ಕನಕಗಿರಿ: ಸರ್ವಜ್ಞರ ತ್ರಿಪದಿಗಳು ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಿವೆಎಂದು ಕುಂಬಾರ ಸಮಾಜದ ಮುಖಂಡ ಸಿಂಧು ಬಲ್ಲಾಳ ಹೇಳಿದರು.
೧೬ನೇ ಶತಮಾನದಿಂದಲೂ ಸಾವಿರಾರು ತ್ರಿಪದಿಗಳನ್ನು ರಚಿಸಿದ ಸರ್ವಜ್ಞರ ಸರಳತೆ ಇಡೀ ಸಮಾಜವೇ ಬೆರಾಗಾಗುವಂತೆ ಮಾಡಿತ್ತು. ಸಾವಿರಕ್ಕೂ ಹೆಚ್ಚು ತ್ರಿಪದಿ ರಚಿಸಿ, ಸಮಾಜದೊಳಗಿನ ಡಾಂಬಿಕ, ಮೌಢ್ಯ, ಕೀಳರಿಮೆ, ಬೇಧ ಭಾವವನ್ನು ತೊಲಗಿಸಲು ಶ್ರಮಿಸಿದವರು.ಇಂತಹ ದಾರ್ಶನಿಕ ಶರಣರ ವೈಚಾರಿಕತೆ ನಾವೆಲ್ಲರೂ ತಲೆಬಾಗಿ ಅವರ ಹಾದಿಯಲ್ಲಿ ನಡೆದು ಸಮ-ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಬಿಜೆಪಿ-ಕಾಂಗ್ರೇಸ್ ಪಕ್ಷದ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಪ್ರಮುಖರಾದ ವೀರಭದ್ರಪ್ಪ ಕುಂಬಾರ, ಷಣ್ಮುಖಪ್ಪ, ಶರಣಪ್ಪ, ಪ್ರಕಾಶ ಚಕ್ರಸಾಲಿ, ಮಹಾಂತೇಶ, ಮರಿಯಪ್ಪ, ಮಂಜುನಾಥ, ಹನುಮಂತರೆಡ್ಡಿ, ಶೇಷಪ್ಪ ಪೂಜಾರ, ಸಣ್ಣ ಕನಕಪ್ಪ, ನರಸಪ್ಪ ಕುರುಗೋಡ, ಮಹಾಂತೇಶ ಸಜ್ಜನ ಸೇರಿದಂತೆ ಕುಂಬಾರ ಸಮಾಜದ ಮಹಿಳೆಯರು ಇದ್ದರು.