ಬ್ಯಾಡಗಿ: ದೇಶದ ತ್ರಿವರ್ಣ ಧ್ವಜ ಪ್ರತಿಯೊಂದು ಕುಟುಂಬದ ಸ್ವಾಭಿಮಾನದ ಸಂಕೇತವಾಗಬೇಕು. ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಅದರ ಪರ ನಿಲ್ಲಬೇಕಾದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ತಿಳಿಸಿದರು.ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಬುಧವಾರ ಪುರಸಭೆಯಲ್ಲಿರುವ ಸ್ವಾತಂತ್ರ್ಯ ಸೇನಾನಿ ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಮಾತನಾಡಿ, ದೇಶ ಉಳಿದರೆ ಮಾತ್ರ ನಾವು ನೀವು ಉಳಿಯಲು ಸಾಧ್ಯ ಎಂದರು.ಆ. 14ರಂದು ಪಟ್ಟಣದಲ್ಲಿ ತಿರಂಗಾ ಧ್ವಜದೊಂದಿಗೆ ಬೃಹತ್ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ಈಗಾಗಲೇ ಹರ ಘರ್ ತಿರಂಗಾ ಯಾತ್ರೆ ಜಾರಿಯಲ್ಲಿದೆ. ಇದರೊಟ್ಟಿಗೆ ಗುರುವಾರ ಬೆಳಗ್ಗೆ ಬೈಕ್ ರ‍್ಯಾಲಿ ಸಹ ಹಮ್ಮಿಕೊಳ್ಳಲಾಗಿದೆ ಎಂದರು.ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ ಮಾತನಾಡಿ, ಇದೊಂದು ಪಕ್ಷಾತೀತ ಕಾರ‍್ಯಕ್ರಮವಾಗಿದ್ದು, ಎಲ್ಲ ನಾಗರಿಕರು ದೇಶಪ್ರೇಮಿಗಳು, ಯುವಕರು ಸ್ವಇಚ್ಛೆಯಿಂದ, ದೇಶಾಭಿಮಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ ಸರೋಜಾ ಉಳ್ಳಾಗಡ್ಡಿ, ಮೆಹಬೂಬ ಅಗಸನಹಳ್ಳಿ, ಗಾಯತ್ರಿ ರಾಯ್ಕರ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಶೆಟ್ಟಿ, ಮುಖಂಡ ಚಂದ್ರಶೇಖರ ಗದಗಕರ ಇತರರಿದ್ದರು.ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವಬ್ಯಾಡಗಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶುಕ್ರವಾರ ಕಾಂಗ್ರೆಸ್ಸಿನ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ತ್ರಿವರ್ಣ ಧ್ವಜದೊಂದಿಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಪಕ್ಷಾತೀತ ಕಾರ‍್ಯಕ್ರಮವಾಗಿದ್ದು, ಕಾಂಗ್ರೆಸ್ ಕಚೇರಿಯಿಂದ ತ್ರಿವರ್ಣ ಧ್ವಜದೊಂದಿಗೆ ಕಾರ್ಯಕರ್ತರು ನಾಗರಿಕರು ದೇಶಪ್ರೇಮಿಗಳು, ಯುವಕರು ಸ್ವ- ಇಚ್ಛೆಯಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ರಮೇಶ ಸುತ್ತಕೋಟಿ, ಎಸ್.ಎನ್. ಯಮನಕ್ಕನವರ, ಶಂಭನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ಸೋಮಶೇಖರ ಸಂಕಣ್ಣನವರ, ಖಾದರಸಾಬ್ ದೊಡ್ಮನಿ, ಪರಮೇಶಪ್ಪ ಅತ್ತಿಕಟ್ಟಿ ಇತರರಿದ್ದರು.