ಮುಸ್ಲೀಂರ ಸಂಖ್ಯೆ ಹೆಚ್ಚೆಂದು ತೋರಿಸುವ ಹುನ್ನಾರ

KannadaprabhaNewsNetwork | Published : Apr 17, 2025 12:09 AM

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮುಸ್ಲಂ ಓಲೈಕೆ ಮಿತಿ ಮೀರಿದೆ. ಜಾತಿವಾರು ಜನಗಣತಿಯಲ್ಲೂ ಮುಸ್ಲಿಂರ ಸಂಖ್ಯೆ ಹೆಚ್ಚಿದೆ ಎಂದು ತೋರಿಸುವ ಹುನ್ನಾರ ನಡೆಸಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮುಸ್ಲಂ ಓಲೈಕೆ ಮಿತಿ ಮೀರಿದೆ. ಜಾತಿವಾರು ಜನಗಣತಿಯಲ್ಲೂ ಮುಸ್ಲಿಂರ ಸಂಖ್ಯೆ ಹೆಚ್ಚಿದೆ ಎಂದು ತೋರಿಸುವ ಹುನ್ನಾರ ನಡೆಸಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.

ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಶಾಂತವಾಗಿರವ ರಾಜ್ಯವನ್ನು ಹದಗೆಡಿಸಲು ಹೊರಟಿದೆ. ಹಿಂದುಗಳನ್ನು ಒಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ರಾಜ್ಯವನ್ನು ಪಾಕಿಸ್ತಾನ ಮಾಡುವ ಹುನ್ನಾರ ನಡೆದಿದೆ. ಸರ್ಕಾರ ಮತ್ತೊಮ್ಮೆ ಜಾತಿವಾರು ಜನಗಣತಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಸದ್ಯ ಬಂದಿರುವ ವರದಿ ತಪ್ಪಾಗಿದೆ. ಗ್ಯಾರಂಟಿಗಳನ್ನು ಘೋಷಿಸಿರುವ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಸರ್ಕಾರ ನಡೆಸಲು ಹಣ ವಿಲ್ಲದಂತಹ ಪರಿಸ್ಥಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಶಾಲೆ ಉದ್ಘಾಟಿಸಿ: ತಾಲೂಕಿನ ಕೊಣ್ಣುರು ಮಡ್ಡಿ ಪ್ಲಾಟ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಡಾ.ಅಂಬೇಡ್ಕರ್‌ ವಸತಿ ಶಾಲೆಯನ್ನು ಉದ್ಘಾಟಿಸಲು ದಿನಾಂಕ ನಿಗದಿ ಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಸಮಯ ನೀಡಲು ಆಗುವುದಿಲ್ಲ. ನೀವೇ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅವರು ಇದು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗ ಬರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯವರು ಪರೀಕ್ಷೆಗಳು, ಪತ್ರಿಕೆಗಳ ವ್ಯಾಲುವೇಶನ್‌ ನೆಪ ಹೇಳುತ್ತಿದ್ದು ವಸತಿ ಶಾಲೆಯ ಉದ್ಘಾನೆ ವಿಳಂಬವಾಗುತ್ತಿದೆ. ಈ ವಿಷಯದಲ್ಲಿ ನನ್ನ ಮೇಲೆ ಆರೋಪ ಮಾಡವುದು ಸೂಕ್ತವಲ್ಲ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯ ಸ್ಥಿತಿ ಗಂಭೀರವಾಗಿದೆ. ಕೇವಲ ಶೇ.40 ಔಷಧಿಗಳನ್ನು ನೀಡಲಾಗುತ್ತಿದೆ. ಆಹಾರ ವಿತರಣೆಯಲ್ಲಿ ತೊಂದರೆಯಾಗಿದೆ. ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ ಎಂದರು.

ಚಿಕ್ಕಪಡಸಲಗಿಯವರೆಗೆ ಹಿಪ್ಪರಗಿ ಜಲಾಶಯದಿಂದ ಬಿಡುಗಡೆಗೊಳಿಸಿದ 0.20 ಟಿಎಂಸಿ ನೀರು ಬರಲಿಲ್ಲ. ನೀರು ಬಿಟ್ಟ ಸಂದರ್ಭದಲ್ಲಿ ಅಥಣಿ ತಾಲೂಕಿನ ಶಾಸಕರ ಪ್ರಭಾವಕ್ಕೆ ಮಣಿದು ನದಿ ತೀರದಲ್ಲಿ 24 ಗಂಟೆ ವಿದ್ಯುತ್‌ ಒದಗಿಸಲಾಗಿತ್ತು. ಅಲ್ಲಿಯ ರೈತರು ನೀರನ್ನು ಯಥೇಚ್ಯವಾಗಿ ಎತ್ತಿಕೊಂಡರು ಇಲ್ಲಿ ಮಾತ್ರ ನೀರು ಬರಲಿಲ್ಲ. ಎಲ್ಲ ತಾಲೂಕಿನ ರೈತರು ಒಂದೇ, ಭೇದ ಭಾವ ಮಾಡಬಾರದು.

ಜಗದೀಶ ಗುಡಗುಂಟಿ, ಶಾಸಕರು.

Share this article