಿಗಳೆಂದು ಸಾರಿ ಹೇಳುತ್ತವೆ ಎಂದರು.ಕಾದಂಬರಿಯನ್ನು ಬರೆಯುವ ಮುನ್ನ ಅವರು ಮಾಡುತ್ತಿದ್ದಂತಹ ಅದ್ಯಯನ, ಸಂಶೋಧನೆ, ಇನ್ನಿತರ ಪೂರ್ವ ಸಿದ್ಧತೆಗಳು ಅವರಿಗಿದ್ದ ಬದ್ಧತೆಯನ್ನು ತೋರುತ್ತವೆ. ಅತಿ ಹೆಚ್ಚು ಓದುಗರನ್ನು ಹೊಂದಿದ್ದ ಹಿರಿಯ ಜೀವವಿಂದು ನೆನಪು ಮಾತ್ರ ಎಂದು ಅವರು ಹೇಳಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಡಾ. ಮಾಲತಿ, ದೇವರಾಜು ಪಿ. ಚಿಕ್ಕಹಳ್ಳಿ, ಡಾ.ಎಚ್.ಬಿ. ಬೆಟ್ಟಸ್ವಾಮಿ ಇದ್ದರು.